Thursday, December 1, 2022
spot_img
Homeಸುದ್ದಿಶುಕ್ರವಾರದಿಂದ ಭಾರತ- ನ್ಯೂಜಿಲ್ಯಾಂಡ್‌ ಏಕದಿನ ಸರಣಿ

ಶುಕ್ರವಾರದಿಂದ ಭಾರತ- ನ್ಯೂಜಿಲ್ಯಾಂಡ್‌ ಏಕದಿನ ಸರಣಿ

ಗೆಲುವಿನ ತವಕದಲ್ಲಿ ಟೀಂ ಇಂಡಿಯಾ

ಆಕ್ಲೆಂಡ್ : ನ್ಯೂಜಿಲ್ಯಾಂಡ್ ವಿರುದ್ಧದ ಟಿ-20 ಸರಣಿಯನ್ನು 1-0 ಅಂತರದಿಂದ ಗೆದ್ದಿರುವ ಟೀಮ್ ಇಂಡಿಯಾ ಇದೀಗ ಏಕದಿನ ಸರಣಿಗೆ ಸಜ್ಜಾಗಿದೆ. ಈ ಸರಣಿಯಲ್ಲಿ ಒಟ್ಟು ಮೂರು ಪಂದ್ಯಗಳನ್ನು ಆಡಲಿದೆ. ಟಿ-20 ಸರಣಿಯಲ್ಲಿ ತಂಡವನ್ನು ಮುನ್ನಡೆಸಿದ್ದ ಹಾರ್ದಿಕ್ ಪಾಂಡ್ಯ ಈ ಸರಣಿಯಿಂದ ಹೊರಗುಳಿದಿದ್ದಾರೆ. ತಂಡದ ನಾಯಕನಾಗಿ ಶಿಖರ್ ಧವನ್ ಕಾಣಿಸಿಕೊಳ್ಳಲಿದ್ದಾರೆ. ಈ ಸರಣಿಯು ಶುಕ್ರವಾರದಿಂದ ಶುರುವಾಗಲಿದ್ದು, ನ. 30 ರಂದು ಮುಗಿಯಲಿದೆ.
ನ. 25: ಮೊದಲ ಏಕದಿನ ಪಂದ್ಯ- ಆಕ್ಲೆಂಡ್
ನ. 27: ಎರಡನೇ ಏಕದಿನ ಪಂದ್ಯ- ಹ್ಯಾಮಿಲ್ಟನ್
ನ. 30: ಮೂರನೇ ಏಕದಿನ ದಿನ ಪಂದ್ಯ- ಕ್ರೈಸ್ಟ್‌ಚರ್ಚ್
ಈ ಎಲ್ಲಾ ಪಂದ್ಯಗಳು ಭಾರತೀಯ ಕಾಲಮಾನ ಬೆಳಿಗ್ಗೆ 7 ಗಂಟೆಯಿಂದ ಶುರುವಾಗಲಿದೆ.
ಈ ಸರಣಿಯಿಂದ ಟೀಮ್ ಇಂಡಿಯಾದ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಕೆ.ಎಲ್. ರಾಹುಲ್ ಸೇರಿದಂತೆ ಪ್ರಮುಖರು ಹೊರಗುಳಿದಿದ್ದಾರೆ. ಹೀಗಾಗಿ ತಂಡದಲ್ಲಿ ಯುವ ಆಟಗಾರರು ಸ್ಥಾನ ಪಡೆದಿದ್ದಾರೆ.

LEAVE A REPLY

Please enter your comment!
Please enter your name here

Most Popular

error: Content is protected !!