ಸರಕಾರಿ ಶಾಲೆಯ ಪ್ರಗತಿ ಗ್ರಾಮದ ಅಭಿವೃದ್ಧಿ – ಡಾ. ಎಚ್.ಎಲ್. ಮಂಜುನಾಥ್
ಕಾರ್ಕಳ : ಸರಕಾರಿ ಶಾಲೆಯ ಪ್ರಗತಿ ಗ್ರಾಮದ ಅಭಿವೃದ್ಧಿಯನ್ನು ಪ್ರತಿನಿಧಿಸುವುದು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಸಮುದಾಯ ಅಭಿವೃದ್ಧಿಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಚ್.ಎಲ್. ಮಂಜುನಾಥ್ ಅಭಿಪ್ರಾಯಪಟ್ಟರು.
ಅವರು ಜ. 25ರಂದು ಕೆರ್ವಾಶೆ ಮೈನ್ ಸ. ಹಿ. ಪ್ರಾ. ಶಾಲಾ ಅಮೃತ ಮಹೋತ್ಸವ ಸಮಿತಿ ಮತ್ತು ಯುವಜನ ವೇದಿಕೆಯ ಸಹಭಾಗಿತ್ವದಲ್ಲಿ ನಡೆಯುತ್ತಿರುವ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಸದುಪಯೋಗಪಡಿಸಿಕೊಳ್ಳಿ
ಶಾಲೆಯ ಅಮೃತ ಮಹೋತ್ಸವದ ಸಂಭ್ರಮದ ಈ ಸಂದರ್ಭದಲ್ಲಿ ವಿದ್ಯಾರ್ಥಿಗಳೊಮ್ಮೆ 75 ವರ್ಷಗಳ ಹಿಂದಿನ ಸ್ಥಿತಿಯ ಬಗ್ಗೆ ಯೋಚಿಸಬೇಕು. ಶಿಕ್ಷಣ ವ್ಯವಸ್ಥೆಯಲ್ಲಿನ ಬದಲಾವಣೆ, ಸೌಲಭ್ಯಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ವಿದ್ಯಾರ್ಥಿಗಳು ಸುಸಂಸ್ಕೃತರಾಗಬೇಕು. ಈ ನಿಟ್ಟಿನಲ್ಲಿ ಪೋಷಕರ ಪಾತ್ರವೂ ಮಹತ್ತವಾದುದು ಎಂದು ಮಂಜುನಾಥ್ ತಿಳಿಸಿದರು.
ಗುರುವಂದನೆ
ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸಿದ್ದ ಎಚ್. ಪದ್ಮನಾಭ ಅಡಿಗ , ಕೃಷ್ಣಮೂರ್ತಿ ಅಡಿಗ, ಅಂಡಾರು ಲೋಕಪಾಲ್ ಹೆಗ್ಡೆ, ಸದಾನಂದ ನಾಯಕ್, ಜಯಪಾಲ್ ಅಧಿಕಾರಿ, ಸುಜಾತ, ಪ್ರೇಮಾ ಕೆ., ಮನ್ಮಥ್ ಶೆಟ್ಟಿ, ಸುರೇಶ್ ಪೂಜಾರಿ, ನಳಿನಿ, ಗ್ರೇಸಿ ಜೂಲಿಯರ್ ಮಥಾಯ್, ಜ್ಯೋತಿ ಲೋಕೇಶ್, ಶ್ರೀರಂಗ ಜೋಶಿ, ರಜನಿ ದಿನೇಶ್ ಹಾಗೂ ಸುಜಯ ಅವರನ್ನು ಈ ಸಂದರ್ಭ ಸನ್ಮಾನಿಸಲಾಯಿತು. ಶಾಲೆಯಲ್ಲಿ ಶಿಕ್ಷಣ ಪಡೆದ ಮೊದಲ ಬ್ಯಾಚ್ನ (1947ರಲ್ಲಿ) ಬಾಬು ಪೂಜಾರಿ ಹಾಗೂ ಪದ್ಮನಾಭ್ ಅವರನ್ನು ಗೌರವಿಸಲಾಯಿತು.
ಮುಂಬಯಿ ಟ್ರೂಫಿಕ್ ಇಂಜಿನಿಯರಿಂಗ್ ಕಂಪೆನಿಯ ಆಡಳಿತ ನಿರ್ದೇಶಕ ಸುಧಾಕರ್ ಕೆ. ಬಂಗೇರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್, ಕೆರ್ವಾಶೆ ಗ್ರಾ. ಪಂ. ಸದಸ್ಯರಾದ ಉದಯ್ ಸೆರ್ವೆಗಾರ್, ಗಣೇಶ್ ಪೂಜಾರಿ, ತಾ. ಪಂ. ನಿಕಟ ಪೂರ್ವ ಅಧ್ಯಕ್ಷೆ ಸೌಭಾಗ್ಯ ಮಡಿವಾಳ, ಶ್ರಿ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕ ಪಿ. ಕೆ. ಜಗದೀಶ್ ಭಟ್, ಭಾಲಕೃಷ್ಣ ಭಟ್, ಕ್ಷೇತ್ರ ಸಮನ್ವಯಾಧಿಕಾರಿ ಪ್ರವೀಣ್ ಶೆಟ್ಟಿ, ದೈ.ಕಿ. ಶಿಕ್ಷಣ ಪರಿವೀಕ್ಷಣಾಧಿಕಾರಿ ರವಿಚಂದ್ರ ಕಾರಂತ, ಶಿಕ್ಷಣ ಸಂಯೋಜಕ ಬಾಲಕೃಷ್ಣ ನಾಯಕ್, ಉದಯ್ ಶೆಟ್ಟಿ, ದೊಂಬಯ್ಯ ಮೂಲ್ಯ, ವಿಶ್ವನಾಥ ಶೆಣೈ, ರಮೇಶ್ ಎಸ್., ಶಾಲಾ ವಿದ್ಯಾರ್ಥಿ ನಾಯಕಿ ಸುರಕ್ಷಾ ಆರ್, ಕುಲಾಲ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ಕೃಷ್ಣ ನಾಯ್ಕ್ ಸ್ವಾಗತಿಸಿದರು. ಶಿಕ್ಷಕಿ ಸುಹಾಸಿನಿ ವಂದಿಸಿದರು.
