Tuesday, December 6, 2022
spot_img
Homeಸುದ್ದಿಕಾರ್ಕಳದಲ್ಲಿ ಹೆಚ್ಚುತ್ತಿರುವ ಕೆಂಗಣ್ಣು

ಕಾರ್ಕಳದಲ್ಲಿ ಹೆಚ್ಚುತ್ತಿರುವ ಕೆಂಗಣ್ಣು

ಕಾರ್ಕಳ : ಕರಾವಳಿ ಭಾಗದಲ್ಲಿ ಕೆಂಗಣ್ಣು ರೋಗ ಎಲ್ಲೆಡೆ ವ್ಯಾಪಿಸಿದೆ. ಕಾರ್ಕಳದಲ್ಲೂ ಕೆಂಗಣ್ಣು ಹರಡುವಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕಾರ್ಕಳ ವ್ಯಾಪ್ತಿಯ ಶಾಲೆಗಳಲ್ಲಿ ಅದರಲ್ಲೂ ವಸತಿ ಶಾಲೆಗಳಲ್ಲಿ ಕೆಂಗಣ್ಣು ಪ್ರಕರಣ ವರದಿಯಾಗುತ್ತಿದೆ. ಚಳಿಗಾಲದಲ್ಲಿ ಸಾಮಾನ್ಯವಾಗಿ ಕಂಡುಬರುವ ಈ ಕಾಯಿಲೆಯೂ ಇತರೆ ಕಾಯಿಲೆಗಳಷ್ಟು ಅಪಾಯಕಾರಿಯಲ್ಲದಿದ್ದರೂ ಒಬ್ಬರಿಂದ ಒಬ್ಬರಿಗೆ ಅತಿ ವೇಗವಾಗಿ ಹರಡುತ್ತದೆ. ಮದ್ರಾಸ್‌ ಐ ಎಂದು ಕರೆಯಲ್ಪಡುವ ಕೆಂಗಣ್ಣು ಅಥವಾ ಕಂಜೆಕ್ಟಿವಿಟೀಸ್‌ ವೈರಾಣುವಿನಿಂದ ಬರುವ ಕಾಯಿಲೆಯಾಗಿದೆ. ಕಣ್ಣಿನ ಬಿಳಿಭಾಗ ಮತ್ತು ಕಣ್ಣಿನ ರೆಪ್ಪೆಗಳ ಒಳಭಾಗ ಊರಿಯೂತಕ್ಕೆ ಈಡಾಗಿ ಕೆಂಪು ಬಣ್ಣಕ್ಕೆ ಹೊಂದಿಕೊಳ್ಳುವುದು ಇದರ ಲಕ್ಷಣ.

ಶಾಲೆಯಲ್ಲಿ ಮಕ್ಕಳು ಒಟ್ಟಾಗಿ ಇರುವುದರಿಂದ ಹರಡುವಿಕೆಯ ಪ್ರಕರಣ ಹೆಚ್ಚಾಗುತ್ತಿದೆ. ಕಾರ್ಕಳ ಆರೋಗ್ಯ ಕೇಂದ್ರ ಮತ್ತು ಸ್ಥಳಿಯ ವೈದ್ಯಾಧಿಕಾರಿಗಳು ಶಾಲೆಗಳಿಗೆ ತೆರಳಿ ಮಕ್ಕಳಲ್ಲಿ ಈ ಕುರಿತು ಜಾಗೃತಿ ಕಾರ್ಯಕ್ರಮ ಮತ್ತು ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಕೃಷ್ಣಾನಂದ ಶೆಟ್ಟಿ ಹೇಳಿದ್ದಾರೆ. ರೋಗ ಲಕ್ಷಣವಿರುವವರು ಜನ ಸಂಪರ್ಕದಿಂದ ಅಂತರ ಕಾಪಾಡಿಕೊಳ್ಳಬೇಕು. ಮನೆಯಲ್ಲೇ ಇದ್ದು ವಿಶ್ರಾಂತಿ ಪಡೆಯುವುದು. ಕಣ್ಣಿನ ಭಾಗಗಳು, ಮುಖಗಳಿಗೆ ಕೈ ಸ್ಪರ್ಶವಾಗುವುದರಿಂದ ಪದೇ ಪದೇ ಕೈ ತೊಳೆದುಕೊಳ್ಳುವುದು. ವೈದರ ಸಲಹೆಯಂತೆ ಔಷಧಿಯನ್ನು ಪಡೆಯುವುದು. ಈ ಮೂಲಕ ರೋಗ ಹರಡುವಿಕೆಯ ಪ್ರಮಾಣವನ್ನು ಕಡಿಮೆಗೊಳಿಸಬಹುದು ಎಂದು ಅವರು ಸಲಹೆ ನೀಡಿದ್ದಾರೆ.

LEAVE A REPLY

Please enter your comment!
Please enter your name here

Most Popular

error: Content is protected !!