10 ವರ್ಷದ ಹಿಂದೆಯೇ ಸಿದ್ರಾಮುಲ್ಲಾಖಾನ್ ಎಂದು ಹೇಳುತ್ತಿದ್ದೆ

ಕಾಂಗ್ರೆಸ್‌ ಕಾಲೆಳೆದ ಸಿ.ಟಿ.ರವಿ

ಚಿಕ್ಕಮಗಳೂರು : ಸಿದ್ರಾಮುಲ್ಲಾಖಾನ್ ಎಂದು ಹೇಳುತ್ತಿದ್ದಂತೆ ಕಾಂಗ್ರೆಸ್ಸಿಗರಿಗೆ ಹೀಗೆ ಉರಿಯುತ್ತದೆ ಎಂದು ಗೊತ್ತಾಗಿದ್ದರೆ 10 ವರ್ಷದ ಮೊದಲೇ ಹೇಳುತ್ತಿದ್ದೆ ಎಂದು ಶಾಸಕ ಸಿ.ಟಿ.ರವಿ ಕಾಂಗ್ರೆಸ್ಸಿಗರ ಕಾಲೆಳೆದಿದ್ದಾರೆ. ಸಿದ್ರಾಮುಲ್ಲಾಖಾನ್ ಅನ್ನೋದು ಬೈಗುಳವಾ…? ಅದು ಬೈಗುಳ ಅಲ್ಲಾ. ನಿಮಗೆ ಉರಿ ಹತ್ತಿದ್ಯಾಕೆ ಎಂದು ಕಾಂಗ್ರೆಸ್ಸಿಗರನ್ನು ಕಿಚಾಯಿಸಿದ್ದಾರೆ. ನೀವು ದೇಶದ ಪ್ರಧಾನಿಗೆ ಕೊಲೆಗಡುಕ, ನರಹಂತಕ, ರಾವಣ, ಭಸ್ಮಾಸುರ ಎಂದೆಲ್ಲಾ ಕರೆದಿದ್ದೀರಿ. ಸಿದ್ರಾಮುಲ್ಲಾಖಾನ್ ಎಂಬ ಒಂದೇ ಒಂದು ಹೇಳಿಕೆಗೆ ಉರಿ ಹತ್ತಿಸಿಕೊಂಡಿದ್ದಾರೆ. ಇದು ನಿಮ್ಮ ಭಾವನೆಗೆ ಕೊಟ್ಟ ಬಿರುದು ಎಂದು ತಿಳಿಯಬಹುದಿತ್ತು. ನಾನು ಹಾಗೆ ಭಾವಿಸುತ್ತಾರೆ ಎಂದು ತಿಳಿದಿದ್ದೆ. ಯಡಿಯೂರಪ್ಪನವರಿಗೆ ರಾಜಾಹುಲಿ ಅಂತಾರೆ. ಸಿದ್ದರಾಮಯ್ಯನವರಿಗೆ ಹುಲಿಯಾ ಅಂತಾರೆ. ಹಾಗೆ ಇದು ಕೂಡ ಒಂದು ಬಿರುದು ಎಂದರು.
ಕಾಂಗ್ರೆಸ್ ಸರ್ಕಾರವಿದ್ದಾಗ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭ ದತ್ತಪೀಠಕ್ಕೆ ಹಿಂದೂ ಅರ್ಚಕರ ನೇಮಕ ಮಾಡುವ ಅವಕಾಶವಿತ್ತು ಏಕೆ ಮಾಡಲಿಲ್ಲ ನ್ಯಾಯ ಎತ್ತಿ ಹಿಡಿದಿದ್ದರೂ ಸಾಕಾಗಿತ್ತು ಹಾಗಾಗಿ ಚಿಕ್ಕಮಗಳೂರಿಗೆ ನೀವು ಬರುವ ಮುನ್ನ ಈ ಪ್ರಶ್ನೆಗೆ ಉತ್ತರಿಸಿ ನಂತರ ಬನ್ನಿ ಎಂದು ಸಿ.ಟಿ ರವಿ ಸವಾಲು ಹಾಕಿದ್ದಾರೆ. ಚಿಕ್ಕಮಗಳೂರಿಗೆ ಯಾರು ಬೇಕಾದರೂ ಬರಬಹುದು, ಬರುವ ಮುನ್ನ ಇಲ್ಲಿಯ ಜನರಿಗೆ ಏಕೆ ಅನ್ಯಾಯ ಮಾಡಿದ್ದೇವೆಂದು ಈ ಪ್ರಶ್ನೆಗೆ ಉತ್ತರ ಕೊಡಬೇಕು. ಮುಲ್ಲಾ ಮೂಲಕ ಪೂಜೆಯಾಬೇಕೆಂದು ಅಂದು ನೀವು ಆದೇಶ ಮಾಡಿದ್ದೀರಿ ಹಾಗಾಗಿ ನಿಮಗೆ ಸಿದ್ರಾಮುಲ್ಲಾಖಾನ್ ಎಂದು ಹೆಸರು ಇಟ್ಟೆ ಎಂದಿದ್ದಾರೆ.
ಅವರು ಯಾರಿಗೆ ಏನು ಬೇಕಾದರೂ ಅನ್ನಬಹದು ಇನ್ನೊಬ್ಬರು ಅವರ ಬಗ್ಗೆ ಒಂದು ಶಬ್ದವೂ ಮಾತನಾಡುವ ಹಾಗಿಲ್ಲ ಇದು ಇಂಟಾಲರೆನ್ಸ್ ಎಂದರು.
ಎಂ.ಬಿ.ಪಾಟೀಲ್ ಅವರು ಇದನ್ನು ಮುಂದುವರಿಸಿದರೆ ಓಡಾಡುವುದು ಕಷ್ಟವಾಗಬಹುದು ಎಂಬ ಎಚ್ಚರಿಕೆಗೆ ಪ್ರತಿಕ್ರಿಯಿಸಿದ ಸಿ.ಟಿ.ರವಿ, ಅವರೇನು ಬೆದರಿಕೆ ಹಾಕ್ತಾರಾ. ಪ್ರಜಾಪ್ರಭುತ್ವದಲ್ಲಿ ಈ ಬೆದರಿಕೆ ನಡೆಯಲ್ಲ. ಅವರು ಶ್ರೀಮಂತರೇ ಇರಬಹುದು, ಪಾಳೇಗಾರರೇ ಇರಬಹುದು. ನಾನೊಬ್ಬ ಸಾಮಾನ್ಯ ರೈತನ ಮಗ. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಅಂಬೇಡ್ಕರ್ ಕೊಟ್ಟಿದ್ದು ಒಂದೇ ಒಂದು ವೋಟು. ಈ ಪಾಳೇಗಾರಿಕೆ ಮನಸ್ಥಿತಿಯನ್ನು ಎಂ.ಬಿ.ಪಾಟೀಲರು ಬದಲಾಯಿಸಿಕೊಳ್ಳಬೇಕು. ನೀವು ಮನಸ್ಥಿತಿ ಬದಲಾಯಿಸಿಕೊಳ್ಳದಿದ್ದರೆ ನಿಮ್ಮ ಚಾಲೆಂಜ್ ಸ್ವೀಕರಿಸುತ್ತೇನೆ. ನಿಮ್ಮೂರಿಗೆ ಬರ್ತೀನಿ. ನಾನು ಏನು ಹೇಳಬೇಕು ಅಂದುಕೊಂಡಿದ್ದೇನೋ ಅದನ್ನ ನಿಮ್ಮೂರಿನಲ್ಲೇ ಹೇಳ್ತೀನಿ. ನಿಮ್ಮ ಮುಖದ ಎದುರೇ ಹೇಳ್ತೀನಿ. ನಿಮ್ಮಷ್ಟು ಶ್ರೀಮಂತಿಕೆ ನನ್ನ ಬಳಿ ಇಲ್ಲ ಅಂತ ನನಗೆ ಗೊತ್ತು. ಆದರೆ, ನಿಮ್ಮ ಶ್ರೀಮಂತಿಕೆ ದರ್ಪವನ್ನ ಜನರ ಮೇಲೆ ತೋರಿಸಬೇಡಿ. ನಿಮ್ಮ ಶ್ರೀಮಂತಿಕೆ ದರ್ಪ ಇಲ್ಲಿ ನಡೆಯಲ್ಲ ಎಂದಿದ್ದಾರೆ.









































































































































































error: Content is protected !!
Scroll to Top