ಕಾರ್ಕಳ : ಮಿಯ್ಯಾರು ಗ್ರಾಮದ ಬೋರ್ಕಟ್ಟೆ ಮತ್ತು ಕುಂಟಿ ಬೈಲು ವಾಸುದೇವ ಗೇರು ಕಾರ್ಖಾನೆಗಳಿಗೆ ಜ. 24 ರಂದು ಪ್ರಿಯಾಂಕ ಸುನಿಲ್ ಕುಮಾರ್ ಭೇಟಿ ನೀಡಿ ಪರಶುರಾಮ ಥೀಮ್ ಪಾರ್ಕ್ ಉದ್ಘಾಟನಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ನೀಡಿದರು. ಈ ಸಂದರ್ಭ ಕಾರ್ಖಾನೆಯ ಮಾಲಕರಾದ ವಿಠಲ್ ಹೆಗ್ಡೆ ಮತ್ತು ಪ್ರಕಾಶ್, ಮಿಯ್ಯಾರು ಗ್ರಾಮ ಸಮಿತಿ ಅಧ್ಯಕ್ಷ ಪ್ರಶಾಂತ್ ಪೂಜಾರಿ, ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಬಲಿಪ, ಜಿ. ಪಂ. ನಿಕಟಪೂರ್ವ ಸದಸ್ಯೆ ದಿವ್ಯಶ್ರೀ ಗಿರೀಶ್ ಅಮೀನ್, ಮಹಿಳಾ ಮೋರ್ಚಾದ ಅಧ್ಯಕ್ಷರಾದ ಮಾನಸ ಹಾಗೂ ನಿರ್ಮಲಾ, ಗ್ರಾ. ಪಂ. ಉಪಾಧ್ಯಕ್ಷೆ ರೇವತಿ ನಾಯ್ಕ್, ಬೂತ್ ಅಧ್ಯಕ್ಷರಾದ ಗಿರೀಶ್ ಪೈ ಮತ್ತು ನವೀನ್ ಕುಮಾರ್, ಅಲ್ಪ ಸಂಖ್ಯಾತ ಮೋರ್ಚಾದ ಅಧ್ಯಕ್ಷ ಜೆರಾಲ್ಡ್ ಡಿಸಿಲ್ವ, ಪಕ್ಷದ ಪ್ರಮುಖರು ಹಾಗೂ ಸದಸ್ಯರು ಉಪಸ್ಥಿತರಿದ್ದರು.
