Thursday, December 1, 2022
spot_img
Homeಸ್ಥಳೀಯ ಸುದ್ದಿಕಾರ್ಕಳದಲ್ಲಿ ಅಂಬೇಡ್ಕರ್‌ ಭವನಕ್ಕೆ ಶಿಲಾನ್ಯಾಸ - ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ

ಕಾರ್ಕಳದಲ್ಲಿ ಅಂಬೇಡ್ಕರ್‌ ಭವನಕ್ಕೆ ಶಿಲಾನ್ಯಾಸ – ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ

ಕಾರ್ಕಳ : ಅಂಬೇಡ್ಕರ್‌ ಭವನದ ಮೂಲಕ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸೇರಿದಂತೆ ಸಮಾಜದ ಎಲ್ಲ ಸ್ತರದ ಜನರು ಒಟ್ಟಾಗಿ ಸಮನ್ವತೆಯಿಂದ ಬದುಕುವ ವಾತಾವರಣ ನಿರ್ಮಾಣವಾಗಲಿ ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಭಿಪ್ರಾಯಪಟ್ಟರು.
ಅವರು ನ. 14ರಂದು ಕಾರ್ಕಳ ಕಾಬೆಟ್ಟುವಿನಲ್ಲಿ 6 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಡಾ. ಬಿ.ಆರ್.‌ ಅಂಬೇಡ್ಕರ್‌ ಭವನ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಏಕೈಕ ಕ್ಷೇತ್ರ ಕಾರ್ಕಳ
ತಾಲೂಕು ಮಟ್ಟದ ಅಂಬೇಡ್ಕರ್‌ ಭವನ ನಿರ್ಮಾಣಕ್ಕೆ ಸಾಮಾನ್ಯವಾಗಿ 1.5 ಕೋಟಿ ರೂ. ಇಲಾಖೆಯಿಂದ ನೀಡಲಾಗುತ್ತಿದೆ. 6 ಕೋ. ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಏಕೈಕ ಅಂಬೇಡ್ಕರ್‌ ಭವನ ಕಾರ್ಕಳದ್ದಾಗಿದೆ. ಸಚಿವ ಸುನೀಲ್‌ ಕುಮಾರ್‌ ಅವರ ವಿಶೇಷ ಪ್ರಯತ್ನದಿಂದ ಇದು ಸಾಧ್ಯವಾಗಿದೆ ಎಂದು ಕೋಟ ತಿಳಿಸಿದರು.

ಶ್ರೇಷ್ಠ ವಕೀಲ ಅಂಬೇಡ್ಕರ್‌
ಅಂಬೇಡ್ಕರ್‌ ನ್ಯಾಯಾಲಯದಲ್ಲಿ ವಾದ ಮಂಡಿಸುತ್ತಿದ್ದ ಸಂದರ್ಭ ಅವರ ಸಹಾಯಕರೋರ್ವರು ಚೀಟಿ ನೀಡಿದ್ದರು. ಚೀಟಿ ನೋಡಿ ಅಂಬೇಡ್ಕರ್‌ ಬ್ರಿಟೀಷ್‌ ಸರಕಾರದಿಂದ ಕೇಸು ದಾಖಲಿಸಿಕೊಂಡಿದ್ದ ಕಕ್ಷಿದಾರರ ಪರವಾಗಿ ವಾದ ಮುಂದುವರಿಸಿದ್ದರು. ಚೀಟಿಯಲ್ಲಿ ತನ್ನ ಮಡದಿ ಮೃತಪಟ್ಟಿರುವ ಸುದ್ದಿಯಿದ್ದರೂ ಅಂತಹ ಸಂದರ್ಭದಲ್ಲೂ ಎದೆಗುಂದದೆ ಸ್ವಾತಂತ್ರ್ಯ ಹೋರಾಟಗಾರರ ಪರವಾಗಿ ನ್ಯಾಯಾಲದಲ್ಲಿ ವಾದ ಮಂಡಿಸಿದ ದೇಶದ ಶ್ರೇಷ್ಠ ವಕೀಲರಲ್ಲಿ ಅಂಬೇಡ್ಕರ್‌ ಓರ್ವರು ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.‌

ಮಾದರಿ
ಅಂಬೇಡ್ಕರ್ ಕಾರ್ಯಶೈಲಿ, ಬದುಕಿನ ಬದ್ಧತೆ, ನಡವಳಿಕೆ ಇಡೀ ಜಗತ್ತಿಗೆ ಮಾದರಿ. ಅಂತಹ ವ್ಯಕ್ತಿಯ ಹೆಸರಿನಲ್ಲಿ ಎರಡೂವರೆ ಸಾವಿರ ಚದರಡಿ ಜಾಗದಲ್ಲಿ 6 ಕೋ. ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಭವನದ ಸದುಪಯೋಗವನ್ನು ಪ್ರತಿಯೊಬ್ಬ ವ್ಯಕ್ತಿಯು ಪಡೆದುಕೊಳ್ಳವಂತಾಗಬೇಕು. ಹಿಂದುಳಿದ ವರ್ಗದವರ ಅಭಿವೃದ್ಧಿಗಾಗಿ ಸರಕಾರ ವಿವಿದ ಯೋಜನೆಗಳನ್ನು ಜಾರಿಗೊಳಿಸಿದೆ. ಅದಕ್ಕೆ ಪ್ರತಿಫಲವಾಗಿ ಇಂದು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನತೆ ಉನ್ನತ ಮಟ್ಟದ ಹುದ್ದೆಯನ್ನು ಅಲಂಕರಿಸುತ್ತಿರುವುದು ಸಂತಸದ ವಿಚಾರವೆಂದು ಕೋಟ ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಸಚಿವ ಸುನೀಲ್‌ ಕುಮಾರ್‌, ಕಾರ್ಕಳದಲ್ಲಿ ಒಂದು ಸುಸಜ್ಜಿತ ಅಂಬೆಡ್ಕರ್‌ ಭವನ ನಿರ್ಮಾಣವಾಗಬೇಕೆನ್ನುವುದು ಹಲವು ವರ್ಷಗಳ ಕನಸು. ವಿಶೇಷವಾಗಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರ ಕಾರ್ಯಕ್ರಮಗಳಿಗೆ ಒಂದು ವ್ಯವಸ್ಥಿತವಾದ ಕಟ್ಟಡದ ಅಗತ್ಯವನ್ನು ಮನಗಂಡು ಕಾರ್ಕಳ ನಗರದ ಕಾಬೆಟ್ಟುವಿನಲ್ಲಿ ಒಂದೂವರೆ ವರ್ಷಗಳ ಹಿಂದೆ 1 ಎಕರೆ ಜಾಗ ಕಾದಿರಿಸಲಾಗಿತ್ತು. ಸರಕಾರದಿಂದ ಈ ಹಿಂದೆ 1.5 ಕೋಟಿ ಮಂಜೂರಾಗಿ ಟೆಂಡರ್‌ ಪ್ರಕ್ರಿಯೆ ನಡೆದಿತ್ತು. ಈ ಅನುದಾನದಲ್ಲಿ ಉದ್ದೇಶಿತ ಯೋಜನೆ ನಡೆಸಲು ಸಾಧ್ಯವಾಗುವುದಿಲ್ಲ. ಹೆಚ್ಚಿನ ಅನುದಾನ ಒದಗಿಸಿಕೊಡುವಂತೆ ಸಚಿವ ಶ್ರೀನಿವಾಸ ಪೂಜಾರಿ ಅವರಲ್ಲಿ ವಿನಂತಿಸಿದಾಗ 6 ಕೋ. ರೂ. ಅನುದಾನ ಮಂಜೂರುಗೊಳಿಸಿದ್ದಾರೆ ಎಂದು ತಿಳಿಸಿದರು.

7ತಿಂಗಳಲ್ಲಿ ಕಾಮಗಾರಿ ಪೂರ್ಣ
ಅಂಬೇಡ್ಕರ್‌ ಭವನದಲ್ಲಿ 2 ಸಭಾಂಗಣ, ಊಟದ ಹಾಲ್‌, ಗ್ರಂಥಾಲಯದ ವ್ಯವಸ್ಥೆ, 10 ಸುಸಜ್ಜಿತ ಕೋಟೆಗಳಿರಲಿದೆ. 6-7 ತಿಂಗಳಲ್ಲಿ ಕೆಲಸ ಪೂರ್ಣಗೊಳ್ಳಲಿದೆಯೆಂದು ಸುನೀಲ್‌ ಕುಮಾರ್‌ ತಿಳಿಸಿದರು.

ಪ್ರಾಸ್ತವಿಕ ಮಾತುಗಳನ್ನಾಡಿದ ತಾ.ಪಂ. ಮಾಜಿ ಅಧ್ಯಕ್ಷ ಸುಂದರ ಬಿ., ಸಚಿವ ಸುನೀಲ್‌ ಕುಮಾರ್‌ ಕಾರ್ಕಳದ ಸಮಗ್ರ ಅಭಿವೃದ್ಧಿಗಾಗಿ ಪಣತೊಟ್ಟು ಕಾರ್ಯನಿರ್ವಹಿಸುತ್ತಿದ್ದಾರೆ. ಸಮುದಾಯ ಭವನಗಳಿಗೆ ಹೆಚ್ಚಿನ ಅನುದಾನ, ಸೂಕ್ತ ಮಾರ್ಗದರ್ಶನ ನೀಡುವ ಮೂಲಕ ಎಲ್ಲ ಸಮುದಾಯಗಳಿಗೂ ಬೆನ್ನೆಲುಬಾಗಿ ನಿಂತಿದ್ದಾರೆ. ಕ್ಷೇತ್ರದ ಜನತೆ ಅವರೊಂದಿಗೆ ನಿಲ್ಲಬೇಕೆಂದರು.

ಸನ್ಮಾನ
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗುಡ್ಡಪಾಣರ, ದೈವನರ್ತಕರಾದ ಜಗ್ಗಣ್ಣ, ಬೋಳ ನಾರಾಯಣ, ಯಕ್ಷಗಾನ ಕಲಾವಿದ ಸುರೇಶ್‌, ಚಲನಚಿತ್ರ ನಟ ಸುಜಿತ್‌ ಪಳ್ಳಿ, ರಂಗಭೂಮಿ ಕಲಾವಿದರಾದ ಸುಭಾಷ್‌ ಕಲ್ಯಾ, ಹರಿಪ್ರಸಾದ್‌ ನಂದಳಿಕೆ, ಚಿತ್ರಕಲೆ ಕಲಾವಿದ ಸಂತೋಷ್‌ ಮಾಳ, ನಾದಸ್ವರ ಮಾಳ ಮೋಹನ್‌, ತುಳು-ಕನ್ನಡ ಚಲನಚಿತ್ರ ನಟ ರಾಜೇಶ್‌ ದಾನಶಾಲೆ, ಕ್ರೀಡಾಪಟು ಹರಿಣಿ ಕೊಳಕೆ ಇರ್ವತ್ತೂರು, ಕರಾಟೆ ಪಟು ಪವನ್‌ ನಕ್ರೆ, ಎಂ.ಬಿ.ಬಿ.ಎಸ್‌. ಪದವೀಧರ ಕಾರ್ತಿಕ್‌, ವೈಟ್‌ ಲಿಫ್ಟಿಂಗ್‌ ಕ್ರೀಡಾ ಪಟು ದೀಪಾ ರೆಂಜಾಳ ಅವರನ್ನು ಸನ್ಮಾನಿಸಲಾಯಿತು.

ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಅನಿತಾ ವಿ. ಮಡ್ಲೂರು ಕೆ. ಜಿ. ಎಸ್.‌, ಕರ್ನಾಟಕ ಗೇರು ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷ ಮಣಿರಾಜ ಶೆಟ್ಟಿ, ಪುರಸಭಾ ಅಧ್ಯಕ್ಷೆ ಸುಮಾ ಕೇಶವ್‌, ಪುರಸಭಾ ಮುಖ್ಯಾಧಿಕಾರಿ ರೂಪಾ ಶೆಟ್ಟಿ, ತಹಶೀಲ್ದಾರ್‌ ಪ್ರದೀಪ್‌ ಕುರ್ಡೇಕರ್‌, ತಾ. ಪಂ. ಕಾರ್ಯನಿರ್ವಹಣಾಧಿಕಾರಿ ಗುರುದತ್ತ್‌ ಎಂ. ಎನ್‌., ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಾಘವೇಂದ್ರ ವೆರ್ಣೇಕರ, ಕ. ವ. ಶಿ. ಸ. ಸಂ. ಅಧೀಕ್ಷಕ ಅಭಿಯಂತರ ಹೆಚ್‌. ಎಲ್.‌ ವೆಂಕಟೇಶ್‌, ಸಹಾಯಕ ಕಾರ್ಯಪಾಲಕ ಅಭಿಯಂತರ ರಾಮು ವೈ. ಹೆಚ್‌., ಕೊರಗ ಪಳ್ಳಿ, ಮುಗೇರ ಸಂಘದ ಪ್ರಮುಖ ಶ್ಯಾಮ್ ಕಾಬೆಟ್ಟು, ಆದಿ ದ್ರಾವೀಡ ಸಮಾಜದ ಪ್ರಮುಖ ಬೊಗ್ಗು ಪರಪ್ಪಾಡಿ, ಪರವ ಸಮುದಾಯದ ಪ್ರಮುಖ ಚುಕುಡ ಪರವ, ರತ್ನಾಕರ್ ಪಳ್ಳಿ, ನಲಿಕೆ ಸಮುದಾಯದ ಪ್ರಮುಖ ಬಾಬು ನಲಿಕೆ, ಶಾಂತ ಶಿವಪುರ ಉಪಸ್ಥಿತರಿದ್ದರು. ಎನ್.‌ ಡಿ. ಬಾಬು ಸ್ವಾಗತಿಸಿ, ನಾಗೇಶ್‌ ಪಳ್ಳಿ ಕಾರ್ಯಕ್ರಮ ನಿರೂಪಿಸಿದರು. ಸತೀಶ್‌ ಇರ್ವತ್ತೂರು ವಂದಿಸಿದರು.ಅ

LEAVE A REPLY

Please enter your comment!
Please enter your name here

Most Popular

error: Content is protected !!