Thursday, December 1, 2022
spot_img
Homeಸುದ್ದಿಜ. 25-26 : ಕೆರ್ವಾಶೆ ಮೈನ್ ಶಾಲಾ ಅಮೃತ ಮಹೋತ್ಸವ

ಜ. 25-26 : ಕೆರ್ವಾಶೆ ಮೈನ್ ಶಾಲಾ ಅಮೃತ ಮಹೋತ್ಸವ

ಕಾರ್ಕಳ : ಅಮೃತ ಮಹೋತ್ಸವದ ಹೊಸ್ತಿಲಲ್ಲಿರುವ ಕೆರ್ವಾಶೆ ಮೈನ್ ಹಿರಿಯ ಪ್ರಾಥಮಿಕ ಶಾಲೆಯ ಸ್ವಾಗತ ಗೋಪುರಕ್ಕೆ ಹಿರಿಯ ನ್ಯಾಯವಾದಿ, ಅಮೃತ ಮಹೋತ್ಸವ ಸಮಿತಿ ಗೌರವಾಧ್ಯಕ್ಷ ಎಂ.ಕೆ. ವಿಜಯಕುಮಾರ್ ನ. 16ರಂದು ಶಿಲಾನ್ಯಾಸ ನೆರವೇರಿಸಿದರು. ಜ. 25 ಮತ್ತು 26ರಂದು ಅಮೃತ ಮಹೋತ್ಸವ ಕಾರ್ಯಕ್ರಮ ಅತ್ಯಂತ ಅದ್ಧೂರಿಯಾಗಿ ನಡೆಯಲಿದ್ದು ಈ ಹಿನ್ನೆಲೆಯಲ್ಲಿ ಸ್ವಾಗತ ಗೋಪುರ, ರಂಗಮಂದಿರ, ಬಾಲವನ, ಕ್ರೀಡಾಂಗಣ ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ.

ಕೊಡುಗೆ
ಕೆರ್ವಾಶೆಯ ಸುಗಂಧಿ ಶೆಟ್ಟಿ, ಉದಯ ಶೆಟ್ಟಿ ಹಾಗೂ ದಯಾನಂದ ಶೆಟ್ಟಿ ಅವರು ಶಾಲೆಗೆ ಸ್ವಾಗತ ಗೋಪುರವನ್ನು ಕೊಡುಗೆಯಾಗಿ ಮಾಡಿಸುತ್ತಿದ್ದಾರೆ. ಬಾಲಕೃಷ್ಣ ಭಟ್ ಧಾರ್ಮಿಕ ವಿಧಿ ವಿಧಾನ ಪೂರೈಸಿದರು.
ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯಂತಿ, ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷ ಅನಿಲ್ ಕುಮಾರ್, ಕಾರ್ಯಾಧ್ಯಕ್ಷ ಧರ್ಮರಾಜ ಹೆಗ್ಡೆ, ಪಂಚಾಯತ್‌ ಸದಸ್ಯರಾದ ಸುನಿಲ್ ಶೆಟ್ಟಿ, ಸುನೀತಾ, ಎಸ್‌ಡಿಎಂಸಿ ಅಧ್ಯಕ್ಷೆ ಅಶ್ವತ್ಥನಾರಾಯಣ ಕಾಮತ್, ಮುಖ್ಯ ಶಿಕ್ಷಕ ಕೃಷ್ಣ ನಾಯ್ಕ್, ಅಧ್ಯಾಪಕ ವೃಂದದವರು, ವಿವಿಧ ಸಮಿತಿ ಪದಾಧಿಕಾರಿಗಳು, ಪೋಷಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Most Popular

error: Content is protected !!