Saturday, December 10, 2022
spot_img
Homeಸುದ್ದಿಸುರತ್ಕಲ್‌ ಟೋಲ್‌ಗೇಟ್‌ ರದ್ದು: ಕೇಂದ್ರಕ್ಕೆ ನಳಿನ್‌ ಧನ್ಯವಾದ

ಸುರತ್ಕಲ್‌ ಟೋಲ್‌ಗೇಟ್‌ ರದ್ದು: ಕೇಂದ್ರಕ್ಕೆ ನಳಿನ್‌ ಧನ್ಯವಾದ


ಸುರತ್ಕಲ್: ಸುರತ್ಕಲ್ ಟೋಲ್ ಗೇಟ್ ರದ್ದುಗೊಳಿಸುವ ಕೇಂದ್ರದ ನಿರ್ಧಾರಕ್ಕೆ ಸಂಸದ ನಳಿನ್ ಕುಮಾರ್ ಕಟೀಲ್ ಟ್ವೀಟ್ ಮೂಲಕ ಪ್ರಧಾನಿ ಮೋದಿ, ರಾಷ್ಟ್ರೀಯ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಧನ್ಯವಾದ ತಿಳಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ಸುರತ್ಕಲ್ ಟೋಲ್‌ಗೇಟ್ ರದ್ದುಗೊಳಿಸುವ ಕುರಿತು ಹಲವು ಸಂಘಟನೆಗಳು ಹೋರಾಟ ನಡೆಸಿದ್ದವು. ನ.7 ರ ವೇಳೆಗೆ ಟೋಲ್‌ಗೇಟ್ ರದ್ದುಗೊಳಿಸದಿದ್ದರೆ ಹೋರಾಟವನ್ನು ತೀವ್ರಗೊಳಿಸುವುದಾಗಿ ಟೋಲ್ ವಿರೋಧಿ ಹೋರಾಟ ಸಮಿತಿ ಎಚ್ಚರಿಸಿತ್ತು.
60 ಕಿಲೋ ಮೀಟರ್ ವ್ಯಾಪ್ತಿಯಲ್ಲಿ 4 ಟೋಲ್‌ಗೇಟ್​ಗಳು ಇದ್ದು, ಸುರತ್ಕಲ್ ಟೋಲ್‌ಗೇಟ್ ಕಾನೂನು ಬಾಹಿರವಾಗಿ ನಡೆಯುತ್ತಿರುವುದರಿಂದ ರದ್ದುಗೊಳಿಸಬೇಕೆಂಬುದು ಸ್ಥಳೀಯರ ಆಗ್ರಹವಾಗಿತ್ತು.
ತಾಂತ್ರಿಕ ಅಂಶಗಳ ಕಾರಣ ಟೋಲ್‌ಗೇಟ್‌ ರದ್ದು ತಡವಾಗಿತ್ತು. ಇದೀಗ ಟೋಲ್ ತೆರವಿನ ತಾಂತ್ರಿಕ ಅಂಶ ಪೂರ್ಣವಾಗಿರುವ ಕುರಿತು ಸಂಸದ ನಳಿನ್ ಕುಮಾರ್ ಕಟೀಲ್ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. ಈ ಮುನ್ನವೇ ಸುರತ್ಕಲ್ ಟೋಲ್‌ಗೇಟ್ ರದ್ದುಗೊಳ್ಳುವುದು ತಾಂತ್ರಿಕ ಅಂಶಗಳಿಂದ ನಿಧಾನವಾಗಿತ್ತು, ಆದರೆ ಇದೀಗ ಟೋಲ್ ಗೇಟ್ ರದ್ದುಗೊಳಿಸಲಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here

Most Popular

error: Content is protected !!