ದ್ವಿಚಕ್ರ ವಾಹನ ಅಪಘಾತ : ಸವಾರನಿಗೆ ಗಾಯ

ಗಾಯಾಳನ್ನು ಉಪಚರಿಸಿ ಆಸ್ಪತ್ರೆಗೆ ದಾಖಲಿಸುವಲ್ಲಿ ನೆರವಾದ ಸಚಿವ ಸುನೀಲ್‌ ಕುಮಾರ್‌

ಕಾರ್ಕಳ : ಬೈಪಾಸ್‌ ಕೃಷ್ಣಗಿರಿ ಬಳಿ ಸ್ಕೂಟಿ (KA 20 EZ 9499)ಯೊಂದು ರಸ್ತೆಬದಿಯ ಕಲ್ಲಿಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಗಾಯಗೊಂಡ ಘಟನೆ ನ. 30ರಂದು ಸಂಜೆ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಸ್ಕೂಟಿ ಮುಂಭಾಗ ನಜ್ಜುಗುಜ್ಜಾಗಿದೆ. ಈ ವೇಳೆ ಇದೇ ಮಾರ್ಗವಾಗಿ ಸಾಗುತ್ತಿದ್ದ ಸಚಿವ ಸುನೀಲ್‌ ಕುಮಾರ್‌ ಗಾಯಾಳನ್ನು ಉಪಚರಿಸಿ, ಕಾರಿನಲ್ಲಿ ಆಸ್ಪತ್ರೆಗೆ ದಾಖಲಿಸುವಲ್ಲಿ ನೆರವಾದರು. ಸಚಿವರ ಗನ್‌ಮ್ಯಾನ್‌ ಪ್ರಭಾಕರ್‌, ಹರೀಶ್‌ ಅಂಚನ್‌, ಶಶಿಕಾಂತ್‌ ರೆಂಜಾಳ ಸಹಕರಿಸಿದರು.

Latest Articles

error: Content is protected !!