ಬೈಲೂರಿನಲ್ಲಿ ಹಾಡುಹಗಲೇ ಮನೆಗೆ ನುಗ್ಗಿ ಕಳ್ಳತನ

ಕಾರ್ಕಳ : ಯಾರೂ ಇಲ್ಲದ ಸಂದರ್ಭ ಮನೆಯೊಳಗೆ ನುಗ್ಗಿ ಕಳ್ಳತನ ಮಾಡಿದ ಘಟನೆ ಬೈಲೂರಿನ ಬಡಗುತಿಟ್ಟು ಗ್ರಾಮದ ಸವಿತಾ ಎಂಬುವವರ ಮನೆಯಲ್ಲಿ ನ. 29ರಂದು ಸಂಭವಿಸಿದೆ. 11:30 ರಿಂದ 1:15 ನಡುವೆ ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ ಕಳ್ಳರು ಹಿಂಬಾಗಿಲಿನ ಮೂಲಕ ಮನೆಯೊಳಗೆ ಬಂದಿದ್ದಾರೆ. ಕಪಾಟಿನಲ್ಲಿದ್ದ 4 ಪವನ್ ಚಿನ್ನದ ಚೈನ್, ಒಂದು ಪವನ್ ಚಿನ್ನದ ಚೈನ್, 4 ಗ್ರಾಂ ನ ಬೆಂಡೋಲೆ, 4 ಗ್ರಾಂ ನ ಬ್ರೆಸ್ಲೈಟ್, 3 ಗ್ರಾಂ ನ ಬ್ರೆಸ್ಲೈಟ್, 4 ಗ್ರಾಂ ನ ಉಂಗುರ, 2 ಗ್ರಾಂ ನ ಉಂಗುರ ಸೇರಿದಂತೆ ಒಟ್ಟು 57 ಗ್ರಾಂ ಚಿನ್ನಾಭರಣ ಹಾಗೂ 11,000 ರೂ. ಹಣವನ್ನು ಕಳವು ಮಾಡಿದ್ದಾರೆ. ಕಳವಾದ ಸ್ವತ್ತುಗಳ ಒಟ್ಟು ಮೌಲ್ಯ 2,31,000 ರೂ. ಆಗಿರುತ್ತದೆ. ಈ ಕುರಿತು ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest Articles

error: Content is protected !!