Thursday, December 1, 2022
spot_img
Homeಸುದ್ದಿಮತ್ತೆ ಸಾವರ್ಕರ್‌ ಅವಮಾನಿಸಿದ ರಾಹುಲ್‌ ಗಾಂಧಿ

ಮತ್ತೆ ಸಾವರ್ಕರ್‌ ಅವಮಾನಿಸಿದ ರಾಹುಲ್‌ ಗಾಂಧಿ

ಪೊಲೀಸ್‌ ಕೇಸ್‌ ದಾಖಲಿಸಲು ಮೊಮ್ಮಗ ನಿರ್ಧಾರ

ಮುಂಬಯಿ : ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮತ್ತೆ ವೀರ ಸಾವರ್ಕರ್‌ ವಿರುದ್ಧ ಅವಮಾನಿಕಾರಿಯಾಗಿ ಮಾತನಾಡಿ ವಿವಾದದ ಕಿಡಿಯೆಬ್ಬಿಸಿದ್ದಾರೆ. ಅವರ ವಿರುದ್ಧ ಪೊಲೀಸ್‌ ದೂರು ದಾಖಲಿಸಲು ಸಾವರ್ಕರ್‌ ಮೊಮ್ಮಗ ರಂಜಿತ್‌ ಸಾವರ್ಕರ್‌ ನಿರ್ಧರಿಸಿದ್ದಾರೆ.
ಭಾರತ್‌ ಜೋಡೊ ಯಾತ್ರೆಯಲ್ಲಿ ಮಂಗಳವಾರ ನಡೆದ ಬುಡಕಟ್ಟು ಸಮಾವೇಶವೊಂದರಲ್ಲಿ ರಾಹುಲ್‌ ಗಾಂಧಿ, ಸಾವರ್ಕರ್‌ ವಿರುದ್ಧ ಹಗುರವಾಗಿ ಮಾತನಾಡಿದ್ದಾರೆ. ಸಾವರ್ಕರ್‌ ಬ್ರಿಟಿಷರಿಂದ ಪಿಂಚಣೆ ಪಡೆದು ಕಾಂಗ್ರೆಸ್‌ ವಿರುದ್ಧ ಕೆಲಸ ಮಾಡಿದ್ದಾರೆ ಎಂದು ರಾಹುಲ್‌ ಗಾಂಧಿ ಹೇಳಿದ್ದರು. ಅಂಡಮಾನ್‌ನಲ್ಲಿ ಸೆರೆಮನೆ ವಾಸ ಅನುಭವಿಸಿದ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಸಾವರ್ಕರ್‌ಗೆ ನೇರವಾಗಿ ಮಾಡಿದ ಅವಮಾನ ಇದು ಎಂದು ಸಾವರ್ಕರ್‌ ಅಭಿಮಾನಿಗಳು ಕಿಡಿ ಕಾರಿದ್ದಾರೆ.
ಕಾಂಗ್ರೆಸ್‌ ನಾಯಕರು ಸಾವರ್ಕರ್‌ ಮತ್ತಿತರ ನಾಯಕರನ್ನು ಅವಮಾನಿಸುವುದು ಇದೇ ಮೊದಲಲ್ಲ. ರಾಹುಲ್‌ ಗಾಂಧಿ ಅವಕಾಶ ಸಿಕ್ಕಿದಾಗಲೆಲ್ಲ ಸಾವರ್ಕರ್‌ ವಿರುದ್ಧ ಮಾತನಾಡುತ್ತಾರೆ.

LEAVE A REPLY

Please enter your comment!
Please enter your name here

Most Popular

error: Content is protected !!