ಪರಶುರಾಮನ ವೇಷದಲ್ಲಿ ಸಂಭ್ರಮಿಸಿದ ಅಂಗನವಾಡಿ ಪುಟಾಣಿಗಳು

ಕಾರ್ಕಳ : ತುಳುನಾಡ ಸೃಷ್ಟಿಕರ್ತ ಪರಶುರಾಮನ ಕಂಚಿನ ಪುತ್ಥಳಿ ಹಾಗೂ ಪರಶುರಾಮ ಥೀಂ ಪಾರ್ಕ್‌ ಲೋಕಾರ್ಪಣೆಯ ಅಂಗವಾಗಿ ಕಾರ್ಕಳ ಹಾಗೂ ಹೆಬ್ರಿ ತಾಲೂಕಿನ ಅಂಗನವಾಡಿ ಕೇಂದ್ರಗಳ ಪುಟಾಣಿಗಳಿಗೆ ಪರಶುರಾಮ ಛದ್ಮವೇಷ ಸ್ಪರ್ಧೆ ಆಯೋಜಿಸಲಾಗಿತ್ತು. ಉಭಯ ತಾಲೂಕಿನ ಎಲ್ಲ ಅಂಗನವಾಡಿ ಕೇಂದ್ರಗಳಲ್ಲಿ ಸ್ಪರ್ಧೆ ನಡೆಯಿತು. 500 ಕ್ಕೂ ಅಧಿಕ ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿದರು. ವಿಜೇತ ಮಕ್ಕಳಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ಹಾಗೂ ಪರಶುರಾಮ ದೇವರ ಸ್ಮರಣಿಕೆ ನೀಡಿ ಗೌರವಿಸಕಲಾಯಿತು.

ಹೆಬ್ರಿ ಶಿವಪುರದ ಅಂಗನವಾಡಿ ಕೇಂದ್ರದಲ್ಲಿ ಜ. 24 ರಂದು ಛದ್ಮವೇಷ ಸ್ಪರ್ಧೆ ಜರುಗಿತು. ತಾ. ಪಂ. ನಿಕಟ ಪೂರ್ವ ಅಧ್ಯಕ್ಷ ರಮೇಶ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಪಂಚಾಯತ್‌ ಸದಸ್ಯರಾದ ಶೋಭಾ ಶೆಟ್ಟಿ, ಇಂದಿರಾ ಸುರೇಶ್ ಶೆಟ್ಟಿ ಶೃಂಗೇರಿ ಬೈಲ್, ಬಾಲ ವಿಕಾಸ ಸಮಿತಿ ಅಧ್ಯಕ್ಷೆ ಸುನೀತ ಉಪಸ್ಥಿತರಿದ್ದರು. ತೀರ್ಪುಗಾರರಾಗಿ ಶಿವಪುರ ಸ. ಹಿ ಪ್ರಾ. ಶಾಲೆಯ ಮುಖ್ಯ ಶಿಕ್ಷಕಿ ಗುಲಾಬಿ ಹಾಗೂ ಶಿಕ್ಷಕಿ ವೀಣಾ ಸಹಕರಿಸಿದರು. ಪ್ರಥಮ, ದ್ವಿತೀಯ, ತೃತೀಯ ಸ್ಥಾನ ವಿಜೇತ ವಿದ್ಯಾರ್ಥಿಗಳಿಗೆ ಸಚಿವ ವಿ. ಸುನಿಲ್ ಕುಮಾರ್ ಹಾಗೂ ಉಳಿದ ಸ್ಪರ್ಧಾಳುಗಳಿಗೆ ಸುರೇಶ್ ಶೆಟ್ಟಿ ಶೃಂಗೇರಿ ಬೈಲು ಇವರು ಕೊಡ ಮಾಡಿದ ಬಹುಮಾನ ವಿತರಣೆ ಮಾಡಲಾಯಿತು. ಅಂಗನವಾಡಿ ಕಾರ್ಯಕರ್ತೆ ಮಂಜುಳಾ ಕಾರ್ಯಕ್ರಮದ ನಿರೂಪಿಸಿದರು. ಸಹ ಕಾರ್ಯಕರ್ತೆ ವಸಂತಿ ವಂದಿಸಿದರು. ಈ ಸಂದರ್ಭ ಮಕ್ಕಳ ಪೋಷಕರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.
ಕಡ್ತಲ ಅಂಗನವಾಡಿಯಲ್ಲಿ ನಡೆದ ಛದ್ಮವೇಷ ಸ್ಪರ್ಧೆಯ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಾಲತಿ ದಿನೇಶ್ ಕುಲಾಲ್, ಬಾಲವಿಕಾಸ ಸಮಿತಿಯ ಅಧ್ಯಕ್ಷೆ ಜಯಶ್ರೀ, ಆರೋಗ್ಯ ಇಲಾಖಾ ಸಿಬ್ಬಂದಿ ಸೌಮ್ಯ, ರಮ್ಯಾ, ಅಂಗನವಾಡಿ ಕಾರ್ಯಕರ್ತೆಯರಾದ ಪುಷ್ಪ ಹಾಗೂ ಸುಮಾ ಮತ್ತು ಮಕ್ಕಳ ಪೋಷಕರು ಉಪಸ್ಥಿತರಿದ್ದರು.
ಗೋವಿಂದೂರು ಅಂಗನವಾಡಿ ಕೇಂದ್ರದಲ್ಲಿ ನಡೆದ ಛದ್ಮವೇಷ ಸ್ಪರ್ಧೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆ, ಮಕ್ಕಳ ಪೋಷಕರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಸಾಣೂರು, ಮುದ್ದಣ್ಣನಗರ, ದೇಂದಬೆಟ್ಟು,‌ ಪಡ್ಡಾಯಿಗುಡ್ಡೆ ಅಂಗನವಾಡಿಗಳ ಸಹಯೋಗದೊಂದಿಗೆ ಸಾಣೂರು ಅಂಗನವಾಡಿ ಕೇಂದ್ರದಲ್ಲಿ ಛದ್ಮವೇಷ ಸ್ಪರ್ಧೆ ನಡೆಯಿತು. ಸಾಣೂರು ಗ್ರಾ. ಪಂ. ಉಪಾಧ್ಯಕ್ಷ ಪ್ರಸಾದ್ ಪೂಜಾರಿ ಕಾರ್ಯಕ್ರಮದ ಉದ್ಘಾಟಿಸಿದರು. ವಿಜೇತ ಮಕ್ಕಳಿಗೆ ಸ್ಮರಣಿಕೆ ಹಾಗೂ ಎಲ್ಲಾ ಮಕ್ಕಳಿಗೆ ಸಮಾಧಾನಕರ ಬಹುಮಾನ ನೀಡಿ ಗೌರವಿಸಲಾಯಿತು. ಸಾಣೂರು ಹಿ. ಪ್ರಾ. ಶಾಲೆಯ ಮುಖ್ಯ ಶಿಕ್ಷಕಿ ಉಷಾ ತಾಮನ್ಕರ್ ಹಾಗೂ ಮುದ್ದಣ್ಣನಗರ ಶಾಲಾ ಶಿಕ್ಷಕಿ ಗೀತಾ ಉಪಸ್ಥಿತರಿದ್ದರು. ದೇಂದಬೆಟ್ಟು ಅಂಗನವಾಡಿ ಶಿಕ್ಷಕಿ ಪ್ರಾರ್ಥಿಸಿದರು. ಸಾಣೂರು ಅಂಗನವಾಡಿ ಶಿಕ್ಷಕಿ ಸ್ವಾಗತಿಸಿ, ಮುದ್ದಣ್ಣನಗರ ಅಂಗನವಾಡಿ ಶಿಕ್ಷಕಿ ವಂದಿಸಿದರು.

Latest Articles

error: Content is protected !!