Thursday, December 1, 2022
spot_img
Homeಸ್ಥಳೀಯ ಸುದ್ದಿಹಿಂದೂ ಹುಡುಗಿಯರ ಸಂಪರ್ಕ - ಅನ್ಯ ಕೋಮಿನ ಬಸ್ ಚಾಲಕನನ್ನು ಠಾಣೆಗೆ ಒಪ್ಪಿಸಿದ ಭಜರಂಗದಳ ಕಾರ್ಯಕರ್ತರು...

ಹಿಂದೂ ಹುಡುಗಿಯರ ಸಂಪರ್ಕ – ಅನ್ಯ ಕೋಮಿನ ಬಸ್ ಚಾಲಕನನ್ನು ಠಾಣೆಗೆ ಒಪ್ಪಿಸಿದ ಭಜರಂಗದಳ ಕಾರ್ಯಕರ್ತರು ‌

ಕಾರ್ಕಳ : ಹತ್ತಾರು ಹಿಂದೂ ಹುಡುಗಿಯರ ಸಂಪರ್ಕ, ಅವರೊಂದಿಗೆ ಚಾಟಿಂಗ್‌, ವಿಡಿಯೋ ಕಾಲ್‌ ಮಾಡುತ್ತಿದ್ದ ಅನ್ಯಕೋಮಿನ ಬಸ್ ಚಾಲಕನನ್ನು ನ. 22ರಂದು ಕಾರ್ಕಳ ಭಜರಂಗದಳ ಕಾರ್ಯಕರ್ತರು ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಆತನ ಮೊಬೈಲ್‌ನಲ್ಲಿ ಹಿಂದೂ ಹುಡುಗಿಯರ ಫೋಟೋಗಳು ಇರುವುದನ್ನ ಖಚಿತಪಡಿಸಿಕೊಂಡ ಭಜರಂಗದಳದವರು ಆತನನ್ನು ವಶಕ್ಕೆ ಪಡೆದು ಕಾರ್ಕಳ ನಗರ ಪೊಲೀಸ್‌ ಠಾಣೆಗೆ ಒಪ್ಪಿಸಿದ್ದಾರೆ. ಬಸ್‌ ಚಾಲಕನ ಈ ಕೃತ್ಯದ ಸುದ್ದಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಬಸ್‌ ಚಾಲಕನ ವಿರುದ್ಧ ಯಾರೊಬ್ಬರೂ ದೂರು ನೀಡಲು ಮುಂದಾಗದ ಕಾರಣ ಪ್ರಕರಣ ದಾಖಲಾಗಿಲ್ಲ. ಹಿಂದು ಸಂಘಟನೆಗಳು ಲವ್‌ ಜಿಹಾದ್‌ ಕುರಿತು ಎಚ್ಚರಿಕೆಯಿಂದ ಇರುವಂತೆ ಹೇಳುತ್ತಿದ್ದರೂ ಇಂತಹ ಘಟನೆ ನಡೆಯುತ್ತಿರುವುದು ಸಮಾಜವನ್ನು ಬೆಚ್ಚಿ ಬೀಳಿಸಿದೆ.

LEAVE A REPLY

Please enter your comment!
Please enter your name here

Most Popular

error: Content is protected !!