Thursday, December 1, 2022
spot_img
Homeಸುದ್ದಿಸರಿಯಾಗಿ ಕಾರ್ಯನಿರ್ವಹಿಸಲೇನು ರೋಗ ?

ಸರಿಯಾಗಿ ಕಾರ್ಯನಿರ್ವಹಿಸಲೇನು ರೋಗ ?

ಕಾರ್ಕಳ : ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಸರಕಾರದಿಂದ ಸಕಲ ವ್ಯವಸ್ಥೆ ಕಲ್ಪಿಸಿದ್ದಾಗ್ಯೂ ಇಲ್ಲಿನ ಕೆಲ ವೈದ್ಯರು, ಸಿಬ್ಬಂದಿ ಉತ್ತಮವಾಗಿ ಕಾರ್ಯನಿರ್ವಹಿಸದ ಬಗ್ಗೆ ತೀವ್ರ ಅಸಮಾಧಾನಗೊಂಡ ಸಚಿವ ಸುನೀಲ್‌ ಕುಮಾರ್‌ ಶುಕ್ರವಾರ ಅವರನ್ನು ತರಾಟೆಗೆತ್ತಿಕೊಂಡ ಘಟನೆ ನಡೆಯಿತು.
ವೈದ್ಯರು ದಿನದ 8 ಗಂಟೆ ಕರ್ತವ್ಯ ನಿರ್ವಹಿಸುತ್ತಿಲ್ಲ. ಕೆಲ ವೈದ್ಯರು, ಆಸ್ಪತ್ರೆ ಸಿಬ್ಬಂದಿ ರೋಗಿಗಳೊಂದಿಗೆ ಸೌಜನ್ಯದಿಂದ ವರ್ತಿಸುತ್ತಿಲ್ಲ. ಸ್ಪಂದನೆಯಿಲ್ಲ. ಆಸ್ಪತ್ರೆಗೆ ಬೇಕಾದ ಎಲ್ಲ ಸೌಕರ್ಯಗಳನ್ನು ಒದಗಿಸಿದರೂ ಕಾರ್ಯನಿರ್ವಹಣೆಯಿಲ್ಲ ಎಂದು ಕೆಂಡಾಮಂಡಲರಾದ ಸಚಿವರು ಉತ್ತಮ ಸೇವೆ ನೀಡಲು ನಿಮಗೇನು ರೋಗ ಬಂದಿದೆ ಕಿಡಿಕಾರಿದರು.
ನ. 25ರ ಸಂಜೆ ಆಸ್ಪತ್ರೆಯಲ್ಲಿ ಆರೋಗ್ಯ ರಕ್ಷಾ ಸಮಿತಿ ಸಭೆಯಲ್ಲಿ ಆಸ್ಪತ್ರೆಯ ಸೇವೆ ಕುರಿತು ಸಾರ್ವಜನಿಕರ ದೂರಿನ ಮೇರೆಗೆ ಸಿಬ್ಬಂದಿಯನ್ನು ಹಿಗ್ಗಾಮುಗ್ಗಾ ತರಾಟೆಗೆತ್ತಿಕೊಂಡರು.

ಟ್ರಾನ್ಸ್‌ಫರ್‌ ತಗೊಳ್ಳಿ
ಸಮರ್ಪಕವಾಗಿ ಕಾರ್ಯನಿರ್ವಹಿಸಲು ಸಾ‍ಧ್ಯವಾಗದ ವೈದ್ಯರು, ಸಿಬ್ಬಂದಿ ವರ್ಗಾವಣೆ ತಗೊಳ್ಳಿ. ಬೇರೆ ಸಿಬ್ಬಂದಿಯನ್ನು ಕಾರ್ಕಳಕ್ಕೆ ತರುತ್ತೇನೆ. ಸಾರ್ವಜನಿಕರಿಗೆ ತೊಂದೆಯಾಗುವುದನ್ನು ಸಹಿಸಲ್ಲ ಎಂದ ಸುನೀಲ್‌ ಕುಮಾರ್‌ ಸರಕಾರದಿಂದ ಆಸ್ಪತ್ರೆಗೆ ಬೇಕಾದ ಸೌಕರ್ಯ ಒದಗಿಸಿಕೊಡಬಹುದಾಗಿದೆ. ಸೇವೆ ಮಾತ್ರ ವೈದ್ಯರು, ಸಿಬ್ಬಂದಿಯೇ ನೀಡಬೇಕೆಂದರು.

ರಿಪೋರ್ಟ್‌ ಕೊಡಿ
ಆಸ್ಪತ್ರೆಗೆ ಬರುವ ರೋಗಿಗಳ ಬಗ್ಗೆ, ವೈದ್ಯರು, ಸಿಬ್ಬಂದಿ ಕರ್ವತ್ಯ ಪಾಳಿಯ ಪ್ರತಿಯೊಂದು ಮಾಹಿತಿ ನೀಡಬೇಕು. 15 ದಿನಗಳ ಸಂಪೂರ್ಣ ವರದಿ ಕೊಡಬೇಕು. ಮುಂದಿನ 15 ದಿನಗಳಲ್ಲಿ ಎಲ್ಲವನ್ನೂ ಸರಿಪಡಿಸಬೇಕೆಂದು. ಆಸ್ಪತ್ರೆ ವೈದ್ಯಾಧಿಕಾರಿ ಡಾ. ಕೆ.ಎಸ್.‌ ರಾವ್‌ ಅವರಿಗೆ ಸಚಿವರು ತಾಕೀತು ಮಾಡಿದರು.

ಆಂಬುಲನ್ಸ್‌ ಚಾಲಕರಿಗೆ ಕರೆ
ತುರ್ತು ಸಂದರ್ಭ ಆಸ್ಪತ್ರೆಯಲ್ಲಿನ ಆಂಬುಲನ್ಸ್‌ಗೆ ಚಾಲಕರಿರುವುದಿಲ್ಲ. ಅವರನ್ನು ಕರೆ ಮಾಡಿ ಕರೆಯಲಾಗುತ್ತಿದೆ. ಇದೆಲ್ಲ ಗಂಭೀರ ವಿಚಾರ. 15 ದಿನಗಳಲ್ಲಿ ಎಲ್ಲವನ್ನೂ ಸಮರ್ಪಕವಾಗಿ ಮಾಡಬೇಕು. ಈ ಬಗ್ಗೆ ಯೋಜನೆ ರೂಪಿಸಿಕೊಳ್ಳಿ ಎಂದು ಉಡುಪಿ ಡಿಎಚ್‌ಒ ನಾಗಭೂಷಣ್‌ ಅವರಿಗೆ ಸಚಿವರು ಸೂಚಿಸಿದರು. ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತ ಕೆ. ರಾಜು, ಪುರಸಭೆ ಅಧ್ಯಕ್ಷೆ ಸುಮಾ ಕೇಶವ್‌, ಟಿಎಚ್‌ಒ ಡಾ. ಕೃಷ್ಣಾನಂದ ಶೆಟ್ಟಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Most Popular

error: Content is protected !!