ಕೇಂದ್ರ ಸಾಂಸ್ಕೃತಿಕ ಮತ್ತು ಪ್ರವಾಸೋದ್ಯಮ ಸಚಿವ ಶ್ರೀಪಾದ ಯೆಸ್ಸೊ ನಾಯ್ಕ್ ಭರವಸೆ
ಮಂಗಳೂರು : ದೇಶದ ಪ್ರವಾಸೋದ್ಯಮದಲ್ಲಿ ಕಂಬಳಕ್ಕೊಂದು ಸ್ಥಾನಮಾನ ನೀಡಲು ಪ್ರಯತ್ನಸಿಲಾಗುವುದು ಎಂದು ಕೇಂದ್ರ ಸಾಂಸ್ಕೃತಿಕ ಮತ್ತು ಪ್ರವಾಸೋದ್ಯಮ ಸಚಿವ ಶ್ರೀಪಾದ ಯೆಸ್ಸೊ ನಾಯ್ಕ್ ಹೇಳಿದ್ದಾರೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಪ್ರವಾಸ ಕೈಗೊಂಡಿರುವ ನಾಯ್ಕ್ ಉಳ್ಳಾಲ ತಾಲೂಕಿನ ಮೋರ್ಲ ಬೋಳ ಎಂಬಲ್ಲಿ ನಿರ್ಮಾಣವಾಗುತ್ತಿರುವ ಕಂಬಳ ಗದ್ದೆಯನ್ನು ವೀಕ್ಷಿಸಿ ಈ ಭರವಸೆ ನೀಡಿದರು. ಶಾಸಕ ಯು.ಟಿ.ಖಾದರ್ ಸಚಿವರಿಗೆ ಕಂಬಳ ಮತ್ತು ಕಂಬಳ ಗದ್ದೆಯ ಕುರಿತು ಮಾಹಿತಿ ನೀಡಿದರು.
ಕಂಬಳ ಕ್ರೀಡೆಯನ್ನು ಪ್ರವಾಸೋದ್ಯಮದ ನೀತಿಯಲ್ಲಿ ಸೇರಿಸಿದರೆ ಅನುಕೂಲವಾಗುತ್ತದೆ. ಈ ಹಿನ್ನೆಲೆಯಲ್ಲಿ ಖಾದರ್ ಅವರು ಮಾಡಿರುವ ಮನವಿ ಸೂಕ್ತವಾಗಿದೆ. ಜಾನಪದ ಮತ್ತು ಸಾಂಸ್ಕೃತಿಕ ಪರಂಪರೆಗೆ ಪ್ರವಾಸೋದ್ಯಮದಲ್ಲಿ ಸ್ಥಾನ ಸಿಗಬೇಕು ಎಂದು ನಾಯ್ಕ್ ಹೇಳಿದ್ದಾರೆ.