ಕಾರ್ಕಳ : ಅತ್ತೂರು ಪರ್ಪಲೆಗಿರಿಯಲ್ಲಿ ಭೂ ನಿಧಿ ಸಂಚಯನಕ್ಕೆ ನ. 25ರಂದು ಚಾಲನೆ ನೀಡಲಾಯಿತು. ಇದರ ಅಂಗವಾಗಿ ಕೇಂಜ ಶ್ರೀಧರ ತಂತ್ರಿಯವರ ಪೌರೋಹಿತ್ಯದಲ್ಲಿ ಧಾರ್ಮಿಕ ವಿಧಿ ವಿಧಾನ ನಡೆಯಿತು.
ದೇವಸ್ಥಾನ-ದೈವಸ್ಥಾನ ನಿರ್ಮಾಣ, ಧಾರ್ಮಿಕ, ಸಾಮಾಜಿಕ ಕಾರ್ಯಗಳಿಗಾಗಿ ಜಮೀನಿನ ಅವಶ್ಯಕತೆ ಇರುವುದರಿಂದ ಭೂ ನಿಧಿ ಸಂಚಯನ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. 0.25 ಸೆಂಟ್ಸ್ ಗೆ 3,000 ರೂ., 0.50 ಸೆಂಟ್ಸ್ ಗೆ 6,000 ರೂ., 1 ಸೆಂಟ್ಸ್ ಗೆ 12,000 ರೂ., 2 ಸೆಂಟ್ಸ್ ಗೆ 24,000 ರೂ., 5 ಸೆಂಟ್ಸ್ ಗೆ 60,000 ರೂ., 10 ಸೆಂಟ್ಸ್ ಗೆ 1,20,000 ರೂ., 25 ಸೆಂಟ್ಸ್ ಗೆ 3 ಲಕ್ಷ ರೂ., ಅರ್ಧ ಎಕರೆಗೆ 6 ಲಕ್ಷ ರೂ., ಒಂದು ಎಕರೆಗೆ 12 ಲಕ್ಷ ರೂ. ಎಂದು ಮೌಲ್ಯ ನಿಗದಿಪಡಿಸಲಾಗಿದೆ. ಈ ಪುಣ್ಯ ಕಾರ್ಯದಲ್ಲಿ ಭಗವತ್ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕಾಗಿ ಪುನರುತ್ಥಾನ ಸಮಿತಿ ಹಾಗೂ ಟ್ರಸ್ಟ್ ವಿನಂತಿಸಿಕೊಂಡಿದೆ. ಶುಕ್ರವಾರ ನಡೆದ ಸಾಂಕೇತಿಕ ಭೂ ದಾನ ಕಾರ್ಯಕ್ರಮದಲ್ಲಿ ವಿನೋದ್ ಕಾಮತ್ ಮುಲ್ಕಿ , ರವೀಂದ್ರ ಶೆಟ್ಟಿ ಬಜಗೋಳಿ, ನಿತ್ಯಾನಂದ ಪೈ ಕಾರ್ಕಳ, ಬೋಳ ಪ್ರಶಾಂತ್ ಕಾಮತ್, ವಿಠಲ್ ಶೆಟ್ಟಿ ಬಲಿಪಗುತ್ತು, ವಿ. ಸುನಿಲ್ ಕುಮಾರ್, ಉದಯ ಕುಮಾರ್ ಶೆಟ್ಟಿ ಮುನಿಯಾಲು, ಸತ್ಯೇಂದ್ರ ಭಟ್ ಹಾಗೂ ಅರುಣ್ ಸೇನ್, ಎಂ.ಕೆ. ವಿಜಯ್ ಕುಮಾರ್, ಚೇತನ್ ಕೋಟ್ಯಾನ್, ಯೋಗೀಶ್ ಹೆಗ್ಡೆ ಅತ್ತೂರು, ಮನ್ಮಥ ಶೆಟ್ಟಿ ಅತ್ತೂರು, ಲಕ್ಷ್ಮಣ್ ಕುಡ್ವ, ಶ್ರೀಧರ ಸುವರ್ಣ , ಬಾಲಕೃಷ್ಣ ಹೆಗ್ಡೆ ಬಾಲಾಜಿ ಶಿಬಿರ, ನಂದಕುಮಾರ್ ಹೆಗ್ಡೆ, ದೇವೇಂದ್ರ ಹೆಗ್ಡೆ, ವಿನಯ್ ಹೆಗ್ಡೆ ಕಾಬೆಟ್ಟು, ಸಚ್ಚಿಂದ್ರ ಹೆಗ್ಡೆ ಅತ್ತೂರು, ಸುಂದರ ಹೆಗ್ಡೆ, ನವೀನ್ ನಾಯಕ್ ನಿಟ್ಟೆ ಇತರರೂ ಸ್ಥಳದಾನದ ಘೋಷಣೆ ಮಾಡಿರುತ್ತಾರೆ. ಭೂ ನಿಧಿ ಸಂಚಯನದ ಬಗೆಗಿನ ಹೆಚ್ಚಿನ ಮಾಹಿತಿಗಾಗಿ 9980067033, 9663559251 ನಂಬರ್ ಸಂಪರ್ಕಿಸಬಹುದಾಗಿದೆ.
ಪರ್ಪಲೆಗಿರಿಯಲ್ಲಿ ಭೂ ನಿಧಿ ಸಂಚಯನಕ್ಕೆ ಚಾಲನೆ
