ಪರಶುರಾಮ ಥೀಮ್ ಪಾರ್ಕಿಗೆ ಅಮಿತ್ ಶಾ ಶುಭಹಾರೈಕೆ

ಕಾರ್ಕಳ : ಜ. 27 ರಿಂದ 29 ರವರೆಗೆ ನಡೆಯಲಿರುವ ಪರಶುರಾಮ ಥೀಮ್‌ ಪಾರ್ಕ್‌ ಲೋಕಾರ್ಪಣಾ ಕಾರ್ಯಕ್ರಮಕ್ಕೆ ಆಹ್ವಾನಿಸಲು ಕಳುಹಿಸಿದ ಆಮಂತ್ರಣ ಪತ್ರಿಕೆಯನ್ನು ಸ್ವೀಕರಿಸಿದ ಕೇಂದ್ರ ಗೃಹ ಮಂತ್ರಿ ಅಮಿತ್‌ ಶಾ ಅವರು ಪತ್ರದ ಮೂಲಕ ಥೀಮ್‌ ಪಾರ್ಕ್‌ ಉದ್ಘಾಟನಾ ಸಮಾರಂಭಕ್ಕೆ ಶುಭಕೋರಿದ್ದಾರೆ.

ಶ್ರೀ ವಿ. ಸುನಿಲ್ ಕುಮಾರ್ ಜಿ, ಜನವರಿ 27, 2023 ರಂದು ಪರಶುರಾಮ್ ಥೀಮ್ ಪಾರ್ಕ್ ಉದ್ಘಾಟನೆಗೆ ನನ್ನನ್ನು ಆಹ್ವಾನಿಸುವ ನಿಮ್ಮ ಪತ್ರವನ್ನು ಸ್ವೀಕರಿಸಲು ನನಗೆ ತುಂಬಾ ಸಂತೋಷವಾಗಿದೆ. 33 ಅಡಿಯ ಪರಶುರಾಮನ ಕಂಚಿನ ಪ್ರತಿಮೆಯೊನ್ನೊಳಗೊಂಡು ಆಧ್ಯಾತ್ಮಿಕ ಗುಣಲಕ್ಷಣಗಳೊಂದಿಗೆ ಸುಪ್ರಸಿದ್ಧ ಪರಶುರಾಮ ಥೀಮ್‌ ಪಾರ್ಕ್‌ ನಿರ್ಮಾಣ ಮಾಡಿರುವುದು ಸಂತಸದ ವಿಚಾರ.

ಗಣರಾಜ್ಯೋತ್ಸವ ಹಾಗೂ ಇತರೆ ಪ್ರಮುಖ ಬದ್ಧತೆಗಳಿಂದಾಗಿ ಪರಶುರಾಮ ಥೀಮ್‌ ಪಾರ್ಕ್‌ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಲು ನನಗೆ ಸಾಧ್ಯವಾಗುತ್ತಿಲ್ಲ. ಆದಾಗ್ಯೂ, ನಾನು ಥೀಮ್‌ ಪಾರ್ಕ್‌ ಲೋಕಾರ್ಪಣಾ ಕಾರ್ಯಕ್ರಮದ ಯಶಸ್ಸಿಗೆ ಮತ್ತು ಎಲ್ಲಾ ಸಂಘಟಕರಿಗೆ ಶುಭ ಹಾರೈಸುತ್ತೇನೆ ಎಂದು ಪತ್ರದಲ್ಲಿ ಅಮಿತ್‌ ಶಾ ಪ್ರತಿಕ್ರಿಯಿಸಿದ್ದಾರೆ.

Latest Articles

error: Content is protected !!