ಕಾರ್ಕಳ: ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನದಲ್ಲಿ ನ.20 ರಂದು ಏಕಾಹ ಭಜನೆ ಮತ್ತು ನ.21ರಂದು ರಂಗ ಪೂಜಾ ದೀಪೋತ್ಸವ ನಡೆಯಲಿದೆ. ಶ್ರೀ ಕಾಳಿಕಾಂಬಾ ಭಜನಾ ಸೇವಾ ಸಮಿತಿಯಿಂದ 20ರಂದು ಬೆಳಿಗ್ಗೆ ಗಂಟೆ 6-33ಕ್ಕೆ ಭಜನೆ ಆರಂಭಗೊಂಡು 21ರಂದು ಬೆಳಿಗ್ಗೆ 6-33ಕ್ಕೆ ಭಜನಾ ಮಂಗಳವಾಗಲಿದೆ.
ನ. 21 ರಂದು ಕ್ಷೇತ್ರದಲ್ಲಿ ರಂಗ ಪೂಜಾ ದೀಪೋತ್ಸವ ಜರುಗಲಿದೆ. 12 ಗಂಟೆಗೆ ಮಹಾ ಪೂಜೆ, ಬಲಿ ಹೊರಟು ವನಭೋಜನ ಕಟ್ಟೆಯಲ್ಲಿ ಧಾತ್ರಿಹೋಮ, ಪ್ರಸಾದ ವಿತರಣೆ, ವನಭೋಜನ, ರಾತ್ರಿ 8 ಗಂಟೆಗೆ ಮಹಾಪೂಜೆ, ರಂಗಪೂಜಾ ದೀಪೋತ್ಸವ ನಡೆಯಲಿದೆ. ಸಂಜೆ ಗಂಟೆ 7:30ಕ್ಕೆ ಶ್ರೀ ಶ್ರೀ ನಾಗಧರ್ಮೇಂದ್ರ ಸ್ವಾಮಿ ಕಲಾ ಮಂಟಪದಲ್ಲಿ ಧಾರ್ಮಿಕ ಸಭೆ ಜರುಗಲಿದ್ದು, ಸಾಧಕರಿಗೆ ಗೌರವ ಸಮರ್ಪಣೆ ಸಮಾರಂಭ ನಡೆಯಲಿದೆ. ಮುಖ್ಯ ಅತಿಥಿಯಾಗಿ ಇಂಧನ ಮತ್ತು ಕನ್ನಡ ಹಾಗೂ ಸಂಸ್ಕೃತಿ ಇಲಾಖೆ ಸಚಿವ ವಿ. ಸುನೀಲ್ ಕುಮಾರ್ ಉಪಸ್ಥಿತರಿರಲಿದ್ದು, ದೇವಸ್ಥಾನದ ಆಡಳಿತ ಮೋಕ್ತೇಸರ ಶಿಲ್ಪಿ ರಾಮಚಂದ್ರ ಆಚಾರ್ಯ ಅತ್ತೂರು ಅಧ್ಯಕ್ಷತೆ ವಹಿಸಲಿದ್ದಾರೆ.
ಸನ್ಮಾನ
ಕರ್ನಾಟಕ ಶಿಲ್ಪಾ ಕಲಾ ಅಕಾಡೆಮಿಯಿಂದ 2022ನೇ ಸಾಲಿನ ಶಿಲ್ಪ ಶ್ರೀ ಪ್ರಶಸ್ತಿ ಪುರಸ್ಕೃತ ಶಿಲ್ಪಿ ಕೆ. ಸತೀಶ್ ಆಚಾರ್ಯ ಮತ್ತು ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ 4ನೇ ರ್‍ಯಾಂಕ್ ಹಾಗೂ ಕರ್ನಾಟಕ ರಾಜ್ಯ ಸರಕಾರದ ರಾಜ್ಯ ಲೆಕ್ಕ ಪರಿಶೋಧಕ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿ ಸಹಾಯಕ ನಿಬಂಧಕರಾಗಿ ನಿಯುಕ್ತಿಗೊಂಡಿರುವ ವಿಜಯ್ ಕುಮಾರ್ ಅವರಿಗೆ ಸನ್ಮಾನ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಪ್ರಕಟನೆಯಲ್ಲಿ ತಿಳಿಸಿದೆ.