ಗುಜರಾತ್‌ನಲ್ಲಿ ನಾಳೆ ಮೊದಲ ಹಂತದ ಮತದಾನ

ಮೂರು ಪಕ್ಷಗಳಿಂದ ಮತಬೇಟೆಗೆ ಭರ್ಜರಿ ಪ್ರಚಾರ;ಖರ್ಗೆಗೆ ಅಗ್ನಿ ಪರೀಕ್ಷೆ

ಹೊಸದಿಲ್ಲಿ : ಗುಜರಾತ್ ವಿಧಾನಸಭೆಗೆ ಗುರುವಾರ (ಡಿ.1) ಮೊದಲ ಹಂತದ ಚುನಾವಣೆ ನಡೆಯಲಿದೆ. ಆಡಳಿತಾರೂಢ ಬಿಜೆಪಿ ಮತ್ತು ಆಮ್‌ ಆದ್ಮಿ ಪಾರ್ಟಿ ಗೆಲುವಿಗಾಗಿ ಇತರ ಅಬ್ಬರ ಪ್ರಚಾರ ನಡೆಸಿವೆ. ಬಹಿರಂಗ ಪ್ರಚಾರದಲ್ಲಿ ಕಾಂಗ್ರೆಸ್‌ ತುಸು ಮಂಕಾಗಿತ್ತು. ಆದರೆ ಕಾಂಗ್ರೆಸ್‌ ಗ್ರಾಮೀಣ ಭಾಗಗಳಲ್ಲಿ ನೇರವಾಗಿ ಮತದಾರರನ್ನು ತಲುಪಲು ಯತ್ನಿಸಿದೆ.
ಆಕಾಶದೆತ್ತರದ ಭರವಸೆಗಳು ಮತ್ತು ಆರೋಪಗಳು ಮತ್ತು ಪ್ರತ್ಯಾರೋಪಗಳ ಮಾಡುತ್ತಿದ್ದ ಸಭೆಗಳು ಮತ್ತು ರೋಡ್ ಶೋಗಳು ಇಂದಿಗೆ ಮುಕ್ತಾಯಗೊಂಡಿವೆ.
182 ಸ್ಥಾನಗಳ ವಿಧಾನಸಭೆಯಲ್ಲಿ 89 ಸ್ಥಾನಗಳಿಗೆ ಮೊದಲ ಹಂತದಲ್ಲಿ ಗುರುವಾರ ಮತದಾನ ನಡೆಯಲಿದೆ. 89 ಸ್ಥಾನಕ್ಕೆ 788 ಮಂದಿ ಸ್ಪರ್ಧಿಸಿದ್ದು, ಉಳಿದ 93 ಸ್ಥಾನಗಳಿಗೆ ಡಿ.5 ರಂದು ಮತದಾನ ನಡೆಯಲಿದೆ. ಡಿ.8 ರಂದು ಫಲಿತಾಂಶ ಪ್ರಕಟವಾಗಲಿದೆ. ಈ ಬಾರಿ ಬಿಜೆಪಿ, ಕಾಂಗ್ರೆಸ್ ಆಪ್ ಚುನಾವಣಾ ಕದನದಲ್ಲಿ ಹೋರಾಟ ಮಾಡುತ್ತಿವೆ.
ಬಿಜೆಪಿ ದಾಖಲೆಯ ಏಳನೇ ಅವಧಿಗೆ ಅಧಿಕಾರಕ್ಕೆ ತರಲು ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಭರ್ಜರಿ ರ್ಯಾಲಿಗಳು ಮತ್ತು ರೋಡ್‌ಶೋಗಳನ್ನು ನಡೆಸುತ್ತಿದ್ದಾರೆ.
ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ, ಉತ್ತರ ಪ್ರದೇಶ, ಹಿಮಾಚಲ ಪ್ರದೇಶ, ಅಸ್ಸಾಂ, ಗೋವಾ ಮುಖ್ಯಮಂತ್ರಿಗಳು, ಕೇಂದ್ರ ಸಚಿವರಾದ ಸ್ಮೃತಿ ಇರಾನಿ, ಮನ್ಸುಖ್ ಮಾಂಡವಿಯಾ, ಪರ್ಷೋತ್ತಮ್ ರೂಪಾಲಾ, ರವಿಶಂಕರ್ ಪ್ರಸಾದ್, ಪಿಯೂಷ್ ಗೋಯಲ್, ನಿತಿನ್ ಗಡ್ಕರಿ ಅವರು ಮೊದಲ ಹಂತದ ಚುನಾವಣೆಯ ಪ್ರಚಾರದಲ್ಲಿ ಪಾಲ್ಗೊಂಡಿದ್ದರು.ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಮತ್ತು ಮುಖಂಡರಾದ ಮನೋಜ್ ತಿವಾರಿ ಮತ್ತು ರವಿ ಕಿಶನ್ ಕೂಡ ಪಕ್ಷದ ಅಭ್ಯರ್ಥಿಗಳಿಗೆ ಬೆಂಬಲ ಪಡೆಯಲು ರ್ಯಾಲಿಗಳಲ್ಲಿ ಪಾಲ್ಗೊಂಡಿದ್ದರು.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಪಕ್ಷದ ಪ್ರಚಾರದಲ್ಲಿ ತೊಡಗಿದ್ದರು. ಪಕ್ಷದ ನಾಯಕ ರಾಹುಲ್ ಗಾಂಧಿ ರಾಜ್ಯದಲ್ಲಿ ಎರಡು ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಿದ್ದರು.
ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿ ಸಂಚಾಲಕ ಅರವಿಂದ್ ಕೇಜ್ರಿವಾಲ್ ಮತ್ತು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ವಿವಿಧ ಭರವಸೆಗಳನ್ನು ನೀಡುತ್ತಲೇ ರಾಜ್ಯದಲ್ಲಿ ವ್ಯಾಪಕ ಪ್ರಚಾರ ನಡೆಸಿದ್ದರು.

ಖರ್ಗೆಗೆ ಅಗ್ನಿ ಪರೀಕ್ಷೆ
ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್‌ ಅಧ್ಯಕ್ಷರಾದ ಬಳಿಕ ನಡೆಯುತ್ತಿರುವ ಮೊದಲ ವಿಧಾನಸಭೆ ಚುನಾವಣೆ ಇದು.ಹೀಗಾಗಿ ಖರ್ಗೆ ಪಾಲಿಗೆ ಈ ಚುನಾವಣೆ ಅಗ್ನಿಪರೀಕ್ಷೆಯಾಗಲಿದೆ. ಕಾಂಗ್ರೆಸ್ಸೇತರ ಅಧ್ಯಕ್ಷರ ಕೈಯಲ್ಲಿ ಪಕ್ಷ ದಡ ಸೇರುತ್ತದೆಯೇ ಎನ್ನುವುದನ್ನು ತಿಳಿಯಲು ಈ ಚುನಾವಣೆ ಫಲಿತಾಂಶ ಕಾರಣವಾಗಲಿದೆ. ಆದರೆ ಖರ್ಗೆಯವರಿಗೆ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಲು ಬಹಳ ಕಡಿಮೆ ಸಮಯ ಸಿಕ್ಕಿರುವುದರಿಂದ ಎಲ್ಲ ಭಾರವನ್ನು ಅವರ ಒಬ್ಬರ ತಲೆಗೆ ಕಟ್ಟುವುದು ಸರಿಯಲ್ಲ ಎನ್ನುವ ಅಭಿಪ್ರಾಯವೂ ಇದೆ.





























































































































































































































error: Content is protected !!
Scroll to Top