ಕ್ರಿಯೇಟಿವ್‌ ವಿದ್ಯಾಸಂಸ್ಥೆಯಲ್ಲಿ ಸುಭಾಷ್‌ಚಂದ್ರ ಬೋಸ್‌ ಜನ್ಮ ದಿನಾಚರಣೆ

ಕಾರ್ಕಳ : ‌ನನಗೆ ರಕ್ತ ಕೊಡಿ ನಾನು ನಿಮಗೆ ಸ್ವಾತಂತ್ರ್ಯ ಕೊಡಿಸುತ್ತೇನೆ ಎಂದು ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣವನ್ನೇ ಮುಡಿಪಾಗಿಟ್ಟ ಅಪ್ರತಿಮ ಸಾಹಿಸಿ ನೇತಾಜಿ ಸುಭಾಷ್‌ಚಂದ್ರ ಬೋಸ್‌ ಅವರ ದೇಶಪ್ರೇಮ ಯುವಜನತೆಗೆ ಮಾದರಿ ಎಂದು ಹಿಂದಿ ಉಪನ್ಯಾಸಕ ವಿನಾಯಕ್‌ ಜೋಗ್‌ ಅಭಿಪ್ರಾಯಪಟ್ಟರು. ಅವರು ಜ. 23 ರಂದು ಕ್ರಿಯೇಟಿವ್‌ ವಿದ್ಯಾಸಂಸ್ಥೆಯಲ್ಲಿ ನೇತಾಜಿ ಸುಭಾಷ್‌ಚಂದ್ರ ಬೋಸ್‌ ಅವರ ಜನ್ಮಾದಿನಾಚರಣೆಯ ಅಂಗವಾಗಿ ನಡೆದ ಪರಾಕ್ರಮ್‌ ದಿವಸ್‌ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ಸಂದರ್ಭ ಸಂಸ್ಥೆಯ ಉಪನ್ಯಾಸಕರಾದ ನಂದೀಶ್‌ ಹೆಚ್.‌ ಬಿ., ಉಮೇಶ್‌, ರಾಘವೇಂದ್ರ ಬಿ. ರಾವ್‌, ಅಗ್ರಜ ರಾಘವ್‌, ಶಿವಕುಮಾರ್‌, ರಾಜೇಶ್‌ ಶೆಟ್ಟಿ, ಗಿರೀಶ್‌ ಭಟ್‌ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ಕನ್ನಡ ಉಪನ್ಯಾಸಕ ರಾಮಕೃಷ್ಣ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು.

Latest Articles

error: Content is protected !!