Saturday, December 10, 2022
spot_img
Homeಸುದ್ದಿರೈಲು ನಿಲ್ಲಿಸಿ ಪ್ರಯಾಣಿಕರಿಗೆ ಆತಂಕ ಮೂಡಿಸಿದ ಇಲಿ

ರೈಲು ನಿಲ್ಲಿಸಿ ಪ್ರಯಾಣಿಕರಿಗೆ ಆತಂಕ ಮೂಡಿಸಿದ ಇಲಿ

ಉಡುಪಿ : ಕಾರವಾರದಿಂದ ಬೆಂಗಳೂರಿಗೆ ಸಾಗುತ್ತಿದ್ದ ರೈಲಿನಲ್ಲಿ ನಡುರಾತ್ರಿ ಸೈರನ್ ಸದ್ದು ಕೇಳಿ ಪ್ರಯಾಣಿಕರು ಆತಂಕಕ್ಕೊಳಗಾದ ಘಟನೆ ನ.15ರಂದು ಹಾಸನ ಜಂಕ್ಷನ್ ಬಳಿ ನಡೆದಿದೆ. ರೈಲು ರಾತ್ರಿ ಒಂದು ಗಂಟೆಗೆ ಹಾಸನದ ಬಳಿ ಸಾಗುತ್ತಿದ್ದಾಗ ಬಿ1 ಬೋಗಿಯಲ್ಲಿ ಬೆಂಕಿ ಎಚ್ಚರಿಕೆಯ ಸೈರನ್ ಮೊಳಗ ತೊಡಗಿತು. ಸೈರನ್‌ ಸದ್ದು ಕೇಳಿದ ಕೂಡಲೇ ನಿದ್ರೆಯಲ್ಲಿದ್ದ ಪ್ರಯಾಣಿಕರು ಕಂಗಾಲಾಗಿ ಬಾಗಿಲ ಬಳಿ ಜಮಾಯಿಸಿದರು. ನಂತರದಲ್ಲಿ ತಾಂತ್ರಿಕ ಸಿಬ್ಬಂದಿ ಪರಿಶೀಲಿಸಿದಾಗ ವಿದ್ಯುತ್ ಬೋರ್ಡ್ ಒಳಗಡೆ ಇಲಿ ನುಸುಳಿ ಅವಾಂತರ ಸೃಷ್ಟಿಸಿರುವುದು ತಿಳಿದು ಬಂದಿತು. ಹಾಸನದಲ್ಲಿ ರೈಲನ್ನು ನಿಲ್ಲಿಸಿ ದುರಸ್ತಿ ಮಾಡಲಾಯಿತು.

LEAVE A REPLY

Please enter your comment!
Please enter your name here

Most Popular

error: Content is protected !!