ಸುವಿಚಾರ ಸದ್ಗುಣಗಳನ್ನು ಮೈಗೂಡಿಸುವುದು – ಜೀವರ್ಗಿಸ್ ಮಾರ್ ಮಕರಿಯೋಶ್ ಕಲಾಯಿಲ್
ಕಾರ್ಕಳ : ಸುವಿಚಾರ ನಮ್ಮಲ್ಲಿ ಸದ್ಗುಣಗಳನ್ನು ಮೈಗೂಡಿಸುವುದು. ಈ ಮೂಲಕ ಸಮಾಜಮುಖಿಯಾಗಿ ಬಾಳಲು ಆಧಾರವಾಗುವುದು ಎಂದು ಪುತ್ತೂರು ಸೀರೊ ಮಲಂಕರ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಜೀವರ್ಗೀಸ್ ಮಾರ್ ಮಕರಿಯೊಸ್ ಕಲಯಿಲ್ ಹೇಳಿದರು. ಅವರು ಅತ್ತೂರು ಸಂತ ಲಾರೆನ್ಸ್ ಬಸಿಲಿಕಾದ ಮಹೋತ್ಸವದ ಎರಡನೇ ದಿನದ ಬಲಿಪೂಜೆ ನೆರವೇರಿಸಿ ಪ್ರಬೋಧನೆ ನೀಡಿದರು.
ದಿನದ ಬಲಿಪೂಜೆ
ದಿನದ ಬಲಿಪೂಜೆಗಳನ್ನು ವಂ. ಸುನಿಲ್ ಡೊಮಿನಿಕ್ ಲೋಬೊ ಪೆರಂಪಳ್ಳಿ, ವಂ. ಕ್ಲಿಫರ್ಡ್ ಫೆರ್ನಾಂಡಿಸ್ ಕುಲಶೇಕರ, ವಂ. ಪ್ರದೀಪ್ ಕಾರ್ಡೋಜಾ ಮೂಡುಬೆಳ್ಳೆ, ವಂ. ಆಲ್ಬರ್ಟ್ ಕ್ರಾಸ್ತಾ ಪಿಯುಸ್ನಗರ, ವಂ. ಸಂತೋಷ್ ರೊಡ್ರಿಗಸ್ ಮಂಗಳೂರು ನೆರವೇರಿಸಿದರು. ದಿನದ ಅಂತಿಮ ಬಲಿಪೂಜೆಯನ್ನು ವಂ. ಡೊ. ಲೆಸ್ಲಿ ಡಿಸೋಜಾ ಶಿರ್ವ ರಾತ್ರಿ 8 ಗಂಟೆಗೆ ನೆರವೇರಿಸಿ ಮಹೋತ್ಸವದ ಎರಡನೇ ದಿನದ ಕಾರ್ಯಕ್ರಮ ಸಂಪನ್ನಗೊಳಿಸಿದರು.
ಮಹೋತ್ಸವದ ಮೂರನೇ ದಿನ (ಮಂಗಳವಾರ) ಬೆಳಿಗ್ಗೆ 8, 10, 12 ಹಾಗೂ ಮಧ್ಯಾಹ್ನ 2, 4, 6 ಮತ್ತು 8 ಗಂಟೆಗೆ ಬಲಿಪೂಜೆಗಳು ನೆರವೇರಲಿವೆ. ಸಂಜೆ 6 ಗಂಟೆಗೆ ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಲೋರೆನ್ಸ್ ಮುಕುಝಿ ಕನ್ನಡದಲ್ಲಿ ಬಲಿಪೂಜೆ ನೆರವೇರಿಸಲಿದ್ದಾರೆ.

