ಏಕಾಂಗಿ ಮಹಿಳೆಯರಿಗೆ ಪ್ರವೇಶ ನಿಷೇಧಿಸಿದ ಐತಿಹಾಸಿಕ ಜಾಮಾ ಮಸೀದಿ

ದೆಹಲಿ : ಐತಿಹಾಸಿಕ ಜಾಮಾ ಮಸೀದಿಗೆ ಒಂಟಿಯಾಗಿ ಹುಡುಗಿಯರು ಮತ್ತು ಮಹಿಳೆಯರು ಬರುವುದನ್ನು ನಿಷೇಧಿಸಲಾಗಿದೆ ಎಂದು ಮಸೀದಿಯ ಹೊರಗೆ ಅಂಟಿಸಲಾಗಿದ್ದು ಇದು ವಿವಾದಕ್ಕೆ ಕಾರಣವಾಗಿದೆ.
ಜಾಮಾ ಮಸೀದಿಯ ಪಿಆರ್‌ಒ ಸಬೀವುಲ್ಲಾಖಾನ್ ಮಾತನಾಡಿ, ‘ಇಲ್ಲಿಗೆ ಬರುವ ಒಂಟಿ ಹುಡುಗಿಯರನ್ನು ತಡೆಯಲು ಈ ನಿಷೇಧ ಹೇರಲಾಗಿದೆ. ಅವರು ಇಲ್ಲಿಗೆ ಬಂದು ವಿಡಿಯೊ ಮಾಡುತ್ತಿದ್ದಾರೆ. ‘ನೀವು ಬರುವುದಾದರೆ ನಿಮ್ಮ ಕುಟುಂಬದೊಂದಿಗೆ ಬನ್ನಿ, ಯಾವುದೇ ನಿರ್ಬಂಧಗಳಿಲ್ಲ. ವಿವಾಹಿತ ದಂಪತಿಗಳು ಬರುತ್ತಾರೆ. ಯಾವುದೇ ನಿರ್ಬಂಧಗಳಿಲ್ಲ. ಆದರೆ ಯಾರಿಗಾದರೂ ಇಲ್ಲಿಗೆ ಬರಲು ಸಮಯ ನೀಡುವುದು. ಅದನ್ನು ಮೀಟಿಂಗ್ ಪಾಯಿಂಟ್ ಎಂದು ಪರಿಗಣಿಸುವುದು. ಪಾರ್ಕ್ ಎಂದು ಪರಿಗಣಿಸುವುದು. ಟಿಕ್‌ಟಾಕ್ ವೀಡಿಯೊಗಳನ್ನು ಮಾಡುವುದು ನೃತ್ಯ ಮಾಡುವುದು. ಇದು ಯಾವುದೇ ಧಾರ್ಮಿಕ ಸ್ಥಳಕ್ಕೂ ಸೂಕ್ತವಲ್ಲ. ಅದು ಮಸೀದಿ, ಮಂದಿರ ಅಥವಾ ಗುರುದ್ವಾರವೇ ಆಗಿರಲಿ ಎಂದು ಹೇಳಿದ್ದಾರೆ.

ಜಾಮಾ ಮಸೀದಿಯ ಎಲ್ಲಾ ಮೂರು ಪ್ರವೇಶ ದ್ವಾರಗಳ ಮೇಲೆ ಸೂಚನಾ ಫಲಕವನ್ನು ಹಾಕಲಾಗಿದ್ದು ಅದರಲ್ಲಿ ‘ಜಾಮಾ ಮಸೀದಿಗೆ ಏಕಾಂಗಿ ಹುಡುಗಿಯರು ಅಥವಾ ಮಹಿಳೆಯರ ಪ್ರವೇಶವನ್ನು ನಿಷೇಧಿಸಲಾಗಿದೆ’ ಎಂದು ಬರೆಯಲಾಗಿತ್ತು. ಇದು ತೀವ್ರ ವಿರೋಧಕ್ಕೆ ಕಾರಣವಾಗಿತ್ತು. ಜಾಮಾ ಮಸೀದಿಗೆ ಮಹಿಳೆಯರ ಪ್ರವೇಶವನ್ನು ನಿಷೇಧಿಸುವ ವಿಷಯಕ್ಕೆ ಸಂಬಂಧಿಸಿದಂತೆ ಮಸೀದಿಯ ಇಮಾಮ್‌ಗೆ ನೋಟಿಸ್ ನೀಡಲು ದೆಹಲಿ ಮಹಿಳಾ ಆಯೋಗ ನಿರ್ಧರಿಸಿದೆ. ಈ ಬಗ್ಗೆ ಸ್ವತಃ ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲಾ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದ್ದಾರೆ. ಸ್ವಾತಿ ಮಲಿವಾಲ್ ಅವರು, ‘ಜಾಮಾ ಮಸೀದಿಗೆ ಮಹಿಳೆಯರ ಪ್ರವೇಶವನ್ನು ತಡೆಯುವ ನಿರ್ಧಾರ ಸಂಪೂರ್ಣವಾಗಿ ತಪ್ಪು. ಪುರುಷನಿಗೆ ಪೂಜೆ ಮಾಡುವ ಹಕ್ಕು ಎಷ್ಟು ಇದೆಯೋ ಅಷ್ಟೇ ಹಕ್ಕು ಮಹಿಳೆಗೂ ಇದೆ. ನಾನು ಜಾಮಾ ಮಸೀದಿಯ ಇಮಾಮ್‌ಗೆ ನೋಟಿಸ್ ನೀಡುತ್ತಿದ್ದೇನೆ. ಈ ರೀತಿ ಮಹಿಳೆಯರ ಪ್ರವೇಶವನ್ನು ನಿಷೇಧಿಸುವ ಹಕ್ಕು ಯಾರಿಗೂ ಇಲ್ಲ ಎಂದು ಟ್ವೀಟಿಸಿದ್ದಾರೆ.









































































































































































error: Content is protected !!
Scroll to Top