Tuesday, December 6, 2022
spot_img
Homeಸುದ್ದಿಅಂತರ್‌ ಜಿಲ್ಲಾ ಲಯನ್ಸ್‌ ಸಮ್ಮಿಲನ : ವಿಜೇತ ವಿಶೇಷ ಶಾಲೆಯಲ್ಲಿ ಮಕ್ಕಳ ದಿನಾಚರಣೆ

ಅಂತರ್‌ ಜಿಲ್ಲಾ ಲಯನ್ಸ್‌ ಸಮ್ಮಿಲನ : ವಿಜೇತ ವಿಶೇಷ ಶಾಲೆಯಲ್ಲಿ ಮಕ್ಕಳ ದಿನಾಚರಣೆ

ಕಾರ್ಕಳ: ಲಯನ್ಸ್ ಜಿಲ್ಲೆ 317ಡಿ ಮಂಗಳೂರು ಪಂಪ್‌ವೆಲ್‌ ಕಲ್ಪವೃಕ್ಷ, 317ಸಿ ಉಡುಪಿ ಲಯನ್ಸ್ ಕ್ಲಬ್ ಬೆಳ್ಮಣ್‌, ಲಯನ್ಸ್ ಕ್ಲಬ್ ಸೆಂಚುರಿ ಸಹಯೋಗದಲ್ಲಿ ವಿಜೇತ ವಿಶೇಷ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ನ.14ರಂದು ಸಂಜೆ ಸಮಯ 6.30ಕ್ಕೆ ಅಂತರ್‌ಜಿಲ್ಲಾ ಕ್ಲಬ್‌ಗಳ ಸಮ್ಮಿಲನ ಮತ್ತು ಜಂಟಿ ಸೇವಾ ಕಾರ್ಯಕ್ರಮಗಳೊಂದಿಗೆ ಮಕ್ಕಳಿಗೆ ವಿಶೇಷ ಭೋಜನವನ್ನು ನೀಡಿ ವಿಶೇಷ ಮಕ್ಕಳ ದಿನಾಚರಣೆಯನ್ನು ವಿಶೇಷ ರೀತಿಯಲ್ಲಿ ಆಚರಿಸಿದರು. ಈ ಸಂದರ್ಭದಲ್ಲಿ ಮೂರು ಕ್ಲಬ್‌ಗಳ ವತಿಯಿಂದ ಶಾಲೆಗೆ ದೇಣಿಗೆಯನ್ನು ಹಸ್ತಾಂತರಿಸಲಾಯಿತು.

ಪ್ರಾಂತೀಯ ಸಲಹೆಗಾರ ಕೆ.ಎಸ್‌. ಉಪಾಧ್ಯಾಯ ಕಾರ್ಯಕ್ರಮ ಸಂಘಟಿಸಿದ್ದು, ಮಂಗಳೂರು ಪಂಪ್‌ವೆಲ್‌ ಕಲ್ಪವೃಕ್ಷ ಅಭಿವೃದ್ಧಿ ಅಧ್ಯಕ್ಷ ರಾಜೇಶ್‌ ಶೆಟ್ಟಿ, ಕಾರ್ಯದರ್ಶಿ ರೋಹಿತಾಶ್ವ, ಕೋಶಾಧಿಕಾರಿ ಕೆ. ವಸಂತ್‌ ಕುಮಾರ್‌, ಬೆಳ್ಮಣ್‌ ಲಯನ್ಸ್‌ ಕ್ಲಬ್ ಅಧ್ಯಕ್ಷ ರಮಾನಾಥ ಶೆಣೈ, ಸೆಂಚುರಿ ಅಧ್ಯಕ್ಷೆ ಆಶಾ ಡಿ. ಶೆಟ್ಟಿ, ಪ್ರಥಮ್‌ ಉಪಾಧ್ಯಯ ಮತ್ತು ವಿಶ್ವನಾಥ ಪಾಟ್ಕರ್‌, ಶೈಲಜಾ ಪಾಟ್ಕರ್‌, ಕೋಶಾಧಿಕಾರಿ ಶೀಲಾ ಪ್ರಕಾಶ, ಮುಖ್ಯ ಅತಿಥಿಗಳಾಗಿ ವಲಯಾಧ್ಯಕ್ಷೆ ಜ್ಯೋತಿ ರಮೇಶ್‌, ಪ್ರಾಂತೀಯ ಅಧ್ಯಕ್ಷ ಗಂಗಾಧರ ಶೆಟ್ಟಿಗಾರ್‌ ಮತ್ತು ಜಿಲ್ಲಾ ಮಾಜಿ ಗವರ್ನರ್ ಎನ್. ಎಮ್.‌‌ ಹೆಗಡೆ ಹಾಗೂ ವಿಜೇತ ವಿಶೇಷ ಶಾಲಾ ಸಂಸ್ಥಾಪಕಿ ಡಾ. ಕಾಂತಿ ಹರೀಶ್‌ ಮತ್ತು ಲಯನ್ಸ್‌ ಪದಾಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Most Popular

error: Content is protected !!