ಅತ್ತೂರು ಬಸಿಲಿಕಾ : 3 ನೇ ದಿನದ ಧರ್ಮಬೋಧನೆ

ದೇವರ ಮೇಲಿನ ನಂಬಿಕೆ ಒಳಿತಿಗೆ ಕಾರಣವಾಗುತ್ತದೆ – ಲೋರೆನ್ಸ್‌ ಮುಕುಝಿ

ಕಾರ್ಕಳ : ಬದುಕಿನಲ್ಲಿ ಎದುರಾಗುವ ಕಷ್ಟಕಾರ್ಪಣ್ಯಗಳಿಗೆ ದೃತಿಗಡೆದೆ ದೇವರ ಮೇಲೆ ನಂಬಿಕೆಯಿಟ್ಟು ಮುನ್ನಡೆಯಬೇಕು. ದೇವರ ಮೇಲಿನ ಭರವಸೆ ಜೀವನದಲ್ಲಿ ಒಳಿತನ್ನು ಮಾಡುತ್ತದೆ ಎಂದು ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ  ಡೊ. ಲೋರೆನ್ಸ್‌ ಮುಕುಝಿ ಪ್ರಬೋಧನೆ  ನೀಡಿದರು. ಅವರು ಅತ್ತೂರು ಸಂತ ಲಾರೆನ್ಸ್‌ ಬಸಿಲಿಕದ ಮಹೋತ್ಸವದ ಮೂನೇ ದಿನದ ಪ್ರಮುಖ ಬಲಿಪೂಜೆ ನೆರವೇರಿಸಿ ಮಾತನಾಡಿದರು.

ದಿನದ ಬಲಿಪೂಜೆ
ಬೆಳಗ್ಗೆ 10 ಗಂಟೆಯ ಬಲಿಪೂಜೆಯನ್ನು ಮಂಗಳೂರು ಧರ್ಮಪ್ರಾಂತ್ಯದ ಧರ್ಮಗುರು ವಂ| ಮ್ಯಾಕ್ಸಿಮ್‌  ನೊರೊನ್ಹಾ, ಇತರೆ ಬಲಿಪೂಜೆಗಳನ್ನು ವಂ| ಆಲ್ವಿನ್‌ ಸಿಕ್ವೇರಾ ಕಟ್ಕೆರೆ, ವಂ| ವೀರೇಶ್‌ ಮೋರಸ್‌ ಶಿವಮೊಗ್ಗ, ವಂ| ತೋಮಸ್‌ ರೋಶನ್‌ ಡಿಸೋಜಾ ಗಂಗೊಳ್ಳಿ, ವಂ| ಆಂಡ್ರು ಡಿಸೋಜಾ ಬೋಂದೆಲ್‌, ಅಂತಿಮ ಬಲಿಪೂಜೆಯನ್ನು ವಂ| ವಿಕ್ಟರ್‌ ಡಿಮೆಲ್ಲೊ ಪಾನೀರ್‌ ನೆರವೇರಿಸುವ ಮೂಲಕ ದಿನದ ಕಾರ್ಯಕ್ರಮ ಸಂಪನ್ನಗೊಂಡವು.

ಅಸ್ವಸ್ಥರಿಗಾಗಿ ವಿಶೇಷವಾಗಿ ಪೂಜೆ ಪ್ರಾರ್ಥನೆಗಳನ್ನು ಸಲ್ಲಿಸಲಾಯಿತು. ಮಾಜಿ ಶಾಸಕ ಅಭಯಚಂದ್ರ ಜೈನ್ ಹಾಗೂ ವಿನಯ್‌ ಕುಮಾರ್‌ ಸೊರಕೆ ಕ್ಷೇತ್ರಕ್ಕೆ ಭೇಟಿ ನೀಡಿದರು. ಮಹೋತ್ಸವದ ನಾಲ್ಕನೇ ದಿನ (ಬುಧವಾರ) ಬೆಳಿಗ್ಗೆ 8,10,12 ಹಾಗೂ ಮಧ್ಯಾಹ್ನ 2 ಸಂಜೆ 4, 6 ಹಾಗೂ ರಾತ್ರಿ 8 ಗಂಟೆಗೆ ಬಲಿಪೂಜೆಗಳು ನಡೆಯಲಿದೆ. ಮಧ್ಯಾಹ್ನ 12 ಗಂಟೆಯ ಬಲಿಪೂಜೆ ಕನ್ನಡ ಭಾಷೆಯಲ್ಲಿದ್ದು, 10 ಗಂಟೆಯ ವಿಶೇಷ ಬಲಿಪೂಜೆಯನ್ನು ಮಂಗಳೂರಿನ ನಿವೃತ್ತ ಧರ್ಮಾಧ್ಯಕ್ಷ ಡೊ| ಅಲೋಶಿಯಸ್‌ ಪ್ಲಾವ್‌ ಡಿಸೋಜಾ ನೆರವೇರಿಸಿ ಪ್ರಭೋಧನೆ ನೀಡಲಿದ್ದಾರೆ.

ಮಾಜಿ ಸಚಿವ ವಿನಯ್‌ ಕುಮಾರ್‌ ಸೊರಕೆ ಕ್ಷೇತ್ರಕ್ಕೆ ಭೇಟಿ ನೀಡಿದ ಸಂದರ್ಭ
ಮಾಜಿ ಶಾಸಕ ಅಭಯಚಂದ್ರ ಜೈನ್‌ ಕ್ಷೇತ್ರಕ್ಕೆ ಭೇಟಿ ನೀಡಿದ ಸಂದರ್ಭ

Latest Articles

error: Content is protected !!