ಕುಕ್ಕುಂದೂರು : ಕುಕ್ಕುಂದೂರು ಗ್ರಾ. ಪಂ. 2022-23ನೇ ಸಾಲಿನ ತ್ರೈಮಾಸಿಕ ಕೆಡಿಪಿ ಸಭೆಯು ನ.28 ರಂದು ಗ್ರಾ. ಪಂ. ಸಭಾಂಗಣದಲ್ಲಿ ಜರುಗಿತು. ವಿವಿಧ ಇಲಾಖೆಗಳಿಂದ ಆಗಮಿಸಿದ ಅಧಿಕಾರಿಗಳು ಇಲಾಖೆಯ ಸವಲತ್ತು ಹಾಗೂ ಪ್ರಗತಿ ವರದಿಯನ್ನು ಮಂಡಿಸಿದರು. 24 ಇಲಾಖೆಗಳು ತ್ರೈಮಾಸಿಕ ಸಭೆಯಲ್ಲಿ ಹಾಜರಾಗಬೇಕಾಗಿದ್ದು, ಕೇವಲ 11 ಇಲಾಖೆಗಳು ಮಾತ್ರ ಭಾಗವಹಿಸಿದ್ದು, ಬಾರದೇ ಇರುವ ಅಧಿಕಾರಿಗಳಿಗೆ ಕಡ್ಡಾಯವಾಗಿ ಹಾಜರಾಗುವಂತೆ ಹಾಗೂ ತಿಳುವಳಿಕೆ ಪತ್ರ ನೀಡುವಂತೆ ಸಭೆಯ ಅಧ್ಯಕ್ಷತೆ ವಹಿಸಿದ್ದ ಶಶಿಮಣಿ ಸಂಪತ್ ಸುವರ್ಣ ತಿಳಿಸಿದರು.
ಅಂಗನವಾಡಿ ಮೇಲ್ವಿಚಾರಕಿ ಉಮಾ, ಸಮಾಜ ಕಲ್ಯಾಣ ಇಲಾಖೆಯಿಂದ ಚೇತನ ಜೆ. ಶೆಟ್ಟಿ ಮತ್ತು ಪ್ರಭಾ ಡಿ., ಮೆಸ್ಕಾಂ ಇಲಾಖೆಯಿಂದ ಸಂಪತ್, ಸರಕಾರಿ ಪ್ರೌಢ ಶಾಲೆ ನಕ್ರೆ ಮುಖ್ಯೋಪಾಧ್ಯಾಯಿನಿ ವಿಜಯಾ ಹೆಗಡೆ, ಆರೋಗ್ಯ ಕಾರ್ಯಕರ್ತೆ ಕುಮುದಾ, ಸಂಜೀವಿನಿ ಎಂಬಿಕೆ ಸುಮನಾ ಎಂ. ರಾವ್, ಗ್ರಾಮಕರಣಿಕ ಸಂಗಮೇಶ್, ಹಿರ್ಗಾನ ವ್ಯ.ಸೇ.ಸ.ಸಂಘ ಕುಕ್ಕುಂದೂರು ಸುದೀಪ್ ಶೆಟ್ಟಿ, ಲ್ಯಾಂಪ್ ಸೊಸೈಟಿ ಉದಯ ನಾಯ್ಕ, ಸಹಾಯಕ ಕೃಷಿ ಅಧಿಕಾರಿ ಸಿದ್ದಪ್ಪ ಹಾಗೂ ನಕ್ರೆ ಮಹಿಳಾ ಹಾಲು ಉತ್ಪಾದಕರ ಸಂಘದಿಂದ ಶಾಂತಿ ಪೂಜಾರಿ ಇಲಾಖೆಯ ಪ್ರಗತಿ ವರದಿಯನ್ನು ಮಂಡಿಸಿದರು. ಸಭೆಯಲ್ಲಿ ಉಪಾಧ್ಯಕ್ಷ ಅನಿಲ್ ಪೂಜಾರಿ ಉಪಸ್ಥಿತರಿದ್ದು, ಅಭಿವೃದ್ದಿ ಅಧಿಕಾರಿ ಪ್ರದೀಪ್ ಕುಮಾರ್ ಶೆಟ್ಟಿ ಸ್ವಾಗತಿಸಿ, ಕಾರ್ಯದರ್ಶಿ ನಿರ್ಮಲ ನಿರೂಪಿಸಿ, ವಂದಿಸಿದರು.