ಕಾರ್ಕಳ : ಕಾರ್ಕಳ ಗಾಂಧಿಮೈದಾನದಲ್ಲಿ ನಡೆದ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ (ಎಸ್‌ಕೆಪಿಎ) ಕಾರ್ಕಳ ವಲಯದ ಕ್ರಿಕೆಟ್ ಪಂದ್ಯಾಟದಲ್ಲಿ ಪ್ರಸಾದ್ ಐಸಿರ ಮಾಲಕತ್ವದ ಗರುಡಾಸ್ ಪ್ರಥಮ ಹಾಗೂ ಭಾಸ್ಕರ್ ಕುಲಾಲ್ ಮಾಲಕತ್ವದ ಫ್ಯಾಂಥರ್ಸ್ ತಂಡ ದ್ವಿತೀಯ ಸ್ಥಾನ ಪಡೆದಿದೆ. ನ. 13ರಂದು ಐಪಿಎಲ್ ಮಾದರಿಯಲ್ಲಿ ಕ್ರಿಕೆಟ್ ಪಂದ್ಯಾಟದಲ್ಲಿ ನಡೆಯಿತು. ಪ್ಯಾಂಥರ್ಸ್ ತಂಡದ ಅಶ್ವಥ್ ಸರಣಿ ಶ್ರೇಷ್ಠರಾಗಿ, ಗರುಡಾಸ್ ತಂಡದ ಪ್ರಣಮ್ ಜೈನ್ ಪಂದ್ಯ ಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಬೆಸ್ಟ್ ಬ್ಯಾಟ್ಸ್‌ಮನ್ ಆಗಿ ವಿಜಯ್ ಹಾಗೂ ಬೆಸ್ಟ್ ಆಲ್‌ರೌಂಡರ್ ಆಗಿ ಶಶಿಧರ್ ಹೊರಹೊಮ್ಮಿದರು.
ಸಮಾರೋಪ ಸಮಾರಂಭದಲ್ಲಿ ಹಿರಿಯರಾದ ಶಿವರಾಮ ಸಾಲ್ಯಾನ್, ಉದ್ಯಮಿ ಸಂತೋಷ್ ಕುಮಾರ್ ರೆಂಜಾಳ, ಎಸ್‌ಕೆಪಿಎ ಉಪಾಧ್ಯಕ್ಷ ಪದ್ಮಪ್ರಸಾದ್ ಜೈನ್, ವಲಯ ಅಧ್ಯಕ್ಷ ಈಶ್ವರ್ ಕುಂಟಾಡಿ, ಗೌರವಾಧ್ಯಕ್ಷ ಮಹೇಂದ್ರ ಶೆಟ್ಟಿ, ಸ್ಥಾಪಕಾಧ್ಯಕ್ಷ ಮೋಹನ್ ದಾಸ್ ಪೈ, ಕಾರ್ಯದರ್ಶಿ ಸುಶೀಲ್, ಕ್ರೀಡಾಕಾರ್ಯದರ್ಶಿ ಪ್ರಸನ್ನ ಹೆಗ್ಡೆ ಹಾಗೂ ಸುಭಾಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಎಸ್‌ಕೆಪಿಎ ಕಾರ್ಕಳ ವಲಯ ಕ್ರಿಕೆಟ್ ಪಂದ್ಯಾಟ
