Saturday, December 10, 2022
spot_img
Homeಸುದ್ದಿಡಿ.1ರಿಂದ ಹೆಜಮಾಡಿ ಟೋಲ್‌ ಶುಲ್ಕ ಏರಿಕೆ

ಡಿ.1ರಿಂದ ಹೆಜಮಾಡಿ ಟೋಲ್‌ ಶುಲ್ಕ ಏರಿಕೆ

ಸುರತ್ಕಲ್‌ ಟೋಲ್‌ ಶುಲ್ಕ ಸೇರಿಸಿ ವಸೂಲು ಮಾಡಲು ಆದೇಶ

ಮಂಗಳೂರು: ಸುರತ್ಕಲ್‌ ಟೋಲ್‌ಗೇಟ್‌ ರದ್ದಾಗುತ್ತಿದೆ ಎಂಬ ಖುಷಿ ಬಹಳ ದಿನ ಉಳಿದಿಲ್ಲ. ಟೋಲ್‌ಗೇಟ್‌ ರದ್ದು ಮಾಡುವ ಬದಲು ಅದನ್ನು ಹೆಜಮಾಡಿಯಲ್ಲಿರುವ ಟೋಲ್‌ಗೇಟ್‌ನಲ್ಲಿ ವಿಲೀನಗೊಳಿಸಲಾಗಿದೆ. ಜತೆಗೆ ಸುರತ್ಕಲ್‌ ಟೋಲ್‌ನಲ್ಲಿ ಸಂಗ್ರಹಿಸುತ್ತಿದ್ದ ಪೂರ್ತಿ ಶುಲ್ಕವನ್ನು ಹೆಜಮಾಡಿ ಟೋಲ್‌ನಲ್ಲಿ ಸಂಗ್ರಹಿಸಲಾಗುವುದು. ಇದರಿಂದ ಸುರತ್ಕಲ್‌ ಟೋಲ್‌ಗೇಟ್‌ ರದ್ದಾದರೂ ವಾಹನ ಸವಾರರಿದೆ ಯಾವುದೇ ಲಾಭ ಇಲ್ಲ ಎಂಬಂತಾಗಿದೆ. ಎರಡೂ ಟೋಲ್‌ ಶುಲ್ಕವನ್ನು ಮಸೇರಿಸಿ ಒಂದೇ ಕಡೆ ಪಾವತಿಸುವ ಈ ವ್ಯವಸ್ಥೆ ವಿರುದ್ಧ ಮತ್ತೆ ಆಕ್ರೋಶ ವ್ಯಕ್ತವಾಗುತ್ತದೆ. ಹೀಗಾಗಿ ಟೋಲ್‌ ವಿವಾದ ಸದ್ಯಕ್ಕೆ ಮುಗಿಯುವ ಸಾಧ್ಯತೆ ಕಾಣುತ್ತಿಲ್ಲ.
ಸುರತ್ಕಲ್‌ ಎನ್‌ಐಟಿಕೆ ಸಮೀಪದ ಟೋಲ್‌ಗೇಟ್‌ ಅನ್ನು ಹೆಜಮಾಡಿ ಟೋಲ್‌ ಜತೆ ವಿಲೀನಗೊಳಿಸಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಆದೇಶಿಸಿದೆ. ಟೋಲ್‌ ವಿಲೀನ ಕುರಿತು ಹೆದ್ದಾರಿ ಪ್ರಾಧಿಕಾರ ಗುರುವಾರ ಉಡುಪಿ ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದು, ಡಿ.1 ರಿಂದ ಅನ್ವಯವಾಗುವಂತೆ ಸುರತ್ಕಲ್‌ ಟೋಲ್‌ ವಿಲೀನಗೊಂಡಿದ್ದು, ಇದರಿಂದ ಹೆಜಮಾಡಿಯಲ್ಲಿ ಟೋಲ್‌ ಮೊತ್ತ ದುಬಾರಿಯಾಗಲಿದೆ.
ಡಿ.1ರ ಮಧ್ಯರಾತ್ರಿಯಿಂದಲೇ ಹೆಜಮಾಡಿ ಟೋಲ್‌ಗೇಟ್‌ನಲ್ಲಿ ಪರಿಷ್ಕೃತ ಶುಲ್ಕ ಜಾರಿಗೆ ಬರಲಿದೆ.
ಇದು ಕರಾವಳಿಗೆ ಮಾಡಿದ ಮಾಡಿದ ಮೋಸ ಎಂದು ಪ್ರತಿಭಟನೆಕಾರರು ಕಿಡಿಕಾರಿದ್ದಾರೆ.
ಸುರತ್ಕಲ್‌ ಟೋಲ್‌ ದರವನ್ನು ಪೂರ್ತಿಯಾಗಿ ಸೇರಿಸಿ ಹೆಜಮಾಡಿಯಲ್ಲಿ ಸುಲಿಗೆ ನಡೆಸಲು ಹೆದ್ದಾರಿ ಪ್ರಾಧಿಕಾರ ನಿರ್ಧರಿಸಿದೆ. ಇದು ತುಳುನಾಡಿನ ಜನತೆಗೆ ಎಸಗಿದ ಮಹಾ ಮೋಸ ಎಂದು ಟೋಲ್‌ಗೇಟ್‌ ವಿರೋಧಿ ಹೋರಾಟ ಸಮಿತಿ ಸಂಚಾಲಕ ಮುನೀರ್‌ ಕಾಟಿಪಳ್ಳ ಪ್ರತಿಕ್ರಿಯಿಸಿದ್ದಾರೆ.
ಜನವಿರೋಧಿ ಸರಕಾರ ಮಾತ್ರ ಹೀಗೆ ಮಾಡಲು ಸಾಧ್ಯ. ಹಾಗಾದರೆ ಏಳು ವರ್ಷ ಸುರತ್ಕಲ್‌ ಟೋಲ್‌ಗೇಟ್‌ನಲ್ಲಿ ಸಂಗ್ರಹಿಸಿದ ನೂರಾರು ಕೋಟಿ ರೂ.ಗೆ ಬೆಲೆಯೇ ಇಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ.
ಹೆಜಮಾಡಿಯಲ್ಲಿ ಪರಿಷ್ಕೃತ ದರ

 • ಕಾರು, ಜೀಪು, ವ್ಯಾನ್‌ ಸಹಿತ ಲಘು ವಾಹನ: ಸುರತ್ಕಲ್‌ನಲ್ಲಿ ಸಿಂಗಲ್‌ಗೆ ಟ್ರಿಪ್‌ಗೆ ಇದ್ದ ದರ 60, ಹೆಜಮಾಡಿ ದರ 40 ಸೇರಿಸಿ 100 ರೂ.
 • ರಿಟರ್ನ್‌ ಟ್ರಿಪ್‌ ದರ- 90 ಮತ್ತು 65 ಸೇರಿ 155 ರೂ.
 • 50 ಸಿಂಗಲ್‌ ಟ್ರಿಪ್‌ನ ಮಾಸಿಕ ಪಾಸ್‌ ದರ 2,050 ಮತ್ತು 1,410 ಸೇರಿ 3,460 ರೂ.
 • ಲೈಟ್‌ ಕಮರ್ಷಿಯಲ್‌ ವಾಹನ, ಲೈಟ್‌ ಗೂಡ್ಸ್‌ ವಾಹನ/ ಮಿನಿ ಬಸ್‌: ಸುರತ್ಕಲ್‌ನಲ್ಲಿ ಸಿಂಗಲ್‌ ಟ್ರಿಪ್‌ಗೆ ಇದ್ದ 100, ಹೆಜಮಾಡಿಯ 70 ರೂ. ಸೇರಿ 170 ರೂ.
 • ರಿಟರ್ನ್‌ ಟ್ರಿಪ್‌ ದರ-150 ಮತ್ತು 100 ಸೇರಿ 250 ರೂ.
 • 50 ಸಿಂಗಲ್‌ ಟ್ರಿಪ್‌ನ ಮಾಸಿಕ ಪಾಸ್‌ ದರ 3315 ಮತ್ತು 2275 ಸೇರಿ 5590 ರೂ.
 • ಬಸ್‌ ಅಥವಾ ಟ್ರಕ್‌(ಎರಡು ಆ್ಯಕ್ಸಿಲ್‌): ಸುರತ್ಕಲ್‌ನ ಸಿಂಗಲ್‌ ಟ್ರಿಪ್‌ಗೆ ದರ 210, ಹೆಜಮಾಡಿ ದರ 145 ಸೇರಿ 355 ರೂ.
 • ರಿಟರ್ನ್‌ ಟ್ರಿಪ್‌ ದರ- 310 ಮತ್ತು 215 ಸೇರಿ 525 ರೂ.
 • 50 ಸಿಂಗಲ್‌ ಟ್ರಿಪ್‌ನ ಮಾಸಿಕ ಪಾಸ್‌ ದರ 6,940 ಮತ್ತು 4,765 ಸೇರಿ 11,705 ರೂ.
 • ಹೆವಿ ಕನ್‌ಸ್ಟ್ರನ್‌ ಮೆಷಿನರಿ/ ಅರ್ತ್‌ ಮೂವಿಂಗ್‌ ಉಪಕರಣ/ ಮಲ್ಟಿ ಆ್ಯಕ್ಸಿಲ್‌ ವಾಹನಗಳು: ಸುರತ್ಕಲ್‌ನ ಸಿಂಗಲ್‌ ಟ್ರಿಪ್‌ ದರ 325, ಹೆಜಮಾಡಿ ದರ 225 ಸೇರಿ 550 ರೂ.
 • ರಿಟರ್ನ್‌ ಟ್ರಿಪ್‌ ದರ- 490 ಮತ್ತು 335 ಸೇರಿ 825 ರೂ.
 • 50 ಸಿಂಗಲ್‌ ಟ್ರಿಪ್‌ನ ಮಾಸಿಕ ಪಾಸ್‌ ದರ 10,885 ಮತ್ತು 7,475 ಸೇರಿ 18,360 ರೂ.
 • ಓವರ್‌ಸೈಝ್ಡ್‌ ವಾಹನಗಳು (7 ಅಥವಾ ಹೆಚ್ಚಿನ ಆ್ಯಕ್ಸಿಲ್‌): ಸುರತ್ಕಲ್‌ನ ಸಿಂಗಲ್‌ ಟ್ರಿಪ್‌ ದರ 400, ಹೆಜಮಾಡಿ ದರ 275 ಸೇರಿ 675 ರೂ.(ಮಾಸಿಕ ಪಾಸ್‌ 315 ರೂ.)
 • ರಿಟರ್ನ್‌ ಟ್ರಿಪ್‌ ದರ- 595 ಮತ್ತು 410 ಸೇರಿ 1,005 ರೂ.
 • 50 ಸಿಂಗಲ್‌ ಟ್ರಿಪ್‌ನ ಮಾಸಿಕ ಪಾಸ್‌ ದರ 13,250 ಮತ್ತು 9,100 ಸೇರಿ 22,350 ರೂ.

LEAVE A REPLY

Please enter your comment!
Please enter your name here

Most Popular

error: Content is protected !!