Saturday, December 10, 2022
spot_img
Homeರಾಜ್ಯನಂದಿನ ಹಾಲು, ಮೊಸರಿನ ದರ ಲೀಟರ್‌ಗೆ ತಲಾ ರೂ. 3 ಹೆಚ್ಚಳ!

ನಂದಿನ ಹಾಲು, ಮೊಸರಿನ ದರ ಲೀಟರ್‌ಗೆ ತಲಾ ರೂ. 3 ಹೆಚ್ಚಳ!

ಬೆಂಗಳೂರು : ರೈತರಿಗೆ ಪ್ರೋತ್ಸಾಹ ಧನವಾಗಿ ನೀಡುವ ಉದ್ದೇಶದಿಂದ ನಂದಿನ ಹಾಲು ಮತ್ತು ಮೊಸರಿನ ದರವನ್ನು ಹೆಚ್ಚಳ ಮಾಡಲು ಕೆಎಂಎಫ್ ಆದೇಶ ಹೊರಡಿಸಿದೆ. ಹಾಲು, ಮೊಸರಿನ ಪರಿಷ್ಕೃತ ದರ ಇಂದು ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ. ಟೋನ್ಡ್ ಹಾಲಿನ ದರ 37 ರಿಂದ 40 ರುಪಾಯಿಗೆ ಹೆಚ್ಚಳ ಮಾಡಲಾಗಿದೆ. ಇನ್ನು ಸ್ಪೆಷನ್ ಹಾಲಿನ ದರ 43 ರಿಂದ 46 ರೂಪಾಯಿಗೆ, ಸಮೃದ್ಧಿ ಹಾಲಿನ ದರ 48 ರಿಂದ 51 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. ಹೋಮೋಜಿನೈಸ್ಡ್ ಹಾಲು 38 ರೂ. ರಿಂದ 41 ರೂ.ಗೆ ಏರಿಕೆ. ಹೊಮೊಜಿನೈಸ್ಡ್ ಹಸುವಿನ ಹಾಲು 42 ರೂ. ರಿಂದ 45 ರೂ.ಗೆ ಏರಿಕೆ. ಶುಭಂ ಹಾಲು 43 ರೂ. ರಿಂದ 46 ರೂ.ಗೆ ಏರಿಕೆ. ಹೊಮೊಜಿನೈಸ್ಡ್ ಸ್ಟ್ಯಾಂಡಡೈಸ್ಡರ್ ಹಾಲು 44 ರೂ. ರಿಂದ 47 ರೂ.ಗೆ ಏರಿಕೆ. ಸಂತೃಪ್ತಿ ಹಾಲು 50 ರೂ. ರಿಂದ 53 ರೂ.ಗೆ ಏರಿಕೆ. ಡಬಲ್ ಟೋನ್ಡ್ ಹಾಲು 36 ರೂ. ರಿಂದ 39 ರೂ.ಗೆ ಏರಿಕೆಯಾಗಿದೆ. ಮೊಸರಿನ ದರವನ್ನು ಲೀಟರ್ ಗೆ 45 ರಿಂದ 48 ರೂಪಾಯಿಗೆ ಏರಿಕೆ ಮಾಡಲಾಗಿದೆ.

ನಂದಿನಿ ಹಾಲಿನ ಪರಿಷ್ಕೃತ ದರ ಲೀಟರಿಗೆ ರೂ.3/- ಏರಿಕೆ ಹೈನುಗಾರರಿಗೆ ಪ್ರೋತ್ಸಾಹ ಧನವಾಗಿ ವರ್ಗಾವಣೆ : ನರಸಿಂಹ ಕಾಮತ್ ಸಂತಸ

ನಂದಿನಿ ಹಾಲಿನ ಮಾರಾಟದ ಪ್ರತಿ ಲೀಟರ್ ಗೆ 3/- ರೂಪಾಯಿ ಏರಿಕೆ ಹಣವನ್ನು ರೈತರಿಗೆ ನೇರವಾಗಿ ಪ್ರೋತ್ಸಾಹ ಧನವಾಗಿ ವರ್ಗಾವಣೆ ಮಾಡುವ ಕೆಎಂಎಫ್ ಆದೇಶಕ್ಕೆ ಸಹಕಾರ ಭಾರತಿ ಹಾಲು ಪ್ರಕೋಷ್ಟದ ರಾಜ್ಯ ಸಂಚಾಲಕಸಾಣೂರು ನರಸಿಂಹ ಕಾಮತ್ ಸಂತಸ ವ್ಯಕ್ತಪಡಿಸಿದ್ದಾರೆ.

ಕಳೆದ ಮೂರು ವರ್ಷಗಳಿಂದ ಹಾಲಿನ ಉತ್ಪಾದನಾ ವೆಚ್ಚ ಗಣನೀಯವಾಗಿ ಏರಿಕೆಯಾಗುತ್ತಿದ್ದು, ಹಾಲಿನ ಖರೀದಿ ದರದಲ್ಲಿ ಏರಿಕೆಯಾಗದೆ ಹೈನುಗಾರಿಕೆಯನ್ನೇ ನಂಬಿಕೊಂಡು ಬದುಕುತ್ತಿರುವ ರಾಜ್ಯದ ಲಕ್ಷಾಂತರ ಹೈನುಗಾರ ಕುಟುಂಬಗಳು ಕೆಎಂಎಫ್ ನ ಈ ನಿರ್ಧಾರದಿಂದಾಗಿ ಕೊಂಚ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ಕಳೆದ ವಾರ ಮುಖ್ಯಮಂತ್ರಿಗಳು ಉಡುಪಿ ಜಿಲ್ಲೆಗೆ ಭೇಟಿ ನೀಡಿದಾಗ ಸಹಕಾರ ಭಾರತಿಯ ನಿಯೋಗ ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಿ ಹಾಲಿನ ದರ ಪರಿಷ್ಕರಣೆಗೆ ಒತ್ತಾಯಿಸಿತ್ತು. ಇದೀಗ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿ ಹೋಳಿ ನಂದಿನಿ ಹಾಲಿನ ದರ ಪರಿಷ್ಕರಣೆಯ ನಿರ್ಧಾರದಿಂದಾಗಿ ನಾಡಿನ ಲಕ್ಷಾಂತರ ಹೈನುಗಾರ ಕುಟುಂಬಗಳಿಗೆ ಕೊಂಚ ಆರ್ಥಿಕ ಪುನಶ್ಚೇತನ ನೀಡಿದಂತಾಗಿದೆ.

ಹೈನುಗಾರ ಕುಟುಂಬಗಳ ಬಹುಕಾಲದ ಬೇಡಿಕೆಗೆ ಸ್ಪಂದಿಸಿದ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೋಳಿ ಮತ್ತು ಆಡಳಿತ ಮಂಡಳಿಗೆ ಹಾಗೂ ದರ ಪರಿಷ್ಕರಣೆಗೆ ತಾತ್ವಿಕವಾಗಿ ಸಮ್ಮತಿ ನೀಡಿದ ರಾಜ್ಯ ಸರಕಾರಕ್ಕೆ ಸಹಕಾರ ಭಾರತಿ ಹಾಲು ಪ್ರಕೋಷ್ಟದ ರಾಜ್ಯ ಸಂಚಾಲಕ ಸಾಣೂರು ನರಸಿಂಹ ಕಾಮತ್ ರವರು ರಾಜ್ಯದ ಸಮಸ್ತ ಹೈನುಗಾರರ ಪರವಾಗಿ ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸಿರುತ್ತಾರೆ .

LEAVE A REPLY

Please enter your comment!
Please enter your name here

Most Popular

error: Content is protected !!