Tuesday, December 6, 2022
spot_img
Homeಸುದ್ದಿನ. 24ರಂದು ಕಾರ್ಕಳದ ವಿವಿಧೆಡೆ ವಿದ್ಯುತ್‌ ಸ್ಥಗಿತ

ನ. 24ರಂದು ಕಾರ್ಕಳದ ವಿವಿಧೆಡೆ ವಿದ್ಯುತ್‌ ಸ್ಥಗಿತ

ಕಾರ್ಕಳ : ವಿದ್ಯುತ್‌ ಲೈನಿನ ನಿರ್ವಹಣೆಯಿರುವುದರಿಂದ ಜಾರ್ಕಳ ಮತ್ತು ಹಿರ್ಗಾನ ಫೀಡರ್‌ ವ್ಯಾಪ್ತಿಯಲ್ಲಿ ನ. 24 ರಂದು ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. 110 ಕೆವಿ ಕಾರ್ಕಳ ಉಪಕೇಂದ್ರದಿಂದ 11 ಕೆವಿ ಟಿ.ಎಂ.ಸಿ., ಜಾರ್ಕಳ ಮತ್ತು ಹಿರ್ಗಾನ ಲೈನಿನ ನಿರ್ವಹಣೆ ಮಾಡಲಾಗುವುದು. ಹೀಗಾಗಿ 110 ಕೆವಿ ಕಾರ್ಕಳ ವಿದ್ಯುತ್‌ ಉಪಕೇಂದ್ರದಿಂದ ಹೊರಡುವ ಜಾರ್ಕಳ ಮತ್ತು ಹಿರ್ಗಾನ ಫೀಡರ್‌ನಲ್ಲಿ ನ. 24ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್‌ ನಿಲುಗಡೆಯಾಗಲಿದೆ. ದುರ್ಗಾ, ಮಲೆಬೆಟ್ಟು, ಕಡಂಬಳ, ಹಿರ್ಗಾನ, ಮುಜೂರು, ನೆಲ್ಲಿಕಟ್ಟೆ, ಎಣ್ಣೆಹೊಳೆ, ಚಿಕ್ಕಾಲ್‌ಬೆಟ್ಟು, ಹೆರ್ಮುಂಡೆ, ಕುಕ್ಕುಂದೂರು, ಅಯ್ಯಪ್ಪನಗರ, ಪಿಲಿಚಂಡಿಸ್ಥಾನ, ಗಣಿತ ನಗರ, ಜಾರ್ಕಳ, ಎಣ್ಣೆಹೊಳೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯವಾಗಲಿದ್ದು ಗ್ರಾಹಕರು ಸಹಕರಿಸುವಂತೆ ಕಾರ್ಕಳ ಮೆಸ್ಕಾಂ ಇಲಾಖೆ ಪ್ರಕಟನೆಯಲ್ಲಿ ತಿಳಿಸಿದೆ.

LEAVE A REPLY

Please enter your comment!
Please enter your name here

Most Popular

error: Content is protected !!