ಶಾಲೆಗಳಲ್ಲಿ ಭಗವದ್ಗೀತೆ ಬೋಧನೆ

ಧರ್ಮ ಗ್ರಂಥಗಳ ಆಯ್ದ ಭಾಗಗಳ ಕಲಿಕೆಗೆ ಕ್ರಮ

ಭೋಪಾಲ್ : ಮಧ್ಯಪ್ರದೇಶದ ಶಾಲೆಗಳಲ್ಲಿ ಭಗವದ್ಗೀತೆ, ರಾಮಾಯಣ, ಮಹಾಭಾರತ ಮತ್ತು ಇತರ ಧಾರ್ಮಿಕ ಪುಸ್ತಕಗಳ ಆಯ್ದ ಭಾಗಗಳನ್ನು ಬೋಧಿಸಲು ತೀರ್ಮಾನಿಸಲಾಗಿದೆ.
ರಾಮಾಯಣ, ಮಹಾಭಾರತ, ವೇದ, ಉಪನಿಷತ್ತು ಮತ್ತು ಶ್ರೀಮದ್ ಭಗವದ್ಗೀತೆ ನಮ್ಮ ಅಮೂಲ್ಯ ಗ್ರಂಥಗಳು. ಈ ಪುಸ್ತಕಗಳು ಮನುಷ್ಯನನ್ನು ನೈತಿಕವಾಗಿ ಮತ್ತು ಪರಿಪೂರ್ಣನನ್ನಾಗಿ ಮಾಡುವ ಸಾಮರ್ಥ್ಯ ಹೊಂದಿವೆ. ಆದ್ದರಿಂದ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ನಮ್ಮ ಧಾರ್ಮಿಕ ಪುಸ್ತಕಗಳ ಬೋಧನೆಯನ್ನು ಜಾರಿಗೊಳಿಸಲಾಗುವುದು” ಎಂದು ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.
ಶಾಲೆಗಳಲ್ಲಿ ಈ ಪವಿತ್ರ ಪುಸ್ತಕಗಳ ಆಯ್ದ ಭಾಗಗಳನ್ನು ಕಲಿಸುವ ಮೂಲಕ, ನಾವು ನಮ್ಮ ಮಕ್ಕಳನ್ನು ನೈತಿಕತೆ ಹೊಂದಿರುವ ಮತ್ತು ಪರಿಪೂರ್ಣ ಮನುಷ್ಯರನ್ನಾಗಿ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

Latest Articles

error: Content is protected !!