Thursday, December 1, 2022
spot_img
Homeಸ್ಥಳೀಯ ಸುದ್ದಿಹೆಬ್ರಿ : ನುಡಿ ನಿಚ್ಚಂ ಪೊಸತು - ಕವಿಗೋಷ್ಠಿ

ಹೆಬ್ರಿ : ನುಡಿ ನಿಚ್ಚಂ ಪೊಸತು – ಕವಿಗೋಷ್ಠಿ

ಗ್ರಾಮೀಣ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವಲ್ಲಿ ಕವಿಗೋಷ್ಟಿ ಅರ್ಥಪೂರ್ಣ ಕಾರ್ಯಕ್ರಮ – ಭಾಸ್ಕರ ಜೋಯಿಸ್

ಹೆಬ್ರಿ : ಗ್ರಾಮೀಣ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವಲ್ಲಿ ಕವಿಗೋಷ್ಟಿಯಂತಹ ಕಾರ್ಯಕ್ರಮ ಹೆಚ್ಚು ಅರ್ಥಪೂರ್ಣವಾದುದು. ಗ್ರಾಮದ ಯುವ ಪ್ರತಿಭೆಗಳಿಗೆ ಅವಕಾಶ ನೀಡುವುದರಿಂದ ಮುಂಬರುವ ಬರಹಗಾರರಿಗೂ ಪ್ರೇರಣೆ ಸಿಗುತ್ತದೆ ಎಂದು ಉದ್ಯಮಿ ಭಾಸ್ಕರ ಜೋಯಿಸ್ ಹೇಳಿದರು. ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಹೆಬ್ರಿ ಘಟಕ, ಗೀತಾ ಫೌಂಡೇಶನ್‌ ಮಣೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಇದರ ಸಂಯುಕ್ತ ಆಶ್ರಯದಲ್ಲಿ ನ. 24 ರಂದು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜರುಗಿದ ನುಡಿ ನಿಚ್ಚಂ ಪೊಸತು ಎಂಬ ಶೀರ್ಷಿಕೆಯಡಿಯಲ್ಲಿ ನಡೆದ ಕವಿಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕ.ಸಾ.ಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿ, ಕವಿತೆಗಳು ಧ್ವನಿ ಪೂರ್ಣವಾಗಿದ್ದಾಗ ಓದುಗರು ಮೆಚ್ಚಿಕೊಳ್ಳುತ್ತಾರೆ. ಕನ್ನಡ ಸಾಹಿತ್ಯ ಪರಿಷತ್ತು ಅನೇಕ ಕಾರ್ಯಕ್ರಮಗಳಲ್ಲಿ ಕವಿಗಳಿಗೆ ವೇದಿಕೆ ಅವಕಾಶಗಳನ್ನು ನೀಡುವ ಮೂಲಕ ಬರವಣಿಗೆಗೆ ನಿರಂತರ ಪ್ರೋತ್ಸಾಹ ನೀಡುತ್ತಿದೆ ಎಂದರು.

ಕವಿಗೋಷ್ಟಿಯ ಅಧ್ಯಕ್ಷತೆ ವಹಿಸಿದ್ದ ಗಣನಾಥ ಎಕ್ಕಾರ್ ಮಾತನಾಡಿ ಕವಿಗಳ ಬರವಣಿಗೆಯಲ್ಲಿರುವ ಪದಗಳ ಸಂಗ್ರಹ ಮತ್ತು ಜೋಡಣೆ ಅದ್ಭುತವಾಗಿತ್ತು. ಹೆಚ್ಚು ಹೆಚ್ಚು ಜನರು ಅಧ್ಯಯನ ಶೀಲರಾದರೆ ಬರವಣಿಗೆ ಸುಲಭವಾಗಿ ಮೂಡುತ್ತದೆ. ಆದ್ದರಿಂದ ಜನತೆ ಅಧ್ಯಯನದತ್ತ ಹೆಚ್ಚು ಆಸಕ್ತಿ ವಹಿಸಬೇಕು ಎಂದು ಆಶಯ ವ್ಯಕ್ತಪಡಿಸಿದರು.

16 ಯುವ ಕವಿಗಳು ಭಾಗಿ
ಕವಿಗೋಷ್ಠಿಯಲ್ಲಿ ಮಹೇಶ್ ಹೈಕಾಡಿ, ಅಶ್ವಿನಿ ಕೆ. ಕೊಂಜಾಡಿ, ಸಚಿನ್ ಕುಚ್ಚೂರು, ವಿಷ್ಣುಧರನ್ ಮಡಾಮಕ್ಕಿ , ಅಕ್ಷಿತಾ ಕೆ ಶೆಟ್ಟಿ ಸೋಮೇಶ್ವರ, ಫಲಿತ ಬಚ್ಚಪ್ಪು, ಪ್ರದೀಪ್ ಆನಂದ ಶೆಟ್ಟಿ ಸಿರಿಬೈಲು, ಧೀರಜ್
ಕನ್ಯಾನ, ಸವಿತಾ ರತ್ನಾಕರ್ ಪೂಜಾರಿ, ನವ್ಯಶ್ರೀ ಮುದ್ರಾಡಿ, ಈರೇಶ, ರಾಧಿಕಾ ಅಡಾಲ್ ಬೆಟ್ಟು, ಮಂಜುನಾಥ ಕೆ. ಶಿವಪುರ, ವಂದನಾ ಚಾರ, ಪುಷ್ಪಾವತಿ ಬಚ್ಚಪ್ಪು, ಪ್ರೇಮ ಬೀರಾದಾರ ಎಂಬ ಹದಿನಾರು ಯುವ ಕವಿಗಳು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ. ಪ್ರಸಾದ್‌ ರಾವ್‌ ಎಂ., ಕ.ಸಾ.ಪ ಪದಾಧಿಕಾರಿಗಳು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕ. ಸಾ. ಪ. ಹೆಬ್ರಿ ತಾಲೂಕು ಘಟಕದ ಗೌರವ ಕಾರ್ಯದರ್ಶಿ ಡಾ. ಪ್ರವೀಣ ಕುಮಾರ್ ಎಸ್. ಸ್ವಾಗತಿಸಿ, ಅಧ್ಯಕ್ಷ ಶ್ರೀನಿವಾಸ ಭಂಡಾರಿ ಪ್ರಸ್ತಾವನೆ ಗೈದರು. ಮಂಜುನಾಥ ಕೆ. ಶಿವಪುರ ನಿರೂಪಿಸಿದರು. ಮಹೇಶ್ ಹೈಕಾಡಿ ವಂದಿಸಿದರು.

LEAVE A REPLY

Please enter your comment!
Please enter your name here

Most Popular

error: Content is protected !!