ರೈಲ್ವೇಯಲ್ಲಿ ಅಪ್ರೆಂಟಿಸ್‌ಷಿಪ್‌ಗೆ ಅರ್ಜಿ ಆಹ್ವಾನ

ಹೊಸದಿಲ್ಲಿ : ಪಶ್ಚಿಮ ಕೇಂದ್ರ ರೈಲ್ವೇ 2521 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.
ಹುದ್ದೆಗಳ ವಿವರ
ಒಟ್ಟು ಹುದ್ದೆಗಳ ಸಂಖ್ಯೆ- 2521
JBP ವಿಭಾಗ- 884 ಹುದ್ದೆಗಳು
BPL ವಿಭಾಗ- 614 ಹುದ್ದೆಗಳು
ಕೋಟಾ ವಿಭಾಗ- 685
WRS ಕೋಟಾ-160 ಹುದ್ದೆಗಳು
CRWS BPL- 158 ಹುದ್ದೆಗಳು
HQ JBP- 20 ಹುದ್ದೆಗಳು
ಅರ್ಹತಾ ಮಾನದಂಡ : ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ ಶೇ. 50 ಅಂಕಗಳೊಂದಿಗೆ ಯಾವುದೇ ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿ ಪರೀಕ್ಷೆ ಅಥವಾ ಅದರ ಸಮಾನ ಪರೀಕ್ಷೆಯಲ್ಲಿ (10+2 ಪರೀಕ್ಷಾ ವ್ಯವಸ್ಥೆಯ ಅಡಿಯಲ್ಲಿ) ಉತ್ತೀರ್ಣರಾಗಿರಬೇಕು. ಇದರೊಂದಿಗೆ, NCVT/SCVT ನೀಡಿದ ಅಧಿಸೂಚಿತ ವಿಷಯದಲ್ಲಿ ರಾಷ್ಟ್ರೀಯ ಟ್ರೇಡ್ ಪ್ರಮಾಣಪತ್ರ ಹೊಂದಿರಬೇಕು.
ವಯೋಮಿತಿ: ಅಭ್ಯರ್ಥಿಗಳ ವಯಸ್ಸು 15 ವರ್ಷದಿಂದ 24 ವರ್ಷಗಳ ನಡುವೆ ಇರಬೇಕು.
ಆಯ್ಕೆ ಪ್ರಕ್ರಿಯೆ: 10ನೇ ತರಗತಿಯಲ್ಲಿ ಪಡೆದ ಸರಾಸರಿ ಅಂಕಗಳು ಅಥವಾ ಅದರ ಸಮಾನ ಪರೀಕ್ಷೆ ಮತ್ತು ITI/ಟ್ರೇಡ್ ಅಂಕಗಳ ಆಧಾರದ ಮೇಲೆ ಆಯ್ಕೆಯನ್ನು ಮಾಡಲಾಗುತ್ತದೆ. ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳು ಡಾಕ್ಯುಮೆಂಟ್ ವೆರಿಫಿಕೇಶನ್ (ಡಿವಿ)ಗೆ ಹಾಜರಾಗಬೇಕಾಗುತ್ತದೆ.
ವೆಬ್‌ಸೈಟ್‌ : wcr.indianrailways.gov.in
ಪ್ರಮುಖ ದಿನಾಂಕ: ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- ಡಿಸೆಂಬರ್ 17, 2022









































































































































































error: Content is protected !!
Scroll to Top