Saturday, December 10, 2022
spot_img
Homeಸುದ್ದಿನ. 18ರಂದು ವಿದ್ಯುತ್‌ ನಿಲುಗಡೆ

ನ. 18ರಂದು ವಿದ್ಯುತ್‌ ನಿಲುಗಡೆ

ಕಾರ್ಕಳ : ವಿದ್ಯುತ್‌ ಲೈನ್‌ನ ನಿರ್ವಹಣೆಯಿರುವುದರಿಂದ ಜಾರ್ಕಳ, ಅಜೆಕಾರು, ಹಿರ್ಗಾನ ಫೀಡರ್‌ ವ್ಯಾಪ್ತಿಯಲ್ಲಿ ನ. 18ರಂದು ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟನೆ ತಿಳಿಸಿದೆ. 110 ಕೆವಿ ಕಾರ್ಕಳ ವಿದ್ಯುತ್ ಉಪಕೇಂದ್ರದಿಂದ 11 ಕೆವಿ ಟಿ.ಎಂ.ಸಿ, ಜಾರ್ಕಳ, ಅಜೆಕಾರು, ಬಂಡೀಮಠ ಮತ್ತು ಹೀರ್ಗಾನ ಲೈನಿನ ನಿರ್ವಹಣೆ ಮಾಡಲಾಗುವುದು. ಹೀಗಾಗಿ 110 ಕೆವಿ ಕಾರ್ಕಳ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಜಾರ್ಕಳ, ಅಜೆಕಾರು ಮತ್ತು ಹೀರ್ಗಾನ ಫೀಡರ್ ನಲ್ಲಿ ಅಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ, ದುರ್ಗ, ಮಲೆಬೆಟ್ಟು, ಕಡಂಬಳ, ಹಿರ್ಗಾನ, ಮುಜೂರು, ನೆಲ್ಲಿಕಟ್ಟೆ, ಎಣ್ಣೆಹೊಳೆ, ಚಿಕ್ಕಾಲ್ ಬೆಟ್ಟು, ಹೆರ್ಮುಂಡೆ, ಬಂಗ್ಲೆಗುಡ್ಡೆ, ಬಂಡಿಮಠ, ಕಲ್ಲೊಟ್ಟೆ, ಪೆರ್ವಾಜೆ, ತೆಳ್ಳಾರು, ಕುಕ್ಕುಂದೂರು, ಅಯ್ಯಪ್ಪನಗರ, ಪಿಲಿಚಂಡಿಸ್ಥಾನ, ಗಣಿತನಗರ, ಜಾರ್ಕಳ, ಮಂಗಿಲಾರು, ಅಜೆಕಾರು, ಅಂಡಾರು, ಕಡಲ, ಕುಕ್ಕುಜೆ, ಶಿರ್ಲಾಲು, ಕಾಡುಹೊಳೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಇಲಾಖೆ ತಿಳಿಸಿದೆ.

LEAVE A REPLY

Please enter your comment!
Please enter your name here

Most Popular

error: Content is protected !!