Saturday, December 10, 2022
spot_img
Homeರಾಜ್ಯಬೆಂಗಳೂರು ತಂತ್ರಜ್ಞಾನ ಶೃಂಗಸಭೆ ಪ್ರಧಾನಿ ಮೋದಿ ಚಾಲನೆ

ಬೆಂಗಳೂರು ತಂತ್ರಜ್ಞಾನ ಶೃಂಗಸಭೆ ಪ್ರಧಾನಿ ಮೋದಿ ಚಾಲನೆ

ಬೆಂಗಳೂರು : ಭಾರತದ ನಾವೀನ್ಯತೆ ಸೂಚ್ಯಂಕದಲ್ಲಿ ಬೆಂಗಳೂರು ನಂಬರ್ 1 ಆಗಿದೆ. ಬೆಂಗಳೂರು ತಂತ್ರಜ್ಞಾನದ ತವರಾಗಿದೆ. ಅಂತರ್ಗತ ಮತ್ತು ನವೀನ ನಗರವಾಗಿದೆ ಎಂದು ಸಿಲಿಕಾನ್ ಸಿಟಿಯನ್ನು ಕೊಂಡಾಡಿರುವ ಪ್ರಧಾನಿ ಮೋದಿ ನ.16ರಂದು ಬೆಂಗಳೂರು ಟೆಕ್ ಶೃಂಗಸಭೆಗೆ ಚಾಲನೆ ನೀಡಿದ್ದಾರೆ. ಅರಮನೆ ಮೈದಾನದಲ್ಲಿ ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯ 25ನೇ ವರ್ಷದ ಸಮಾವೇಶ ನಡೆಯುತ್ತಿದ್ದು, ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಐಟಿ-ಬಿಟಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಸೇರಿದಂತೆ ಹಲವು ವಿದೇಶಿ ಗಣ್ಯರು ಉಪಸ್ಥಿತರಿದ್ದರು. ಬಳಿಕ ಮೋದಿಯವರು ಬೆಂಗಳೂರು ಬೆಳವಣಿಗೆಯನ್ನು ಶ್ಲಾಘಿಸಿ, ಬೆಂಗಳೂರು ತಂತ್ರಜ್ಞಾನದ ತವರು. ಭಾರತದ ಆವಿಷ್ಕಾರ ವಲಯದಲ್ಲಿ ಬೆಂಗಳೂರು ನಂಬರ್​ ಒನ್ ಆಗಿದೆ. ಜಾಗತಿಕ ಆವಿಷ್ಕಾರ ಇಂಡೆಕ್ಸ್​​ನಲ್ಲಿ ಭಾರತ 4ನೇ ಸ್ಥಾನದಲ್ಲಿದೆ ಎಂದು ಹೇಳಿದ್ದಾರೆ.
ನೂರಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಕಂಪನಿಗಳ ಆರ್ ಮತ್ತು ಡಿ ಸೆಂಟರ್‌ಗಳು ಭಾರತದಲ್ಲಿವೆ. ಭಾರತ ವಿಶ್ವದ 3ನೇ ಅತಿದೊಡ್ಡ ಸ್ಟಾರ್ಟ್ ಅಪ್​ ಕೇಂದ್ರ. ಆಯುಷ್ಮಾನ್​ ಭಾರತ್ ಯೋಜನೆ ವಿಶ್ವದ ದೊಡ್ಡ ಆರೋಗ್ಯ ವಿಮೆ. ಸ್ವಾಮಿತ್ವ ಯೋಜನೆಯಡಿ ಡ್ರೋನ್ ಮೂಲಕ ಭೂಮಿ ಸರ್ವೆ ​​ಮಾಡಲಾಗುತ್ತಿದೆ. ದೇಶದ ಜನರಿಗೆ ಪ್ರಾಪರ್ಟಿ ಕಾರ್ಡ್​ ನೀಡಲಾಗಿದೆ. ಕೋವಿಡ್ ಸಂದರ್ಭವೂ ಭಾರತದಲ್ಲಿ ಜನರಿಗೆ ಸರ್ಕಾರದ ಯೋಜನೆಗಳನ್ನು ತಲುಪಿಸುವ ನಿಟ್ಟಿನಲ್ಲಿ ತಂತ್ರಜ್ಞಾನ ಮಹತ್ವದ ಪಾತ್ರ ವಹಿಸಿತ್ತು. ಸಣ್ಣ ಉದ್ಯಮಿಗಳಿಗೂ ತಂತ್ರಜ್ಞಾನ ಸಾಕಷ್ಟು ಸಹಕಾರಿಯಾಗುತ್ತಿದೆ. ತಂತ್ರಜ್ಞಾನ ಬಳಕೆ ಭ್ರಷ್ಟಾಚಾರ ನಿಯಂತ್ರಣದ ಸಾಧನವೂ ಆಗಿ ಪರಿವರ್ತನೆಗೊಂಡಿದೆ ಎಂದು ತಿಳಿಸಿದರು.

LEAVE A REPLY

Please enter your comment!
Please enter your name here

Most Popular

error: Content is protected !!