74ನೇ ಗಣರಾಜ್ಯೋತ್ಸವ ಮುಖ್ಯ ಅತಿಥಿ ಈಜಿಪ್ಟ್ ಅಧ್ಯಕ್ಷ ದೆಹಲಿಗೆ ಆಗಮನ : ಪ್ರಧಾನಿ ಮೋದಿಯಿಂದ ಸ್ವಾಗತ

0

ನವದೆಹಲಿ : 74ನೇ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲು ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿ ಅವರು ಇಂದು ನವದೆಹಲಿಗೆ ಆಗಮಿಸಿದ್ದು, ಅವರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆತ್ಮೀಯವಾಗಿ ಸ್ವಾಗತಿಸಿದರು. 2014ರಲ್ಲಿ ಈಜಿಪ್ಟ್​​ನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುವ ಅಬ್ದೆಲ್ಲ ಫತ್ತಾಹ್​ ಅವರು, ಇದೇ ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡಿದ್ದಾರೆ.
ಭಾರತ-ಈಜಿಪ್ಟ್​ ರಾಷ್ಟ್ರಗಳ ನಡುವಿನ ರಾಜತಾಂತ್ರಿಕ ಸಂಬಂಧ 75ನೇ ವರ್ಷಕ್ಕೆ ಕಾಲಿಟ್ಟ ಸಂದರ್ಭದಲ್ಲೇ, ಭಾರತದ 74ನೇ ಗಣರಾಜ್ಯೋತ್ಸವಕ್ಕೆ ಈಜಿಪ್ಟ್​ ಅಧ್ಯಕ್ಷರು ಆಗಮಿಸುತ್ತಿರುವುದು ಬಹಳ ಪ್ರಾಮುಖ್ಯತೆ ಪಡೆದಿದೆ. ಅಬ್ದುಲ್​ ಫತ್ತಾಹ್​ ಎಲ್​-ಸಿಸಿ ಅವರು ತಮ್ಮ ದೇಶದ 5 ಸಚಿವರು, ಹಿರಿಯ ಅಧಿಕಾರಿಗಳೊಂದಿಗೆ ದೆಹಲಿಗೆ ಬಂದಿದ್ದಾರೆ. ಇವರು ಜ.27ರವರೆಗೆ ಭಾರತದಲ್ಲೇ ಇರಲಿದ್ದು, ಜ.26ರಂದು ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಗೌರವ ಸ್ವೀಕರಿಸಲಿದ್ದಾರೆ ಹಾಗೂ ಪಥಸಂಚಲನ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಲಿದ್ದಾರೆ.

Previous articleಕೆರ್ವಾಶೆ ಮೈನ್‌ ಶಾಲಾ ಅಮೃತ ಮಹೋತ್ಸವ
Next articleಫೆ.10 ರಿಂದ 24ರವರೆಗೆ ವಿಧಾನಮಂಡಲ ಜಂಟಿ ಮತ್ತು ಬಜೆಟ್​ ಅಧಿವೇಶನ

LEAVE A REPLY

Please enter your comment!
Please enter your name here