Thursday, December 1, 2022
spot_img
Homeಸ್ಥಳೀಯ ಸುದ್ದಿಕಾರ್ಕಳ (ನ.18) : ಲಕ್ಷ್ಮೀ ವುಡ್ ಡಿಸೈನರ್ ನೂತನ ಮಳಿಗೆ ಶುಭಾರಂಭ

ಕಾರ್ಕಳ (ನ.18) : ಲಕ್ಷ್ಮೀ ವುಡ್ ಡಿಸೈನರ್ ನೂತನ ಮಳಿಗೆ ಶುಭಾರಂಭ

ಕಾರ್ಕಳ : ಹೊರಾಂಗಣ ಮತ್ತು ಒಳಾಂಗಣ ವಿನ್ಯಾಸಕ್ಕಾಗಿ ಕಾರ್ಕಳದಲ್ಲಿ ನೂತನವಾಗಿ ಲಕ್ಷ್ಮಿ ವುಡ್ ಡಿಸೈನರ್ ಫರ್ನಿಚರ್, ಇಂಟೀರಿಯರ್ ಮತ್ತು ವುಡ್ ವರ್ಕ್ಸ್ ನ.18 ರಂದು ಬೆಳಿಗ್ಗೆ ಗಂಟೆ 10ಕ್ಕೆ ಶುಭಾರಂಭಗೊಳ್ಳಲಿರುವುದು. ದಾನಶಾಲೆ ಬಾಹುಬಲಿ ಪ್ರವಚನ ಮಂದಿರದ ಬಳಿ ನೂತನ ಮಳಿಗೆಯು ಆರಂಭಗೊಳ್ಳಲಿದ್ದು, ಜೈನಮಠದ ಪರಮಪೂಜ್ಯ ರಾಜಗುರು ಧ್ಯಾನಯೋಗಿ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ನೂತನ ಮಳಿಗೆಯನ್ನು ಉದ್ಘಾಟಿಸಲಿರುವರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಣ್ಯರಾಗಿ ಉದ್ಯಮಿ ಕೆ. ಸತ್ಯಾನಂದ ದಾನಶಾಲೆ, ಹಿರಿಯಂಗಡಿ ಶಿವತಿಕೆರೆ ಉಮಾಮಹೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಸುರೇಂದ್ರ ಶೆಟ್ಟಿ, ನಿವೃತ್ತ ಶಿಕ್ಷಕ ಜಗದೀಶ್ ಹೆಗ್ಡೆ, ಚಂದ್ರಶೇಖರ್ ಶೆಟ್ಟಿ ಉಪಸ್ಥಿತರಿರುವರು ಎಂದು ಸಂಸ್ಥೆಯ ಮಾಲಕ ಶಿವ ದೇವಾಡಿಗ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Most Popular

error: Content is protected !!