ಅಮೆರಿಕದಲ್ಲಿ ಮತ್ತೆ ಗುಂಡಿನ ದಾಳಿ : 7 ಸಾವು

48 ತಾಸಿನಲ್ಲಿ ಎರಡನೇ ಘಟನೆ

ಕ್ಯಾಲಿಫೋರ್ನಿಯಾ: ಉತ್ತರ ಕ್ಯಾಲಿಫೋರ್ನಿಯಾದ 2 ಕಡೆ ಸಂಭವಿಸಿದ ಗುಂಡಿನ ದಾಳಿಗಳಲ್ಲಿ 7 ಮಂದಿ ಮೃತಪಟ್ಟಿದ್ದು, ಹಲವು ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ. ಉತ್ತರ ಕ್ಯಾಲಿಫೋರ್ನಿಯಾದ ಹಾಫ್‌ ಮೂನ್‌ ಬೇ ಎಂಬಲ್ಲಿ ವ್ಯಕ್ತಿಯೊಬ್ಬ ಗುಂಡು ಹಾರಾಟ ನಡೆಸಿದ್ದು, ಘಟನೆಯ ಸ್ಥಳದಲ್ಲಿ ಝಾವೊ ಚುನ್‌ಲೀ ಎಂಬ ಚೈನೀಸ್‌- ಅಮೆರಿಕನ್‌ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
ಅಣಬೆ ಫಾರ್ಮ್‌ ಒಂದರಲ್ಲಿ ಕೆಲಸ ಮಾಡುತ್ತಿದ್ದ ಚೈನೀಸ್‌ ಕೆಲಸಗಾರರ ಮೇಲೆ ಈತ ಗುಂಡಿನ ದಾಳಿ ನಡೆಸಿದ್ದಾನೆ. ಎರಡು ಪ್ರತ್ಯೇಕ ಘಟನೆಗಳು ಸ್ಯಾನ್ ಫ್ರಾನ್ಸಿಸ್ಕೋದ ದಕ್ಷಿಣದ ಸಮೀಪದ ಕೃಷಿ ಪ್ರದೇಶಗಳಲ್ಲಿಯೇ ಸಂಭವಿಸಿವೆ. ಮೌಂಟೇನ್ ಮಶ್ರೂಮ್ ಫಾರ್ಮ್‌ನಲ್ಲಿನ ದಾಳಿಯಲ್ಲಿ ನಾಲ್ವರು ಸಾವಿಗೀಡಾಗಿದ್ದು, ಓರ್ವ ಗಾಯಗೊಂಡಿದ್ದಾರೆ. ರೈಸ್ ಫಾರ್ಮ್‌ನಲ್ಲಿ ನಡೆದ ದಾಳಿಯಲ್ಲಿ ಮೂವರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಎರಡು ದಿನಗಳ ಹಿಂದೆಯಷ್ಟೇ ಲಾಸ್ ಏಂಜಲೀಸ್ ಬಳಿಯ ಡ್ಯಾನ್ಸ್ ಸ್ಟುಡಿಯೊದಲ್ಲಿ ಬಂದೂಕುಧಾರಿಯೊಬ್ಬ ಗುಂಡಿನ ದಾಳಿ ನಡೆಸಿ 11 ಜನರನ್ನು ಸಾಯಿಸಿದ್ದ.

Latest Articles

error: Content is protected !!