Saturday, December 10, 2022
spot_img
Homeಸುದ್ದಿಈ ಆರೋಗ್ಯ ಸಮಸ್ಯೆಯಿದ್ದರೆ ಶಬರಿಮಲೆ ಯಾತ್ರೆ ಮಾಡಬೇಡಿ

ಈ ಆರೋಗ್ಯ ಸಮಸ್ಯೆಯಿದ್ದರೆ ಶಬರಿಮಲೆ ಯಾತ್ರೆ ಮಾಡಬೇಡಿ

ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಬಿಡುಗಡೆ

ಶಬರಿಮಲೆ : ಶಬರಿಮಲೆ ಯಾತ್ರೆಗೈಯ್ಯುವ ಭಕ್ತರಿಗೆ ಕೇರಳದ ಆರೋಗ್ಯ ಇಲಾಖೆ ಕೆಲವು ಆರೋಗ್ಯ ಸಂಬಂಧಿ ಸೂಚನೆಗಳನ್ನು ಬಿಡುಗಡೆಗೊಳಿಸಿ ಅವುಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಹೇಳಿದೆ.
ಉಸಿರಾಟದ ತೊಂದರೆ, ಹೃದ್ರೋಗ, ಅಸ್ತಮಾ ಸೇರಿ ಉಸಿರಾಟ ಸಂಬಂಧಿತ ಗಂಭೀರ ಆರೋಗ್ಯ ಸಮಸ್ಯೆ ಇರುವವರು ಶಬರಿಮಲೆ ಬೆಟ್ಟ ಏರಬಾರದು ಎಂದು ಯಾತ್ರಾರ್ಥಿಗಳಿಗೆ ಆರೋಗ್ಯ ಇಲಾಖೆ ತಿಳಿಸಿದೆ. ಕೆಮ್ಮು, ಜ್ವರ, ಶೀತದ ಲಕ್ಷಣ ಹಾಗೂ ಗಂಟಲು ನೋವು ಇರುವ ಭಕ್ತಾಧಿಗಳು ಹೆಚ್ಚು ಪ್ರಯಾಣ ಮಾಡಬಾರದು. ಮಧುಮೇಹ, ಅಧಿಕ ರಕ್ತದೊತ್ತಡ ಸೇರಿದಂತೆ ಇತರ ಕಾಯಿಲೆಗಳಿಂದ ಬಳಲುತ್ತಿರುವ ಭಕ್ತಾದಿಗಳು ವೈದ್ಯರು ಸೂಚಿಸಿರುವ ಔಷಧಗಳನ್ನು ಹಾಗೂ ಚಿಕಿತ್ಸೆಯ ದಾಖಲೆಗಳನ್ನು ತಮ್ಮೊಂದಿಗೆ ಕೊಂಡೊಯ್ಯುವಂತೆ ಆರೋಗ್ಯ ಇಲಾಖೆ ಅಯ್ಯಪ್ಪ ಸ್ವಾಮಿ ಭಕ್ತಾಧಿಗಳಿಗೆ ಸೂಚನೆ ನೀಡಿದೆ.
ಆರೋಗ್ಯ ಸಮಸ್ಯೆ ಇರುವ ಭಕ್ತರು ಅಯ್ಯಪ್ಪ ಯಾತ್ರೆಗೂ ಮೊದಲು ವೈದ್ಯರಿಂದ ಸೂಕ್ತ ಮಾರ್ಗದರ್ಶನ ಪಡೆದಿರಬೇಕು. ಯಾತ್ರೆ ಸಂದರ್ಭದಲ್ಲಿ ನಿಗದಿತ ಔಷಧಿಗಳನ್ನು ತೆಗೆದುಕೊಳ್ಳಬೇಕು. ಶಬರಿಮಲೆ ಬೆಟ್ಟ ಏರಲು ಕನಿಷ್ಟ ಎರಡು ವಾರಗಳ ಮುಂಚಿತವಾಗಿ ಓಟ ಹಾಗೂ ನಡಿಗೆ ಸೇರಿದಂತೆ ದೈಹಿಕ ವ್ಯಾಯಾಮಗಳನ್ನು ರೂಢಿಸಿಕೊಳ್ಳುವುದು ಉತ್ತಮ ಎಂದು ಆರೋಗ್ಯ ಇಲಾಖೆ ಕಿವಿಮಾತು ಹೇಳಿದೆ.
ದೇವಾಲಯದಲ್ಲಿ ಕಳೆದ ಎರಡು ವರ್ಷಗಳಿಂದ ಜಾರಿಯಲ್ಲಿದ್ದ ಸಾಂಕ್ರಾಮಿಕ ಪ್ರೊಟೋಕಾಲ್‌ ತೆಗೆದು ಹಾಕಲಾಗಿದ್ದು, ಕೋವಿಡ್‌ ವೇಳೆ ಹಾಕಲಾಗಿದ್ದ ನಿರ್ಬಂಧಗಳನ್ನು ಈ ವರ್ಷ ತೆರವುಗೊಳಿಸಲಾಗಿದೆ.
ಶಬರಿಮಲೆ ಅಯ್ಯಪ್ಪ ದೇವಾಲಯದ ಬಾಗಿಲನ್ನು ವಾರ್ಷಿಕ ಮಂಡಲಂ ಮತ್ತು ಮಕರ ವಿಳಕ್ಕು ಯಾತ್ರೆಗಾಗಿ ನ. 17ರಂದು ತೆರೆಯಲಾಗಿದೆ. ದೇಶದ ಮೂಲೆ ಮೂಲೆಯಿಂದ ಲಕ್ಷಾಂತರ ಭಕ್ತರು ಶಬರಿಮಲೆಹೋಗುತ್ತಿದ್ದಾರೆ.ದೇವಾಲಯ ಭಕ್ತರಿಂದ ತುಂಬಿ ತುಳುಕುತ್ತಿದೆ. ನೂಕುನುಗ್ಗಲು ಕೂಡ ಉಂಟಾಗುತ್ತಿದೆ.

LEAVE A REPLY

Please enter your comment!
Please enter your name here

Most Popular

error: Content is protected !!