Thursday, December 1, 2022
spot_img
HomeUncategorizedನ.19 : ಬಸ್ಸು ಏಜೆಂಟರ ಬಳಗ - 21ನೇ ವರ್ಷದ ಸೌಹಾರ್ದ ಸಂಗಮ : ಕಲಾ...

ನ.19 : ಬಸ್ಸು ಏಜೆಂಟರ ಬಳಗ – 21ನೇ ವರ್ಷದ ಸೌಹಾರ್ದ ಸಂಗಮ : ಕಲಾ ಸಿರಿ ತಂಡದ ಸಾರಥ್ಯದಲ್ಲಿ ಮ್ಯೂಸಿಕಲ್‌ ನೈಟ್ಸ್‌

ಕಾರ್ಕಳ: ಬಸ್ಸು ಏಜೆಂಟರ ಬಳಗ ಕಾರ್ಕಳ 21 ನೇ ವರ್ಷದ ಸೌಹಾರ್ದ ಸಂಗಮ ಕಾರ್ಯಕ್ರಮ ನ.19 ರಂದು ಸಂಜೆ 6 ಗಂಟೆಗೆ ಕಾರ್ಕಳ ಬಸ್ಸು ನಿಲ್ದಾಣದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಕೇಮಾರು ಸಾಂದೀಪನಿ ಸಾಧಾನಾಶ್ರಮದ ಶ್ರೀ ಶ್ರೀ ಶ್ರೀ ಈಶ ವಿಠಲದಾಸ ಸ್ವಾಮೀಜಿ, ಸುರತ್ಕಲ್ ಚೊಕ್ಕಬೆಟ್ಟು ತಣ್ಣೀರುಬಾವಿ ಮುಹಿಯುದ್ದೀನ್ ಜುಮ್ಮಾ ಮಸೀದಿಯ ಮೌಲನ ಅಬ್ದುಲ್‌ ಅಜೀಜ್ ದಾರಿಮಿ ಮತ್ತು ಮುಲ್ಕಿ ಕಾರ್ನಾಡ್ ಡಿವೈನ್ ಕಾಲ್ ಸೆಂಟರ್ ಧರ್ಮಗುರು ರೆ| ಫಾ| ಅಬ್ರಹಾಂ ವಿನ್ಸೆಂಟ್ ಡಿ’ಸೋಜ ಆಶೀರ್ವಚನ ನೀಡಲಿರುವರು. ರೋಟರಿ ಕ್ಲಬ್ ಅಧ್ಯಕ್ಷ ಮೋಹನ್ ಶೆಣೈ ಅಧ್ಯಕ್ಷತೆ ವಹಿಸಲಿದ್ದು, ರೋಟರಿ ಮಾಜಿ ಜಿಲ್ಲಾ ಗವರ್ನರ್ ಅಭಿನಂದನ್‌ ಶೆಟ್ಟಿ ಉದ್ಘಾಟಿಸಲಿದ್ದಾರೆ. ಕ.ಸಾ.ಪ. ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ ಶೆಟ್ಟಿ ಸೌಹಾರ್ದ ಭಾಷಣ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಾರ್ಕಳ ಲಕ್ಷ್ಮೀ ಗಣೇಶ್ ಮೋಟಾರ್ ಮಾಲಕ ದಿನೇಶ್ ಶೆಟ್ಟಿ, ಉದ್ಯಮಿಗಳಾದ ಸುರತ್ಕಲ್‌ ರಮೇಶ್ ಶೆಟ್ಟಿ, ಭಾಸ್ಕರ್‌ ಕುಲಾಲ್‌ ಹಾಗೂ ಉಡುಪಿ ಜಿಲ್ಲಾ ಅಲ್ಪಸಂಖ್ಯಾತರ ವೇದಿಕೆ ಅಧ್ಯಕ್ಷ ರಾಬರ್ಟ್ ಮಿನೇಜಸ್ ಉಪಸ್ಥಿತರಿರಲಿದ್ದಾರೆ.

ಸನ್ಮಾನ
ರಾಜ್ಯ ಮಟ್ಟದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮುನಿರಾಜ ರೆಂಜಾಳ ಮತ್ತು ಶಿಲ್ಪಶ್ರೀ ಪ್ರಶಸ್ತಿ ಪುರಸ್ಕೃತ ಕೆ. ಸತೀಶ್ ಆಚಾರ್ಯ ಅವರಿಗೆ ಸನ್ಮಾನ ಜರುಗಲಿದೆ.

ಪ್ರತಿಭಾ ಪುರಸ್ಕಾರ
ಕಾರ್ಕಳ ತಾಲೂಕಿನ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡಯಲಿದೆ.

ಸಾಂಸ್ಕೃತಿಕ ಕಾರ್ಯಕ್ರಮ
ಮಂಗಳೂರಿನ ಪ್ರಸಿದ್ಧ ಕಲಾ ಸಿರಿ ತಂಡದ ಸಾರಥ್ಯದೊಂದಿಗೆ ಜೀ ಕನ್ನಡ ಸರಿಗಮಪ ರನ್ನರ್ ಅಪ್ ಖ್ಯಾತಿಯ ಮೆಹಬೂಬ್‌ ಸಾಬ್‌ ಮತ್ತು ಖ್ಯಾತ ಕಲಾವಿದರಿಂದ ಮ್ಯೂಸಿಕಲ್ ನೈಟ್ಸ್ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಬಸ್ಸು ಏಜಂಟರ ಬಳಗ ಪ್ರಕಟನೆಯಲ್ಲಿ ತಿಳಿಸಿದೆ.

LEAVE A REPLY

Please enter your comment!
Please enter your name here

Most Popular

error: Content is protected !!