Thursday, December 1, 2022
spot_img
Homeಸಿನೆಮಾತುಳುವಿನಲ್ಲೂ ಬರಲಿದೆ ಕಾಂತಾರ

ತುಳುವಿನಲ್ಲೂ ಬರಲಿದೆ ಕಾಂತಾರ

ಕರಾವಳಿಯವರ ಬೇಡಿಕೆಗೆ ಮನ್ನಣೆ

ಬೆಂಗಳೂರು : ತುಳು ನಾಡಿನ ಜಾನಪದ ಸಂಸ್ಕೃತಿಯ ಸೊಗಡು ಹೊಂದಿರುವ ಕಾಂತಾರ ಸಿನೆಮಾ ತುಳುವಿನಲ್ಲಿ ಬಿಡುಗಡೆಯಾಗದಿರುವುದು ಕರಾವಳಿ ಜನರಲ್ಲಿ ತುಸು ಬೇಸರ ಮೂಡಿಸಿತ್ತು. ಈದೀಗ ಕಾಂತಾರ ತುಳುವಿನಲ್ಲಿ ರಿಲೀಸ್ ಆಗಲಿದೆ ಎಂಬ ಮಾಹಿತಿ ಹೊರಬಿದ್ದಿದೆ.
ಕಾಂತಾರದಲ್ಲಿ ತುಳುನಾಡಿನ ದೈವಾರಾಧನೆಯೇ ಮುಖ್ಯ ಕಥಾವಸ್ತು. ಆದರೆ ದೈವ ಕನ್ನಡದಲ್ಲಿ ಮಾತನಾಡುವುಇದು ಒಂದು ರೀತಿ ಅಸಂಬದ್ಧವಾಗಿ ಕಾಣಿಸುತ್ತಿತ್ತು. ಕೆಲವೆಡೆ ತುಳು ಡೈಲಾಗ್‌ ಇದ್ದರೂ ಇಡೀ ಸಿನೆಮಾ ತುಳುವಿನಲ್ಲಿ ಇದ್ದದ್ದರೆ ಚೆನ್ನಾಗಿತ್ತು ಎಂದು ಅನೇಕರು ಅಭಿಪ್ರಾಯ ಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಚಿತ್ರವನ್ನು ತುಳುವಿಗೆ ಡಬ್ ಮಾಡಲಾಗುತ್ತಿದೆ. ಈ ವಿಚಾರವನ್ನು ನಿರ್ಮಾಪಕರಾದ ಹೊಂಬಾಳೆ ಫಿಲ್ಮ್ಸ್​​ ಖಚಿತಪಡಿಸಿದೆ.
ಇಡೀ ಸಿನಿಮಾದ ಕಥೆ ಸಾಗುವುದು ತುಳುನಾಡಿನಲ್ಲಿ. ಸಿನಿಮಾದ ಕೆಲ ದೃಶ್ಯಗಳಲ್ಲಿ ತುಳು ಭಾಷೆ ಕೂಡ ಬಳಕೆ ಆಗಿದೆ. ತುಳುನಾಡಿನ ವಿಚಾರಗಳನ್ನು ಹೇಳುವ ಈ ಚಿತ್ರವನ್ನು ತುಳುವಿನಲ್ಲೇ ರಿಲೀಸ್ ಮಾಡುವ ಪ್ಲ್ಯಾನ್​ನಲ್ಲಿ ಚಿತ್ರತಂಡ ಇದೆ. ಸದ್ಯ, ಡಬ್ಬಿಂಗ್ ಕೆಲಸಗಳು ನಡೆಯುತ್ತಿದ್ದು, ಶೀಘ್ರದಲ್ಲೇ ತುಳುವಿನಲ್ಲಿ ಸಿನಿಮಾ ರಿಲೀಸ್ ಆಗಲಿದೆ.
ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ಈ ಸಿನಿಮಾ ಪ್ರಸಾರ ಕಾಣಲಿದೆ. ಮೊದಲು ಮಾಡಿಕೊಂಡ ಒಪ್ಪಂದದ ಪ್ರಕಾರ ನ.18ಕ್ಕೆ ಚಿತ್ರ ಒಟಿಟಿಯಲ್ಲಿ ರಿಲೀಸ್ ಆಗಬೇಕಿತ್ತು. ಆದರೆ ಥಿಯೇಟರ್​ನಲ್ಲಿ ಸಿನಿಮಾ ಇನ್ನೂ ಅಬ್ಬರಿಸುತ್ತಿರುವುದರಿಂದ ಸಿನಿಮಾದ ಒಟಿಟಿ ರಿಲೀಸ್ ದಿನಾಂಕ ವಿಳಂಬವಾಗುತ್ತಿದೆ ಎನ್ನಲಾಗಿದೆ. ನವೆಂಬರ್ ಅಂತ್ಯಕ್ಕೆ ಈ ಚಿತ್ರ ಒಟಿಟಿಯಲ್ಲಿ ಬಿಡುಗಡೆ ಆಗಲಿದೆ.

LEAVE A REPLY

Please enter your comment!
Please enter your name here

Most Popular

error: Content is protected !!