Thursday, December 1, 2022
spot_img
Homeಸಿನೆಮಾವರಾಹ ರೂಪಂ ಹಾಡಿನ ವಿವಾದ: ನ್ಯಾಯಾಲಯದಲ್ಲಿ ಕಾಂತಾರ ನಿರ್ಮಾಪಕರಿಗೆ ಹಿನ್ನಡೆ

ವರಾಹ ರೂಪಂ ಹಾಡಿನ ವಿವಾದ: ನ್ಯಾಯಾಲಯದಲ್ಲಿ ಕಾಂತಾರ ನಿರ್ಮಾಪಕರಿಗೆ ಹಿನ್ನಡೆ

ಮೇಲ್ಮನವಿ ವಿಚಾರಣೆಗೆ ಹೈಕೋರ್ಟ್‌ ನಕಾರ

ಬೆಂಗಳೂರು : ಕಾಂತಾರ ಸಿನೆಮಾದ ‘ವರಾಹ ರೂಪಂ…’ ಹಾಡಿನ ವಿವಾದಕ್ಕೆ ಸಂಬಂಧಿಸಿ ಚಿತ್ರದ ನಿರ್ಮಾಪಕರು ಸಲ್ಲಿಸಿದ್ದ ಮೇಲ್ಮನವಿಯನ್ನು ಕೇರಳದ ಹೈಕೋರ್ಟ್‌ ತಿರಸ್ಕರಿಸಿದೆ. ಈ ಹಾಡಿನ ಟ್ಯೂನ್ ಮೇಲೆ ಮೇಲೆ ಕೇರಳದ ಥೈಕುಡಂ ಬ್ರಿಜ್‌ ಎಂಬ ಮ್ಯೂಸಿಕ್‌ ಬ್ಯಾಂಡ್‌ ಕೃತಿಚೌರ್ಯದ ಆರೋಪ ಹೊರಿಸಿದೆ.
ಕೇರಳದ ಕೋಯಿಕ್ಕೋಡ್ ಹಾಗೂ ಪಾಲಕ್ಕಾಡ್ ಜಿಲ್ಲಾ ನ್ಯಾಯಾಲಯಗಳು ಅರ್ಜಿ ವಿಚಾರಣೆ ನಡೆಸಿ, ಹಾಡನ್ನು ಒಪ್ಪಿಗೆ ಇಲ್ಲದೆ ಪ್ರಸಾರ ಮಾಡಬಾರದು ಎಂದು ಆದೇಶ ನೀಡಿದ್ದವು. ಕಾಂತಾರ ಚಿತ್ರವನ್ನು ನಿರ್ಮಿಸಿದ ಹೊಂಬಾಳೆ ಫಿಲ್ಮ್ಸ್ ಈ ಆದೇಶವನ್ನು ಕೇರಳ ಹೈಕೋರ್ಟ್​ನಲ್ಲಿ ಪ್ರಶ್ನಿಸಿತ್ತು. ಆದರೆ, ಕೋರ್ಟ್​ ಈ ಅರ್ಜಿಯನ್ನು ತಿರಸ್ಕರಿಸಿದೆ.
ಥೈಕುಡಂ ಬ್ರಿಜ್‌ನ ‘ನವರಸಂ..’ ಹಾಡಿನಲ್ಲಿರುವ ಟ್ಯೂನ್​ ‘ವರಾಹ ರೂಪಂ..’ನಲ್ಲಿ ಬಳಕೆ ಆಗಿದೆ ಎಂದು ಆರೋಪಿಸಲಾಗಿದೆ. ಕೇರಳದ ಸ್ಥಳೀಯ ನ್ಯಾಯಾಲಯಗಳು ‘ವರಾಹ ರೂಪಂ..’ ಹಾಡಿಗೆ ತಡೆ ನೀಡಿದ್ದವು. ಇದನ್ನು ಹೈಕೋರ್ಟ್​ನಲ್ಲಿ ಪ್ರಶ್ನಿಸಿದ ಹೊಂಬಾಳೆ ಫಿಲ್ಮ್ಸ್​ಗೆ ಈಗ ಹಿನ್ನಡೆ ಆಗಿದೆ. ಕೇರಳ ಹೈಕೋರ್ಟ್​ನ ಏಕ ಸದಸ್ಯ ಪೀಠದ ನ್ಯಾಯಮೂರ್ತಿ ಸಿ.ಎಸ್. ದಿಯಾಸ್ ಅವರು ಅರ್ಜಿಯನ್ನು ವಜಾ ಮಾಡಿದ್ದಾರೆ. ಅಲ್ಲದೆ, ಪರ್ಯಾಯ ಕಾನೂನು ಪರಿಹಾರ ಕಂಡುಕೊಳ್ಳಲು ಅವಕಾಶ ನೀಡಿದ್ದಾರೆ.

LEAVE A REPLY

Please enter your comment!
Please enter your name here

Most Popular

error: Content is protected !!