Thursday, December 1, 2022
spot_img
Homeಸುದ್ದಿಸಮಾಜ ಸೇವಕ ಕೆವಿನ್‌ ಡಿಮೆಲ್ಲೋ ಆತ್ಮಹತ್ಯೆ

ಸಮಾಜ ಸೇವಕ ಕೆವಿನ್‌ ಡಿಮೆಲ್ಲೋ ಆತ್ಮಹತ್ಯೆ

ಕಾರ್ಕಳ : ಕೊಂಕಣಿ ಸಾಹಿತಿ, ಸಮಾಜ ಸೇವಕ, ರಾಮಸಮುದ್ರ ಬಳಿಯ ನಿವಾಸಿ ಕೆವಿನ್‌ ಡಿಮೆಲ್ಲೋ (57) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮದ್ಯವರ್ಜನ ಶಿಬಿರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅದೆಷ್ಟೋ ಮಂದಿಯನ್ನು ಮದ್ಯಮುಕ್ತರನ್ನಾಗಿ ಮಾಡಿದ ಕೆವಿನ್‌ ಡಿಮೆಲ್ಲೊ ಅವರು ನ. 24 ರಂದು ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೊಂಕಣಿ ಸಾಹಿತ್ಯಕ್ಕಾಗಿ ಹಲವಾರು ಪ್ರಶಸ್ತಿ ಪಡೆದಿದ್ದ ಇವರು ಗಾಂಧಿ ಮೈದಾನ ಕ್ರೈಸ್ಟ್‌ ಕಿಂಗ್‌ ಚರ್ಚ್‌ ಶಾಲಾ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಮೃತರು ಪತ್ನಿ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ

LEAVE A REPLY

Please enter your comment!
Please enter your name here

Most Popular

error: Content is protected !!