ಮೋದಿ ಕುರಿತ ಬಿಬಿಸಿ ಡಾಕ್ಯುಮೆಂಟರಿ ನಿರ್ಬಂಧ ಸಮರ್ಥಿಸಿಕೊಂಡ ಅನಿಲ್ ಆ್ಯಂಟೋನಿ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ!

ನವದೆಹಲಿ : ಪ್ರಧಾನಿ ಮೋದಿಯವರು ವಿವಾದಾತ್ಮಕ ಬಿಬಿಸಿ ಸಾಕ್ಷ್ಯಚಿತ್ರ ನಿರ್ಬಂಧವನ್ನು ಸಮರ್ಥಿಸಿಕೊಂಡಿದ್ದ ಕಾಂಗ್ರೆಸ್ ಹಿರಿಯ ನಾಯಕ ಎಕೆ ಆ್ಯಂಟೋನಿ ಅವರ ಪುತ್ರ ಅನಿಲ್ ಕೆ ಆ್ಯಂಟೋನಿ ಅವರು ಕಾಂಗ್ರೆಸ್ ಪಕ್ಷವನ್ನು ತೊರೆದಿದ್ದಾರೆ. ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ರಾಜೀನಾಮೆ ಪತ್ರವನ್ನು ಹಂಚಿಕೊಂಡಿರುವ ಅನಿಲ್ ಆ್ಯಂಟೋನಿಯವರು, ರಾಜೀನಾಮೆ ನೀಡುವ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಪ್ರಧಾನಿ ಮೋದಿ ಕುರಿತ ಬಿಬಿಸಿ ಡಾಕ್ಯುಮೆಂಟರಿ ಕುರಿತು ಮಾಡಿರುವ ಟ್ವೀಟ್ ಅನ್ನು ವಾಪಸ್ ಪಡೆಯಬೇಕೆಂಬ ಅಸಹಿಷ್ಣುತೆಯ ಫೋನ್ ಕರೆಗಳಿಂದ ಅಸಮಾಧಾನಗೊಂಡಿರುವ ಅನಿಲ್ ಕೆ. ಆ್ಯಂಟೋನಿ, ಕಾಂಗ್ರೆಸ್ ಪಕ್ಷವನ್ನು ತೊರೆದಿರುವುದಾಗಿ ವರದಿ ತಿಳಿಸಿದೆ.

Latest Articles

error: Content is protected !!