ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವ ಸಂಭ್ರಮ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ನ್ಯೂಸ್ ಕಾರ್ಕಳ ಸುದ್ದಿ ಜಾಲತಾಣ ಕಾರ್ಕಳ ಮತ್ತು ಹೆಬ್ರಿ ತಾಲೂಕಿನ ಸೈನಿಕರ ಮಾಹಿತಿ ಸಂಗ್ರಹಿಸಲು ಮುಂದಾಗಿದೆ. ನಾಡಿಗಾಗಿ ತಮ್ಮ ಪ್ರಾಣ ಪಣಕ್ಕಿಟ್ಟು ಸೇನೆಯಲ್ಲಿ ಪ್ರಸ್ತುತ ಸೇವೆ ಸಲ್ಲಿಸುತ್ತಿರುವ ವೀರ ಯೋಧರ ಪರಿಚಯ ಕಲೆ ಹಾಕಲು ನ್ಯೂಸ್ ಕಾರ್ಕಳ ಬಯಸಿದ್ದು, ಈ ನಿಟ್ಟಿನಲ್ಲಿ ಕಾರ್ಕಳ – ಹೆಬ್ರಿ ಉಭಯ ತಾಲೂಕಿನ ಯೋಧರ ಕುರಿತು ಮಾಹಿತಿ ನೀಡುವಂತೆ ವಿನಂತಿಸುತ್ತಿದ್ದೇವೆ. ಸೈನಿಕರ ಹೆಸರು, ಗ್ರಾಮ, ಸೇವೆ ಸಲ್ಲಿಸುತ್ತಿರುವ ವಿಭಾಗ, ಹುದ್ದೆ, ಕರ್ತವ್ಯ ಸಲ್ಲಿಸುತ್ತಿರುವ ಸ್ಥಳ, ಸೇವಾವಧಿಯನ್ನು ಫೋಟೋ ಸಹಿತ ನೀಡಬೇಕಾಗಿ ಕೋರಲಾಗಿದೆ. ಗ್ರಾಮಸ್ಥರು ಕೂಡ ತಮ್ಮೂರಿನ ಸೇನಾನಿಗಳ ಬಗ್ಗೆ ಮಾಹಿತಿ ಒದಗಿಸಬಹುದಾಗಿದೆ. ಮಾಹಿತಿ ನೀಡಲು ಕೊನೆಯ ದಿನಾಂಕ ನ. 28ರ ಸೋಮವಾರ.
ಫೋಟೋ ವಿವರ ಕಳುಹಿಸಿಕೊಡಬೇಕಾದ ವಾಟ್ಸಾಪ್ ಸಂಖ್ಯೆ : 7026677137
ಈ ಮೇಲ್ ಐಡಿ : nk.newskarkala@gmail.com
ಹೆಸರು :
ಗ್ರಾಮ :
ಸೇವೆ ಸಲ್ಲಿಸುತ್ತಿರುವ ವಿಭಾಗ :
ಹುದ್ದೆ :
ಕರ್ತವ್ಯ ಸಲ್ಲಿಸುತ್ತಿರುವ ಸ್ಥಳ :
ಸೇವಾವಧಿ :
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 7026677137