Saturday, December 10, 2022
spot_img
Homeಸ್ಥಳೀಯ ಸುದ್ದಿಸಹಕಾರಿ ಸಪ್ತಾಹದ ಮೂಲಕ ಸಹಕಾರಿ ವ್ಯವಸ್ಥೆ ಎಲ್ಲೆಡೆ ವಿಸ್ತರಿಸಿದೆ - ವಾದಿರಾಜ ಶೆಟ್ಟಿ

ಸಹಕಾರಿ ಸಪ್ತಾಹದ ಮೂಲಕ ಸಹಕಾರಿ ವ್ಯವಸ್ಥೆ ಎಲ್ಲೆಡೆ ವಿಸ್ತರಿಸಿದೆ – ವಾದಿರಾಜ ಶೆಟ್ಟಿ

ಕಾರ್ಕಳ : ಸಹಕಾರಿ ಸಪ್ತಾಹದ ಮೂಲಕ ಸಹಕಾರಿ ವ್ಯವಸ್ಥೆ ಎಲ್ಲೆಡೆ ವಿಸ್ತರಿಸುವಂತಾಗಿ ಸದೃಢವಾಗಿದೆ. ಕಾನೂನಿನ ಸಡಿಲಿಕೆ ಮೂಲಕ ಸರ್ವರೂ ಸಹಕಾರಿ ವ್ಯಾಪ್ತಿಗೆ ಬರುವಂತಾಗಬೇಕೆಂದು ಕಾರ್ಕಳ ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷ, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ವಾದಿರಾಜ ಶೆಟ್ಟಿ ಅಭಿಪ್ರಾಯಪಟ್ಟರು.
ಅವರು ನ. 16ರಂದು ಕಾರ್ಕಳ ತಾಲೂಕು ಲ್ಯಾಂಪ್ಸ್‌ ಸಹಕಾರ ಸಂಘದ ಸಭಾಂಗಣದಲ್ಲಿ 69ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ನಡೆದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಹಕಾರ ಶಿಕ್ಷಣದ ಕುರಿತು ಉಪನ್ಯಾಸ ನೀಡಿದ ಮೂಡಬಿದ್ರೆ ಧವಳಾ ಕಾಲೇಜು ಉಪನ್ಯಾಸಕ ಸಂತೋಷ್‌ ಶೆಟ್ಟಿ, ದೇಶದಲ್ಲಿ 30 ಕೋಟಿ ಜನ ಸಹಕಾರಿ ವ್ಯವಸ್ಥೆಯಡಿಯಲ್ಲಿದ್ದಾರೆ. ಮಹಿಳೆಯರು ಸ್ವಾವಲಂಬನೆ ಜೀವನ ನಡೆಸುವಂತಾಗುವಲ್ಲಿ ಸಹಕಾರಿ ಸಂಘಗಳ ಪಾತ್ರ ಮಹತ್ತರವಾಗಿದೆ. ಸಹಕಾರಿ ತತ್ವದಿಂದಾಗಿಯೇ ಕುರಿಯನ್‌, ಮೊಳಹಳ್ಳಿ ಶಿವರಾಯರು ಪ್ರತಿಷ್ಠಿತ ಸಂಸ್ಥೆ ಸ್ಥಾಪಿಸುವಂತಾಯಿತು ಎಂದರು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲದ ನಿರ್ದೇಶಕ ಬಿ. ಜಯಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಕಳ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ ಅಧ್ಯಕ್ಷ ಅಶೋಕ್ ಕುಮಾರ್ ಬಲ್ಲಾಳ್‌, ಕಾರ್ಕಳ ತಾಲೂಕು ಲ್ಯಾಂಪ್ಸ್‌ ಸಹಕಾರ ಸಂಘದ ಅಧ್ಯಕ್ಷ ರಾಘವ ನಾಯ್ಕ, ಸಹಕಾರ ಸಂಘಗಳ ಉಪನಿಬಂಧಕ ಲಕ್ಷ್ಮೀನಾರಾಯಣ ಜೆ.ಎನ್.‌, ಉಡುಪಿ ಜಿಲ್ಲಾ ಯೂನಿಯನ್‌ ನಿರ್ದೇಶಕರಾದ ಹರೀಶ್‌ ಶೆಟ್ಟಿ, ಅನಿಲ್‌ ಪೂಜಾರಿ, ಸುರೇಶ್‌, ನವೋದಯ ಚಾರಿಟೇಬಲ್‌ ಟ್ರಸ್ಟ್‌ ಟ್ರಸ್ಟಿ ಸುನೀಲ್‌ ಕುಮಾರ್‌ ಬಜಗೋಳಿ, ಎಸ್‌ಸಿಡಿಸಿಸಿ ಬ್ಯಾಂಕ್‌ ಕಾರ್ಕಳ ವಲಯ ಮೇಲ್ವಿಚಾರಕ ಜಯಂತ್‌ ಕುಮಾರ್‌ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಲ್ಯಾಪ್ಸ್‌ ಸೊಸೈಟಿ ಸಿಇಒ ದಿವಾಕರ ಶೆಟ್ಟಿ ಸ್ವಾಗತಿಸಿ, ನವೀನ್‌ ನಿರೂಪಿಸಿದರು. ಹರೀಶ್‌ ವಂದಿಸಿದರು.

LEAVE A REPLY

Please enter your comment!
Please enter your name here

Most Popular

error: Content is protected !!