Saturday, December 10, 2022
spot_img
Homeಸುದ್ದಿಜಿ-20 ಶೃಂಗಸಭೆಯಲ್ಲಿ ಜಾಗತಿಕ ನಾಯಕರ ಜಗಳ

ಜಿ-20 ಶೃಂಗಸಭೆಯಲ್ಲಿ ಜಾಗತಿಕ ನಾಯಕರ ಜಗಳ

ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ, ಚೀನದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ನಡುವೆ ಮಾತಿನ ಚಕಮಕಿ

ಬಾಲಿ : ಇಂಡೋನೇಷ್ಯಾದ ಬಾಲಿಯಲ್ಲಿ ನಡೆದ ಜಿ-20 ಶೃಂಗಸಭೆಯಲ್ಲಿ ಚೀನದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಹಾಗೂ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ತಮ್ಮಿಬ್ಬರ ನಡುವೆ ನಡೆದ ಗಂಭೀರ ಚರ್ಚೆಗಳು ಮಾಧ್ಯಮಗಳಿಗೆ ಸೋರಿಕೆಯಾಗಿದೆ ಎಂದು ಟ್ರುಡೊ ಮುಂದೆ ಜಿನ್‌ಪಿಂಗ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನ.15ರಂದು ನಡೆದ ಮಾತಕತೆ ವಿಚಾರವಾಗಿ ಈ ಇಬ್ಬರು ನಾಯಕರ ನಡುವೆ ಜಗಳವಾಗಿದೆ. ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಬಗ್ಗೆ ಚೀನಾ ಪ್ರಧಾನಿ ಅಸಮಾಧಾನವನ್ನು ವ್ಯಕ್ತಪಡಿಸುತ್ತಿರುವುದು ವಿಡಿಯೋ ಸಂಭಾಷಣೆವೈರಲ್‌ ಆಗಿದೆ..
ಕೊನೆಗೆ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಕೋಪಗೊಂಡು ಹೊರನಡೆದ ದೃಶ್ಯ ವಿಡಿಯೋದ ಕೊನೆಯಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಕ್ಸಿ ಜಿನ್‌ಪಿಂಗ್ ಅವರು ಜಸ್ಟಿನ್ ಟ್ರುಡೊ ಅವರೊಂದಿಗೆ ಮಾಧ್ಯಮ ಸೋರಿಕೆ ವಿಷಯದ ಬಗ್ಗೆ ಚರ್ಚಿಸುತ್ತಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿದೆ. ಈ ವಿಚಾರವಾಗಿ ಜಿನ್‌ಪಿಂಗ್‌ ಆಕ್ಷೇಪವನ್ನೂ ವ್ಯಕ್ತಪಡಿಸುತ್ತಿದ್ದಾರೆ.
ಈ ವೇಳೆ ಟ್ರೂಡೊ ಜಿನ್‌ಪಿಂಗ್‌ಗೆ ನೇರ ಉತ್ತರ ನೀಡುತ್ತಿರುವುದು ಕಂಡುಬಂದಿದೆ. ತಾವು ಚರ್ಚಿಸಿದ್ದೆಲ್ಲ ಪತ್ರಿಕೆಗಳಲ್ಲಿ ಸೋರಿಕೆಯಾಗಿದೆ ಎಂದು ಜಿನ್‌ಪಿಂಗ್ ಕೆನಡಾದ ಪ್ರಧಾನಿಗೆ ಹೇಳುತ್ತಿದ್ದಾರೆ. ಇದೇ ವೇಳೆ, ನಾವು ಮುಕ್ತ ಮತ್ತು ಸ್ಪಷ್ಟವಾದ ಸಂಭಾಷಣೆಯನ್ನು ನಡೆಸುತ್ತೇವೆ. ಇದನ್ನು ಮುಂದುವರಿಸುತ್ತೇವೆ ಎಂದು ಹೇಳುವ ಮೂಲಕ ಟ್ರೂಡೊ ತಕ್ಷಣವೇ ಪ್ರತಿಕ್ರಿಯಿಸಿದ್ದಾರೆ.

LEAVE A REPLY

Please enter your comment!
Please enter your name here

Most Popular

error: Content is protected !!