ಒಬ್ಬನೇ ವ್ಯಕ್ತಿಯನ್ನು ಮದುವೆಯಾದ ಅವಳಿ ಸಹೋದರಿಯರ ವಿರುದ್ಧ ಕೇಸ್‌

ವಿವಾಹದ ಮರುದಿನವೇ ಬಿತ್ತು ಕಾನೂನು ಕುಣಿಕೆ

ಮುಂಬಯಿ : ಅವಳಿ ಸಹೋದರಿಯರನ್ನು ಒಬ್ಬನೇ ವ್ಯಕ್ತಿ ಮದುವೆಯಾದ ಸುದ್ದಿ ನಿನ್ನೆ ಇಡೀ ದಿನ ಭಾರಿ ವೈರಲ್‌ ಆಗಿತ್ತು. ಆದರೆ ಇದೀಗ ಈ ಸಹೋದರಿಯರ ವಿರುದ್ಧ ಸೆಕ್ಷನ್ 494ರ ಅಡಿಯಲ್ಲಿ ಅಪರಾಧ ಪ್ರಕರಣ ದಾಖಲಿಸಲಾಗಿದೆ.
ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯಲ್ಲಿ ವಿವಾಹ ನಡೆದಿದ್ದು, ಇದರ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದೆ. ಕಲಿಯುಗದಲ್ಲೂ, ಒಬ್ಬ ವ್ಯಕ್ತಿಯನ್ನು ಅವಳಿ ಸಹೋದರಿಯರು ಮದುವೆಯಾಗಿರುವುದು ಅಚ್ಚರಿಗೆ ಕಾರಣವಾಗಿದೆ. 36 ವರ್ಷ ವಯಸ್ಸಿನ ಅವಳಿ ಸಹೋದರಿಯರಾದ ರಿಂಕಿ ಮತ್ತು ಪಿಂಕಿ, ಅತುಲ್ ಎಂಬ ಯುವಕನನ್ನು ಮದುವೆಯಾಗಿದ್ದಾರೆ.‌ ಇವರಿಬ್ಬರೂ ಮುಂಬಯಿಯಲ್ಲಿ ಐಟಿ ಕಂಪನಿಯಲ್ಲಿ ಉದ್ಯೋಗಿಗಳು. ಒಬ್ಬನೇ ಯುವಕನನ್ನು ಇಬ್ಬರೂ ವಿವಾಹವಾಗುವ ನಿರ್ಧಾರಕ್ಕೆ ಎರಡೂ ಕುಟುಂಬಗಳು ಒಪ್ಪಿಕೊಂಡಿವೆಯಂತೆ. ರಿಂಕಿ, ಪಿಂಕಿ ಮತ್ತು ಅತುಲ್ ಬಾಲ್ಯದಿಂದಲೂ ಒಂದೇ ಮನೆಯಲ್ಲಿ ಒಟ್ಟಿಗೆ ವಾಸಿಸುತ್ತಿದ್ದಾರೆ. ರಿಂಕಿ-ಪಿಂಕಿಯ ತಂದೆಯ ಮರಣದ ನಂತರ ಅತುಲ್ ಇವರ ಕುಟುಂಬಕ್ಕೆ ಸಹಾಯ ಮಾಡಿದ್ದನಂತೆ.
ಇದು ರಹಸ್ಯ ವಿವಾಹವೇನೂ ಆಗಿರಲಿಲ್ಲ. ವ್ಯವಸ್ಥಿತವಾಗಿ ನಡೆದ ವಿವಾಹ ಸಮಾರಂಭದಲ್ಲಿ ವಧು-ವರರ ಹೆಸರನ್ನು ಕೂಡಾ ಬರೆಯಲಾಗಿತ್ತು. ಹಿಂದೂ ಸಂಪ್ರದಾಯದಂತೆ ವಿವಾಹದ ವಿಧಿವಿಧಾನನಡೆದಿದೆ. ಮದುವೆಗೆ ಎರಡೂ ಮನೆಯವರಿಂದ ಯಾವುದೇ ವಿರೋಧ ಇಲ್ಲದಿದ್ದರೂ ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಆದರೆ, ಪೊಲೀಸರಿಗೆ ದೂರು ನೀಡಿದವರು ಯಾರು ಎಂಬುದು ಸ್ಪಷ್ಟವಾಗಿಲ್ಲ.





























































































































































































































error: Content is protected !!
Scroll to Top