Thursday, December 1, 2022
spot_img
Homeಸುದ್ದಿಕೋಟಿ ಚೆನ್ನಯ ಥೀಮ್‌ ಪಾರ್ಕ್‌ನಲ್ಲಿ ಪ್ರತಿ ತಿಂಗಳು ನಡೆಯಲಿದೆ ಸಾಂಸ್ಕೃತಿಕ ಕಾರ್ಯಕ್ರಮ

ಕೋಟಿ ಚೆನ್ನಯ ಥೀಮ್‌ ಪಾರ್ಕ್‌ನಲ್ಲಿ ಪ್ರತಿ ತಿಂಗಳು ನಡೆಯಲಿದೆ ಸಾಂಸ್ಕೃತಿಕ ಕಾರ್ಯಕ್ರಮ

ನ. 26ರಂದು ರಾಮ ನಿರ್ಯಾಣ ತಾಳಮದ್ದಳೆ

ಕಾರ್ಕಳ : ಕಾರ್ಕಳ ಕೋಟಿ ಚೆನ್ನಯ್ಯ ಥೀಂ ಪಾರ್ಕ್ ನಲ್ಲಿ ನ. 26 ರಂದು ಸಂಜೆ 5.30 ರಿಂದ ರಾತ್ರಿ 8.30 ರ ವರೆಗೆ ‘ರಾಮ ನಿರ್ಯಾಣ’ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ಭಾಗವತರಾಗಿ ರವಿಚಂದ್ರ ಕನ್ನಡಿಕಟ್ಟೆ ಮತ್ತು ಗಣೇಶ್ ಹೆಬ್ರಿ, ಮದ್ದಳೆಯಲ್ಲಿ ಚೈತನ್ಯ ಕೃಷ್ಣ ಪದ್ಯಾಣ, ಚೆಂಡೆಯಲ್ಲಿ ಆನಂದ ಗುಡಿಗಾರ್ ಸಹಕರಿಸಲಿದ್ದಾರೆ. ಅರ್ಥಧಾರಿಗಳಾಗಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಎಂ. ಪ್ರಭಾಕರ ಜೋಶಿ, ವಾಗ್ಮಿಗಳಾದ ಉಮಾಕಾಂತ ಭಟ್ ಕೆರೆಕೈ, ಜಬ್ಬಾರ್ ಸಮೊ, ಪ್ರಸಾದ್ ಪೂಜಾರಿ ಭಟ್ಕಳ್ ಭಾಗವಹಿಸಲಿದ್ದಾರೆ.
ತಾಳಮದ್ದಳೆಗೆ ಉಚಿತ ಪ್ರವೇಶವಾಗಿರುತ್ತದೆ.

ಪ್ರತಿ ತಿಂಗಳು ಸಾಂಸ್ಕೃತಿಕ ಸಂಜೆ
ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವ ವಿ. ಸುನಿಲ್ ಕುಮಾರ್ ಅವರ ಆಶಯದಂತೆ, ಕೋಟಿ ಚೆನ್ನಯ ಥೀಂ ಪಾರ್ಕ್ ಅಭಿವೃದ್ಧಿ ಸಮಿತಿಯ ಸಭೆಯಲ್ಲಿ ತೀರ್ಮಾನವಾದಂತೆ ಥೀಂ ಪಾರ್ಕ್ ನಲ್ಲಿ ಪ್ರತಿ ತಿಂಗಳು ವೈವಿಧ್ಯಮಯ ಸಾಂಸ್ಕೃತಿಕ ಚಟುವಟಿಕೆಗಳು ನಡೆಯಲಿವೆ. ಸಾಂಸ್ಕೃತಿಕ ಕಾರ್ಯಕ್ರಮಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ, ಕೋಟಿ ಚೆನ್ನಯ ಥೀಮ್‌ ಪಾರ್ಕ್‌ ಅಭಿವೃದ್ಧಿ ಸಮಿತಿ ಹಾಗೂ ಯಕ್ಷ ರಂಗಾಯಣ ಕಾರ್ಕಳ ಇದರ ಸಹಕಾರದೊಂದಿಗೆ ನಡೆಯಲಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋಟಿ ಚೆನ್ನಯ ಥೀಮ್‌ ಪಾರ್ಕ್‌ ಅಭಿವೃದ್ಧಿ ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ.

LEAVE A REPLY

Please enter your comment!
Please enter your name here

Most Popular

error: Content is protected !!