Saturday, December 10, 2022
spot_img
Homeಸುದ್ದಿಪಾದಚಾರಿಗೆ ಬೈಕ್‌ ಡಿಕ್ಕಿ - ನಲ್ಲೂರು ವ್ಯಕ್ತಿ ಸಾವು

ಪಾದಚಾರಿಗೆ ಬೈಕ್‌ ಡಿಕ್ಕಿ – ನಲ್ಲೂರು ವ್ಯಕ್ತಿ ಸಾವು

ಕಾರ್ಕಳ :‌ ಬೈಕ್‌ ಡಿಕ್ಕಿ ಹೊಡೆದು ಪಾದಚಾರಿ ಸಾವಿಗೀಡಾದ ಘಟನೆ ಮೂಡಬಿದ್ರೆ ಮಹಾವೀರ ಕಾಲೇಜು ಸಮೀಪ ನ. 24ರಂದು ಸಂಭವಿಸಿದೆ. ನಲ್ಲೂರು ಜಯಚಂದ್ರ (48) ಎಂಬವರೇ ಮೃತಪಟ್ಟ ದುರ್ದೈವಿ. ಮೂಡಬಿದ್ರೆ ಕಡೆಯಿಂದ ಮಹಾವೀರ ಕಾಲೇಜಿನತ್ತ ಸಾಗುತ್ತಿದ್ದ ಬೈಕ್‌ ಅಪೂರ್ವನಗರ ಕ್ರಾಸ್‌ ನಲ್ಲಿ ರಸ್ತೆ ದಾಟುತ್ತಿದ್ದ ಜಯಚಂದ್ರ ಅವರಿಗೆ ಢಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಜಯಚಂದ್ರ ಅವರು ರಸ್ತೆಗೆ ಎಸೆಯಲ್ಪಟ್ಟು ತಲೆಗೆ ಗಾಯವಾಗಿದೆ. ಕೂಡಲೇ ಅವರನ್ನು ಚಿಕಿತ್ಸೆಗಾಗಿ ಮೂಡಬಿದ್ರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ. ವಿದೇಶದಲ್ಲಿ ಉದ್ಯೋಗದಲ್ಲಿದ್ದ ಜಯಚಂದ್ರ ಅವರು 4 ತಿಂಗಳ ಹಿಂದೆಯಷ್ಟೇ ಊರಿಗೆ ಆಗಮಿಸಿದ್ದರು. ಪತ್ನಿ, ಮಕ್ಕಳೊಂದಿಗೆ ಮೂಡಬಿದ್ರೆ ವಿಶಾಲ್‌ ನಗರದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.

LEAVE A REPLY

Please enter your comment!
Please enter your name here

Most Popular

error: Content is protected !!